ರಾಯಲ್ ಅತಿಥಿ ನಿರೀಕ್ಷೆಯಲ್ಲಿ ನಟ ಕಿಶೋರ್

Posted By:
ಕನ್ನಡ ಚಿತ್ರರಂಗದಲ್ಲಿ ನಟ ಕಿಶೋರ್ ಗತ್ತು ಎಲ್ಲರಿಗೂ ಗೊತ್ತು. ವಿಲನ್ ಆಗಿರಲಿ ಅಥವಾ ಪೊಲೀಸ್ ಪಾತ್ರವಾಗಲಿ... ಕಿಶೋರ್ ನಟಿಸಿದರೆ ಖದರೇ ಬೇರೆ. ಅಂತಹ ಠೀವಿ, ಗಾಂಭೀರ್ಯ, ತಾಕತ್ತು, ವರ್ಚಸ್ಸಿನಿಂದ ಕಿಶೋರ್ ಫೇಮಸ್. ಥೇಟ್ ರಾಯಲ್ ಎನ್‌ಫೀಲ್ಡ್ ಬುಲೆಟಿನಂತೆ!

ಇತ್ತೀಚೆಗೆ ದೈನಿಕವೊಂದಕ್ಕೆ ತನ್ನ ಬುಲೆಟ್ ಪ್ರೀತಿ ಕುರಿತು ಮಾಹಿತಿಯನ್ನು ಕಿಶೋರ್ ಹಂಚಿಕೊಂಡಿದ್ದಾರೆ. ಕಿಶೋರ್ ಮತ್ತು ಅವರ ಪತ್ನಿಗೆ ಬುಲೆಟ್ ಬೈಕೆಂದರೆ ಇಷ್ಟವಂತೆ. ಅದರ ಸೌಂಡ್ ಅಂದ್ರೆ ರೋಮಾಂಚನ. ಎಷ್ಟು ದೂರ ಪ್ರಯಾಣಿಸಲಿದ್ದರೂ ಬುಲೆಟ್ ಮೂಲಕವೇ ಸವಾರಿ ಹೊರಡೋದು ಕಿಶೋರ್ ಸ್ಪೆಷಲ್.

ಕಿಶೋರ್ ಬಳಿ ಈಗ 1994ರ ರಾಯಲ್ ಎನ್ ಫೀಲ್ಡ್ 350 ಸಿಸಿ ಬುಲೆಟ್ ಇದೆ. ಅದನ್ನು ತನ್ನ ಅಭಿರುಚಿಗೆ ತಕ್ಕಂತೆ ಮಾರ್ಪಾಡು ಮಾಡಿಕೊಂಡಿದ್ದಾರೆ. ಕಿಶೋರ್ ಕುಟುಂಬಕ್ಕೆ ಇನ್ನೊಬ್ಬ ರಾಯಲ್ ಅತಿಥಿ ಶೀಘ್ರದಲ್ಲಿ ಆಗಮಿಸುವ ಸೂಚನೆಯಿದೆ. ಆ ಅತಿಥಿಯ ಹೆಸರು ರಾಯಲ್ ಎನ್‌ಫೀಲ್ಡ್. ಆದ್ರೆ 500ಸಿಸಿಯ ಶಕ್ತಿಶಾಲಿ ಬುಲೆಟ್.

ಕ್ಲಾಸಿಕ್ 500 ಬುಲೆಟ್ ದರ ಸುಮಾರು ಒಂದುವರೆ ಲಕ್ಷ ರುಪಾಯಿ. ಕ್ರೊಮ್ ಮತ್ತು ಸ್ಟ್ರೊಮ್ ದರ ಕ್ರಮವಾಗಿ 1.64 ಲಕ್ಷ ರು. ಮತ್ತು 1.58 ಲಕ್ಷ ರುಪಾಯಿ ಆಗಿದೆ. ಇದು 499 ಸಿಸಿಯ ಸಿಂಗಲ್ ಸಿಲಿಂಡರ್, ನಾಲ್ಕು ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಎಂಜಿನ್ ಹೊಂದಿದೆ. ಕೆಂಪು, ಕಪ್ಪು ಮತ್ತು ಹಸಿರು ಬಣ್ಣಗಳಲ್ಲಿ ಕ್ಲಾಸಿಕ್ 500 ಬುಲೆಟ್ ದೊರಕುತ್ತದೆ. ಆದರೆ ಸಿಲ್ವರ್ ಬಣ್ಣದಲ್ಲಿ ದೊರಕುವುದಿಲ್ಲ.

ದೇಶದ ರಸ್ತೆಗೆ ಇತ್ತೀಚೆಗೆ ಎರಡು ಹೊಸ ಬುಲೆಟ್ ಆಗಮಿಸಿದ್ದವು. 500 ಸಿಸಿಯ ಇವುಗಳ ಹೆಸರು ಡೆಸಾರ್ಟ್ ಸ್ಟಾರ್ಮ್ ಮತ್ತು ಕ್ಲಾಸಿಕ್ ಕ್ರೊಮ್. . ಇವೆರಡು ಸಿಂಗಲ್ ಸೀಟ್ ಬುಲೆಟ್. ಹಿಂದಿನ ಸೀಟು ಬೇಕೆಂದರೆ ಕಂಪನಿ ಜೋಡಿಸಿಕೊಡುತ್ತದೆ.

ಇದರಲ್ಲಿ ಕ್ರೊಮ್ ವಿಶಾಲವಾದ ಇಂಧನ ಟ್ಯಾಂಕ್, ವಿಶಾಲವಾದ ಮಡ್ ಗಾರ್ಡ್, ಕಲಾತ್ಮಕ ಪೇಂಟಿಂಗ್ ವಿನ್ಯಾಸದಿಂದ ಗಮನಸೆಳೆಯುತ್ತದೆ. ಸಾಮಾನ್ಯ ಬೈಕ್ ಗಳಿಗೆ ಹೋಲಿಸಿದರೆ ಎನ್ ಫೀಲ್ಡ್ ಡೆಸಾರ್ಟ್ ಸ್ಟ್ರೊಮ್ ದೈತ್ಯವಾಗಿ ಕಾಣುತ್ತದೆ. ಬುಲೆಟ್ ಪ್ರಿಯರು ಖಂಡಿತಾ ಇದಕ್ಕೊಂದು ದೃಷ್ಟಿ ಬೊಟ್ಟು ಇಡಬೇಕು. ಅಷ್ಟು ಚೆನ್ನಾಗಿದೆ. ಎರಡನೇ ವಿಶ್ವ ಮಹಾಯುದ್ದದ ಆರ್ಮಿ ಬೈಕ್ ನೂತನ ಸ್ಟ್ರೊಮ್ ಬುಲೆಟಿಗೆ ಸ್ಪೂರ್ತಿಯಾಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Kannada actor Kishore who has been enjoying success across South Indian Cinema is celebrating it by buying himself a 500cc Royal Enfield Bullet. He already owns a 1992 Royal Enfield that he has used for long trips with his wife.
Story first published: Friday, April 27, 2012, 12:35 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more