ವೆಸ್ಪಾ ಸ್ಕೂಟಿಯಂಗಡಿಗೆ ಹೋಗಿ ಸ್ಪೆಷಲ್ ಕಾಫಿ ಕುಡಿಯೋಣ್ವ?

Posted By:

ವಾಹನ ಕಂಪನಿಗಳು ಈಗ ಕಾರು, ಬೈಕ್ ಮಾರೋದನ್ನು ಬಿಟ್ಟು ಚಹಾ, ಕಾಫಿ ಮಾರೋಕೆ ಶುರು ಮಾಡಿಬಿಟ್ಟಿವೆ. ಈಗಾಗಲೇ ಫಿಯೆಟ್ ಕೆಫೆ, ಮರ್ಸಿಡಿಸ್ ಬೆಂಝ್ ಕೆಫೆ ಆರಂಭವಾಗಿದೆ. ಇದೀಗ ದೇಶದಲ್ಲಿ ಕೆಫೆ ಸರಣಿ ತೆರೆಯಲು ವೆಸ್ಪಾ ಸ್ಕೂಟರ್ ಕಂಪನಿ ನಿರ್ಧರಿಸಿದೆ. ಇಲ್ಲಿ ಸ್ಕೂಟರ್ ಬೇಕಾದ್ರೂ ಖರೀದಿಸಬಹುದು ಅಥವಾ ಚಹಾ, ಕಾಫಿ ಕುಡಿದು ವಾಪಸ್ ಬರಬಹುದು.

To Follow DriveSpark On Facebook, Click The Like Button

ವೆಸ್ಪಾ ಸ್ಕೂಟರ್ ಇತ್ತೀಚೆಗೆ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಗೆ ಮರು ಪ್ರವೇಶಿಸಿದೆ.  ದೆಹಲಿ ವಾಹನ ಪ್ರದರ್ಶನದಲ್ಲಿ ಅನಾವರಣಗೊಳಿಸಿದ್ದ ವೆಸ್ಪಾ ಎಲ್ಎಕ್ಸ್ 125 ಸ್ಕೂಟರ್ ಈಗ ಬೆಂಗಳೂರು ಸೇರಿದಂತೆ ದೇಶದಾದ್ಯಂತ ದೊರಕುತ್ತಿದೆ.

ಹತ್ತರೊಟ್ಟಿಗೆ ಹನ್ನೊಂದು ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಲು ಇಚ್ಚಿಸುವುದಿಲ್ಲವೆಂದು ಪಿಯಾಜಿಯೊ ಹೇಳಿದೆ. ಕಂಪನಿಯು ವೆಸ್ಪಾ ಬ್ರಾಂಡನ್ನು ಜೀವನ ಶೈಲಿ ಸ್ಕೂಟರಾಗಿ ಪರಿಗಣಿಸಿದ್ದು, ಬ್ರಾಂಡ್ ಐಡೆಂಟೆಟಿ ಹೆಚ್ಚಿಸಲು ವಿನೂತನ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದೆ. ಇದರ ಮೊದಲ ಭಾಗವಾಗಿ ಕಂಪನಿಯು ವೆಸ್ಪಾ ಕೆಫೆ ತೆರೆಯಲಿದೆ.

ನಗರದ ಯುವಕ ಯುವತಿಯರನ್ನು ಗಮನದಲ್ಲಿಟ್ಟುಕೊಂಡು ವೆಸ್ಪಾ ಎಲ್ಎಕ್ಸ್ 125 ಸ್ಕೂಟರನ್ನು ಕಂಪನಿಯು ಇತ್ತೀಚೆಗೆ ಪರಿಚಯಿಸಿತ್ತು. ನಗರಗಳಲ್ಲಿ ಕಾಫಿ ಡೇ, ಕಾಫಿ ಕೆಫೆ ಸಂಸ್ಖತಿ ಹೆಚ್ಚಾಗಿರುವುದರಿಂದ ವೆಸ್ಪಾ ಶೋರೂಂಗಳಲ್ಲೇ ವೆಸ್ಪಾ ಕೆಫೆ ತೆರೆಯಲು ಕಂಪನಿ ನಿರ್ಧರಿಸಿದೆ. ವೆಸ್ಪಾ ಸ್ಕೂಟರ್ ಮಾಲಿಕರಿಗಂತೂ ತಮ್ಮ ಅನುಭವ ಹಂಚಿಕೊಳ್ಳಲು ಇದು ಸೂಕ್ತ ತಾಣವೆಂದು ಕಂಪನಿ ಹೇಳಿದೆ.

ಈ ಲೇಖನದಲ್ಲಿ ಬಳಸಲಾಗಿರುವ ಚಿತ್ರವನ್ನು ವೆಸ್ಪಾ ಫೇಸ್ ಬುಕ್ ನಲ್ಲಿ ಷೇರ್ ಮಾಡಿದ್ದು, ನೂತನ ಫಿಯೆಟ್ ಕೆಫೆ ಹೀಗಿರಲಿದೆ ಎಂದಿದೆ. ವೆಸ್ಪಾ ದ್ವಿಚಕ್ರವಾಹನ ಕಂಪನಿಯು ವೆಸ್ಪಾ ಕೆಫೆಯಲ್ಲಿ ಹಲವು ಆಕ್ಸೆಸರಿಗಳನ್ನು ಮಾರಾಟ ಮಾಡಲಿದೆ.

English summary
Vespa, the scooter manufacturer is following its Italian counterpart Fiat by opening a chain of cafes in India. Vespa, which relaunched in India earlier this year during the Delhi Auto Expo started selling its LX 125 scooter last month.
Story first published: Wednesday, June 20, 2012, 9:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark