ದೀಪಾವಳಿಗೆ ನೂತನ ಪಲ್ಸರ್ ಸ್ಪೋರ್ಟ್ಸ್ ಬೈಕ್ ಎಂಟ್ರಿ

Written By:

ದೇಶದ ಕ್ರೀಡಾ ಬೈಕ್ ಸ್ನೇಹಿ ಗ್ರಾಹಕರಿಗೆ ಖುಷಿ ಸುದ್ದಿಯೊಂದು ಬಂದಿದ್ದು, ಬಜಾಜ್‌ನ ನೂತನ ಪಲ್ಸರ್ ಆವೃತ್ತಿ ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಗಮನವಾಗುವ ಸಾಧ್ಯತೆಗಳು ನಿಚ್ಚಳವಾಗಿದೆ.

ದೇಶದಲ್ಲಿ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್ ಸೆಗ್ಮೆಂಟಿಗೆ ದಿನದಿಂದ ದಿನಕ್ಕೆ ಬೇಡಿಕೆಗಳು ಹೆಚ್ಚಾಗುತ್ತಿರುವುದು ಹಲವು ನೂತನ ಬೈಕ್‌ಗಳ ಆಗಮನಕ್ಕೆ ಕಾರಣವಾಗಿದೆ.

ವರ್ಷದ ಆರಂಭದಲ್ಲಿ ಕವಾಸಕಿ ನಿಂಜಾ 300 ಬಿಡುಗಡೆಗೊಳಿಸಿದ್ದ ಬಜಾಜ್ ಇತ್ತೀಚೆಗಷ್ಟೇ ಕೆಟಿಎಂ 390 ಡ್ಯೂಕ್ ಪರಿಚಯಿಸಿತ್ತು. ಇವೆಲ್ಲದರ ನಡುವೆ ಬಜಾಜ್ ಮತ್ತೊಂದು ಸ್ಪೋರ್ಟ್ಸ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ದೇಶದ ರಸ್ತೆಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಬಜಾಜ್ ಪಲ್ಸರ್‌ನ ನೂತನ 375ಸಿಸಿ ಆವೃತ್ತಿಯು ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಹೊಸ ಪಲ್ಸರ್ ಆಗಮನವಾಗಲಿದೆ. 375 ಸಿಸಿ ಪಲ್ಸರ್ ದರ 1.7 ಲಕ್ಷ ರು.ಗಳ ಅಸುಪಾಸಿನಲ್ಲಿರುವ ಸಾಧ್ಯತೆಗಳಿವೆ.

To Follow DriveSpark On Facebook, Click The Like Button
English summary
Bajaj to launch new Pulsar 375 cc by this year end. Check out, new Bajaj Pulsar 375 price, features, speces.
Story first published: Wednesday, August 7, 2013, 11:51 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark