ಹೊಸ ಟಿವಿಎಸ್ ಅಪಾಚಿ ಮುಂದಿನ ವಾರ ರಸ್ತೆಗೆ

Posted By:

ನೂತನ ಟಿವಿಎಸ್ ಅಪಾಚಿ ಆರ್‌ಟಿಆರ್ ಏಪ್ರಿಲ್ 23ರಂದು ರಸ್ತೆಗಿಳಿಯಬೇಕಿತ್ತು. ಈ ಕುರಿತು ಕಂಪನಿಯು ಫೇಸ್ ಬುಕ್ ಪುಟದಲ್ಲೂ ಪ್ರಕಟಿಸಿತ್ತು. ಆದರೆ ಇದೀಗ ಕಂಪನಿಯು ಕೆಲವು ದಿನಗಳ ನಂತರ ಅಪಾಚಿ ಪರಿಚಯಿಸಲು ನಿರ್ಧರಿಸಿದೆ.

ಟಿವಿಎಸ್ ಫೇಸ್‌ಬುಕ್ ಪುಟದಲ್ಲಿ ಫೇಸ್‌ಲಿಫ್ಟೆಡ್ ಅಪಾಚಿ ಬೈಕ್ ಪರಿಚಯಿಸುವ ದಿನ ಪ್ರಕಟಿಸಿತ್ತು. ಆದರೆ ಇದೀಗ ಹೊಸ ಪೋಸ್ಟ್‌ನಲ್ಲಿ ಡೀಲರ್ಷಿಪ್ ಮಳಿಗೆಗಳಿಗೆ ಈ ಬೈಕ್ ಈ ವಾರದ ಅಂತ್ಯಕ್ಕೆ ತಲುಪುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ. ಹೀಗಾಗಿ ಮುಂದಿನ ವಾರ ಅಪಾಚಿ ಅನಾವರಣಗೊಳ್ಳುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button

ಮೈಸೂರು ಘಟಕದಿಂದ ನೂತನ 2012ರ ಆವೃತ್ತಿಯ ಟಿವಿಎಸ್ ಬೈಕನ್ನು ಈ ವಾರಾಂತ್ಯದಲ್ಲಿ ಡೀಲರುಗಳಿಗೆ ತಲುಪಿಸಲಿದ್ದೇವೆ. ಈ ಕುರಿತು ಶೀಘ್ರದಲ್ಲಿ ಪತ್ರಿಕಾ ಪ್ರಕಟಣೆ ನೀಡಲಿದ್ದೇವೆ ಎಂದು ಫೇಸ್‌ಬುಕ್ ಪುಟದಲ್ಲಿ ಟಿವಿಎಸ್ ಬರೆದಿದೆ.

ಟಿವಿಎದ್ ಅಪಾವಿ ಆರ್ ಟಿಆರ್ ಪರಿಷ್ಕೃತ ಆವೃತ್ತಿ ಇದಾಗಿದೆ. ಈಗಾಗಲೇ ಹೊಸ ಆವೃತ್ತಿಯ ಸ್ಪೈ ಶಾಟ್ಸ್ ಚಿತ್ರಗಳು ಹರಿದಾಡುತ್ತಿವೆ. ಚಿತ್ರದಲ್ಲಿ ನೋಡಿದಾಗ ಇದು ಬಜಾಜ್ ಪಲ್ಸರ್ 220 ಬೈಕಿನಂತೆ ಕಾಣುತ್ತದೆ.

ಹೊಸ ಅಪಾಚಿ ಬೈಕಿನ ಎಂಜಿನಿನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಹೀಗಾಗಿ ಅಶ್ವಶಕ್ತಿ ಮತ್ತು ಟಾರ್ಕ್ ಪವರಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಹೊಸ ಅಪಾಚಿ ಬೈಕಿನ ದರದ ಕುರಿತು ಕಂಪನಿಯ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ.

English summary
The new TVS Apache RTR 2012 launch, which was slated to happen today, seems to have been postponed to a later date. The Indian motorcycle manufacturer has now come out with a statement on Facebook saying that the company has started despatches of the new TVS Apache RTR from its Mysore plant.
Story first published: Tuesday, April 24, 2012, 10:21 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark