ಬುಲೆಟ್ ರಾಣಿಯ ಕ್ಯಾಟ್‌ವಾಕ್ ಸೂಪರ್

By Nagaraja

ರಾಯನ್ ಎನ್‍ಫೀಲ್ಡ್ ಕೆಫೆ ರೇಸರ್ ಬುಲೆಟನ್ನು ಮೊದಲ ಬಾರಿಗೆ 2010 ದೆಹಲಿ ಆಟೋ ಎಕ್ಸ್ ಪೋದಲ್ಲಿ ಕಾನ್ಸೆಪ್ಟ್ ರೂಪದಲ್ಲಿ ಪರಿಚಯಿಸಲಾಗಿತ್ತು. ಆ ಬಳಿಕ 2012ರ ದೆಹಲಿ ಆಟೋ ಎಕ್ಸ್ ಪೋದಲ್ಲೂ ಮತ್ತೆ ಕಾಣಿಸಿಕೊಂಡದ್ದ ಈ ಬಹುನಿರೀಕ್ಷಿತ ಬೈಕ್ ಯಾವಾಗ ಲಾಂಚ್ ಆಗಲಿದೆ ಎಂಬುದರ ಬಗ್ಗೆ ಸ್ಪಷ್ಟ ಸೂಚನೆ ಲಭಿಸಿರಲಿಲ್ಲ.

ಆದರೆ ಬಲ್ಲ ಮೂಲಗಳ ಪ್ರಕಾರ ಅಂತಿಮ ಹಂತದಲ್ಲಿರುವ ಈ ಬುಲೆಟ್ ರಾಣಿ ಮುಂದಿನ ವರ್ಷ ದೇಶದ ರಸ್ತೆಗಿಳಿಯಲಿದೆ. ಈಗಾಗಲೇ ಮಿಲಾನ್‌ EICMA ಆಟೋ ಶೋದಲ್ಲಿ ಪ್ರತ್ಯಕ್ಷಗೊಂಡಿರುವ ಈಕೆ ಕ್ಯಾಟ್ ವಾಕ್ ಕೂಡಾ ನಡೆಸಿದ್ದಾಳೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ 535 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಕ್ಲಾಸಿಕ್ 500, ಥಂಡರ್‌ಬರ್ಡ್ 500 ಹಾಗೂ ಥಂಡರ್‌ಬರ್ಡ್ 350 ಸರಣಿಯಲ್ಲಿ ಕಾಣಿಸಿಕೊಳ್ಳಲಿರುವ ಈ ಬುಲೆಟ್‌ಗೆ ಕೆಫೆ ರೇಸರ್ 535 ಎಂದು ಹೆಸರಿಸಿದರೆ ಯಾರೂ ಅಚ್ಚರಿಪಡಬೇಕಾಗಿಲ್ಲ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ಮಿಲಾನ್‌ನಲ್ಲಿ ಸಾಗಿದ EICMA ಮೋಟಾರ್ ಶೋದಲ್ಲಿ ಬುಲೆಟ್ ರಾಣಿ ರಾಯಲ್ ಎನ್‌ಫೀಲ್ಡ್‌ನ ಕೆಫೆ ರೇಸರ್ ಕ್ಯಾಟ್ ವಾಕ್ ನಡೆಸಿದ್ದಾರೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ಕಳೆದ ಕೆಲವು ವರ್ಷಗಳಿಂದ ಕೆಫೆ ರೇಸರ್ ಬೈಕನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರಸ್ತುತ ಫಿನಿಶಿಂಗ್ ಟಚ್‌ನಲ್ಲಿರುವ ಈ ಬೈಕ್ ಮುಂದಿನ ವರ್ಷ ದೇಶದ ರಸ್ತೆಗಿಳಿಸುವ ಸಾಧ್ಯತೆಯಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ರಾಯನ್ ಎನ್‌ಫೀಲ್ಡ್ ಕೆಫೆ ರೇಸರ್ 535 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ದೊಡ್ಡದಾದ ಫ್ರಂಟ್ ಡಿಸ್ಕ್ ಡ್ರೈವಿಂಗ್ ಸುಗಮವಾಗಿಸಲಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ರಾಯಲ್ ಎನ್‌ಫಿಲ್ಡ್ ಕೆಫೆ ರೇಸರ್ ಫ್ಯೂಯಲ್ ಟ್ಯಾಂಕ್ ವಿಭಿನ್ನವಾಗಿದೆ. ಹಾಗೆಯೇ ತನ್ನದೇ ಆದ ಶೈಲಿ ಹೊಂದಿರಲಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ರಾಯಲ್ ಎನ್‌ಫಿಲ್ಡ್ ಕೆಫೆ ರೇಸರ್ 353 ಸ್ಟಾಂಡರ್ಡ್ ಆಯ್ಕೆಯಲ್ಲಿ ಲಭ್ಯವಿರಲಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಕ್ಲಾಸಿಕ್ ವಿನ್ಯಾಸ ಕೆಫೆ ರೇಸರ್‌ನಲ್ಲೂ ಮುಂದುವರಿಯಲಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ರಿಯರ್ ವೀಲ್ಸ್‌ಗಳಿಗೂ ಡಿಸ್ಕ್ ಬ್ರೇಕ್‌ಗಳನ್ನು ಆಳವಡಿಸಲಾಗಿದೆ. ಇದು ಕೆಫೆ ರೇಸರ್ ರೇಸಿಂಗ್ ವ್ಯಕ್ತಿತ್ವದ ಸಂಕೇತವಾಗಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ಕೆಫೆ ರೇಸರ್ ಪ್ರಮುಖವಾಗಿಯೂ ರೇಸ್ ಟ್ರ್ಯಾಕ್‌ಗಳಲ್ಲಿ ಪ್ರಯೋಗಿಸಲಾಗಿದೆ. ಹಾಗೆಯೇ ದೇಶದ ರಫ್ ರೋಡ್‌ಗಳಲ್ಲೂ ಉತ್ತಮ ಡ್ರೈವಿಂಗ್‌ಗೆ ನೆರವಾಗಲಿದೆ.

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್

ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ ದೇಶದ ಬಹುನಿರೀಕ್ಷಿತ ಬೈಕ್ ಆಗಿದೆ. ಹಾಗಾಗಿ ಈ ಬುಲೆಟ್ ರಾಣಿಯ ಆಗಮನಕ್ಕಾಗಿ ಕಾದಿರಿ.

Image Source: Image Shack

Most Read Articles

Kannada
English summary
We had first seen the Royal Enfield Cafe Racer way back in the 2010 Delhi auto Expo as a concept. The Cafe Racer was on display again during the 2012 Delhi Auto Expo but Royal Enfield had not revealed when it will launch its latest bike in India
Story first published: Wednesday, December 12, 2012, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X