ಸುಜುಕಿ ಬೈಕ್ ಮಾರಾಟ ಶೇಕಡ 30ರಷ್ಟು ಹೆಚ್ಚಳ

Posted By:
ಸುಜುಕಿ ಮೋಟರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಳೆದ ತಿಂಗಳು ದೇಶದಲ್ಲಿ ಒಟ್ಟು 37,336 ಯುನಿಟ್ ದ್ವಿಚಕ್ರವಾಹನಗಳನ್ನು ಮಾರಾಟ ಮಾಡಿದ್ದು ಶೇಕಡ 30ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸುಜುಕಿ ದ್ವಿಚಕ್ರ ವಾಹನ ಮಾರಾಟ 28,754 ಯುನಿಟ್ ಆಗಿತ್ತು.

"ಇತ್ತೀಚೆಗೆ ಮಾರುಕಟ್ಟೆಗೆ ಬಂದ ಸುಜುಕಿ ಸ್ವಿಸ್ 125 ಸೇರಿದಂತೆ ಕಂಪನಿಯ ಎಲ್ಲಾ ಉತ್ಪನ್ನಗಳು ಅತ್ಯುತ್ತಮವಾಗಿ ಮಾರಾಟ ಕಂಡಿದೆ. ಗ್ರಾಹಕರಿಗೆ ನಮ್ಮ ಉತ್ಪನ್ನಗಳು ತೃಪ್ತಿತಂದಿದೆ ಎನ್ನುವುದನ್ನು ಮಾರಾಟ ಹೆಚ್ಚಳ ಸೂಚಿಸುತ್ತಿದೆ" ಎಂದು ಕಂಪನಿಯ ಉಪಾಧ್ಯಕ್ಷರಾದ ಅತುಲ್ ಗುಪ್ತಾ ಹೇಳಿದ್ದಾರೆ.

ಸ್ವಿಸ್ ಸ್ಕೂಟರ್ ಬಗ್ಗೆ: ಸುಜುಕಿ ಸ್ವಿಸ್, 4 ಸ್ಟ್ರೋಕ್, 125 ಸಿಸಿ ಎಂಜಿನ್ ಹೊಂದಿದ್ದು 8.58 ಹಾರ್ಸ್ ಪವರ್ ಮತ್ತು 9 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಈ ಸ್ಕೂಟರ್ ಪ್ರತಿಲೀಟರಿಗೆ ಸುಮಾರು 50 ಕಿ.ಮೀ. ಮೈಲೇಜ್ ನೀಡುತ್ತದೆ. ಎಕ್ಸ್ ಶೋರೂಂ ದರ: 45,431 ರುಪಾಯಿ.

English summary
Suzuki Motorcycle India Pvt Ltd reported 30 per cent increase in February 2012 sales. Company sold 37,336 units in February 2012.
Story first published: Friday, March 2, 2012, 14:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark