ಮಹೇಂದ್ರ ಧೋನಿಯ ರೇಸಿಂಗ್ ಟೀಮ್ ಪ್ರಕಟ

ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲಿ 'ಮಹಿ ರೇಸಿಂಗ್ ಟೀಮ್ ಇಂಡಿಯಾ' ಎಂಬ ತಂಡಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೆ ತಮ್ಮ ತಂಡಕ್ಕೆ ಇಬ್ಬರು ಹೊಸ ಚಾಲಕರರೊಂದಿಗೂ ಒಪ್ಪಂದ ಮಾಡಿಕೊಂಡಿದ್ದಾರೆ.

ಆರಂಭದಲ್ಲಿ 'ಎಂಎಸ್‌ಡಿ ಆರ್-ಎನ್ ರೇಸಿಂಗ್' ಎಂದಿದ್ದ ತಂಡದ ಹೆಸರನ್ನು 'ಮಹಿ ರೇಸಿಂಗ್ ಟೀಮ್ ಇಂಡಿಯಾ' ಎಂದು ಬದಲಾಯಿಸಲಾಗಿದೆ. ಈ ಮೂಲಕ ದೇಶದಲ್ಲಿ ಮತ್ತಷ್ಟು ರೇಸಿಂಗ್ ಪ್ರಿಯರನ್ನು ಆಕರ್ಷಿಸುವ ಗುರಿ ಹೊಂದಿದ್ದಾರೆ.

ತಮ್ಮ ನೂತನ ತಂಡಕ್ಕೆ ವಿಶ್ವ ಚಾಂಪಿಯನ್ ಕೆನಾನ್ ಸೊಫೊಗ್ಲು ಮತ್ತು ಮಾಜಿ ವಿಶ್ವ ಚಾಂಪಿಯನ್ ಫ್ಯಾಬಿಯನ್ ಫೋರೆಟ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರೈಡಿಂಗ್ ಸ್ಕೂಲ್ ತೆರೆಯುವ ಯೋಜನೆ ಹೊಂದಿರುವ ಮಹಿ, ದೇಶದ ಚಾಲಕರು ಅಂತರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯುವ ನಿರೀಕ್ಷೆ ಹೊಂದಿದ್ದಾರೆ.

ಈಗಾಗಲೇ ಹಲವು ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಿರುವ ಮಹಿ ರೇಸಿಂಗ್ ಟೀಮ್ ಇಂಡಿಯಾ ಮುಂದಿನ ವರ್ಷ ಸಾಗಲಿರುವ ವಿಶ್ವ ಸೂಪರ್ ಬೈಕ್ ಚಾಂಪಿಯನ್‌ಶಿಪ್‌ನಲ್ಲೂ ಸ್ಪರ್ಧಿಸಲಿದೆ. ಇದರಂತೆ ಮೂರು ಬಾರಿಯ ವಿಶ್ವಚಾಂಪಿಯನ್ ಸೊಫೊಗ್ಲು ಸಾನಿಧ್ಯ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ.
(ವೀಡಿಯೋಗಾಗಿ ಫೋಟೋ ಫೀಚರ್ ಕ್ಲಿಕ್ಕಿಸಿ)

ಸೂಪರ್ ಬೈಕ್ ಚಾಂಪಿಯನ್‌ಶಿಪ್ ಗುರಿ

ಸೂಪರ್ ಬೈಕ್ ಚಾಂಪಿಯನ್‌ಶಿಪ್ ಗುರಿ

2012ರ ಮಧ್ಯಂತರ ಅವಧಿಯಲ್ಲಿ ಬೈಕ್ ರೇಸಿಂಗ್ ಯುಗಕ್ಕೆ ಕಾಲಿರಿಸಿದ್ದ ಧೋನಿ ತಂಡವು 2013ನೇ ಸಾಲಿನಲ್ಲಿ ಪೂರ್ಣವಧಿಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದು, ಸೂಪರ್ ಬೈಕ್ ಚಾಂಪಿಯನ್‌ಶಿಪ್ ಗೆಲ್ಲುವ ಗುರಿ ಹೊಂದಿದೆ.

ಸ್ಪರ್ದೆಯಲ್ಲಿ ಭಾಗಿಯಾಗಲು ಮಹಿ ಉತ್ಸುಕತೆ

ಸ್ಪರ್ದೆಯಲ್ಲಿ ಭಾಗಿಯಾಗಲು ಮಹಿ ಉತ್ಸುಕತೆ

ಇನ್ನು ಕುತೂಹಲಕಾರಿ ಸಂಗತಿ ಏನೆಂದರೆ ಸ್ವತ: ಟೀಮ್ ಇಂಡಿಯಾ ನಾಯಕ ಮಹಿ ಅವರೇ ಬೈಕ್ ರೇಸಿಂಗ್‌ನಲ್ಲಿ ಸ್ಪರ್ಧಿಸಲು ತುಂಬಾನೇ ಉತ್ಸುಕರಾಗಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಸ್ಪೋರ್ಟ್ ಹಾಗೂ ಸೂಪರ್‌ಸ್ಪೋರ್ಟ್ ವಿಭಾಗದಲ್ಲಿ ಸ್ಪರ್ಧಿಸಲು ಮಹಿ ಯೋಜನೆ ಹಾಕಿಕೊಂಡಿದ್ದಾರೆ.

ಚಾಂಪಿಯನ್ ಚಾಲಕರೊಂದಿಗೆ ಒಪ್ಪಂದ

ಚಾಂಪಿಯನ್ ಚಾಲಕರೊಂದಿಗೆ ಒಪ್ಪಂದ

ಪ್ರಸಕ್ತ ಸಾಲಿನಲ್ಲೇ ಚಾಂಪಿಯನ್ ಗೆಲ್ಲುವುದು ಮಹಿ ರೇಸಿಂಗ್ ಟೀಮ್ ಇಂಡಿಯಾದ ಗುರಿಯಾಗಿದೆ. ಈ ನಿಟ್ಟಿನಲ್ಲಿ ವಿಶ್ವ ಚಾಂಪಿಯನ್ ಕೆನಾನ್ ಸೊಫೊಗ್ಲು ಮತ್ತು ಮಾಜಿ ವಿಶ್ವ ಚಾಂಪಿಯನ್ ಫ್ಯಾಬಿಯನ್ ಫೋರೆಟ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಹಿ ತಂಡವು ಈಗಾಗಲೇ ಉತ್ತಮ ನಿರ್ವಹಣೆ ನೀಡುತ್ತಾ ಬಂದಿವೆ.

ತಂಡದ ಬಗ್ಗೆ ಮಹಿ ಹೆಮ್ಮೆ

ತಂಡದ ಬಗ್ಗೆ ಮಹಿ ಹೆಮ್ಮೆ

ತಮ್ಮ ತಂಡದ ಬಗ್ಗೆ ಮಹಿಗೆ ತುಂಬಾನೇ ಹೆಮ್ಮೆಯಿದೆ. ಇವೆಲ್ಲವೂ ತಂಡದ ವಿಚಾರದಲ್ಲಿ ಅಡಗಿದ್ದು, ಉತ್ತಮ ತಂಡ ಹೊಂದಿರಬೇಕಾಗಿದೆ. ಸ್ಪರ್ದಿಗಳು ಉತ್ತಮ ನಿರ್ವಹಣೆ ನೀಡಬೇಕಾಗಿದೆ. ರೇಸಿಂಗ್‌ನಲ್ಲೂ ಇದು ಅನ್ವಯವಾಗುತ್ತದೆ. ನೀವು ಗುಣಮಣ್ಣದ ರೈಡರ್‌ಗಳನ್ನು, ತಂಡವನ್ನು ಹಾಗೂ ತಾಂತ್ರಿಕ ತಜ್ಞರನ್ನು ಹೊಂದಿರಬೇಕಾಗುತ್ತದೆ. ರೇಸಿಂಗ್ ಎಂಬುದು ಡ್ರೈವರುಗಳ ಹೊರತುಪಡಿಸಿ ತಾಂತ್ರಿಕ ನೆರವಿನ ಅಗತ್ಯವಿದೆ ಎಂದಿದ್ದಾರೆ.

ನನಸಾಯ್ತು ಮಹಿ ಕನಸು (ವೀಡಿಯೋ)

ದೇಶದಲ್ಲಿ ಡ್ರೈವಿಂಗ್ ಸ್ಕೂಲ್ ಆರಂಭಿಸುವುದು ನನ್ನ ಕನಸಾಗಿತ್ತು. ಇದೀಗ ರೇಸಿಂಗ್ ತಂಡ ಕಟ್ಟುವುದರೊಂದಿಗೆ ಕನಸನ್ನು ಹಿಂಬಾಲಿಸಿದಂತಾಗಿದೆ. ಅಲ್ಲದೆ ದೇಶದ ಮೋಟಾರ್ ರೇಸಿಂಗ್‌ಗೆ ಉತ್ತೇಜನ ನೀಡಲು ಬಯಸುತ್ತಿರುವ ಧೋನಿ ತಮ್ಮ ಈ ತಂಡ ಸರಿಯಾದ ದಿಶೆಯತ್ತ ಸಾಗುತ್ತಿದೆ ಎಂಬುದನ್ನು ನಂಬಿಕೊಂಡಿದ್ದಾರೆ. ಮುಂಬರುವ ವರ್ಷಗಳಲ್ಲಿ ಮಹಿ ರೇಸಿಂಗ್ ಟೀಮ್ ಟೀಮ್ ಇಂಡಿಯಾ ದೇಶದ ರೈಡರ್‌ಗಳನ್ನು ಹೊಂದಿದ್ದರೆ ಯಾರು ಅಚ್ಚರಿಪಡಬೇಕಾಗಿಲ್ಲ ಎಂದು ಧೋನಿ ತಿಳಿಸಿದ್ದಾರೆ.

Most Read Articles

Kannada
English summary
Dhoni's team made its debut in the middle of the 2012 season and will participate in the full season in 2013. Dhoni is interested to participate in the Sport and Supersport categories in the world championship too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X