ಭರ್ಜರಿ ಎಂಟ್ರಿ ಕೊಡಲಿರುವ ಕವಾಸಕಿ ಝಡ್1000

Written By:

ಜಪಾನ್ ಮೂಲದ ಕವಾಸಕಿ ನೂತನ ಬೈಕ್ 2014 ಝಡ್1000 ಭಾರತ ಪ್ರವೇಶ ಖಚಿತಗೊಂಡಿದ್ದು, ಡಿಸೆಂಬರ್ 23ರಂದು ಲಾಂಚ್ ಆಗಲಿದೆ. ನಿಂಜಾ ತಲಹದಿಯಲ್ಲಿ ರೂಪಿತವಾಗಿರುವ ಕವಾಸಕಿ ಝಡ್1000 ಬೈಕ್, ಇಟಲಿಯಲ್ಲಿ ಸಾಗಿದ ಮಿಲಾನ್ ಮೋಟಾರು ಶೋದಲ್ಲಿ ಅನಾವರಣಗೊಳಿಸಲಾಗಿತ್ತು.

ಜಪಾನ್‌ನ ಸುಗೊಮಿ ಡಿಸೈನ್‌ನಲ್ಲಿ ಇದಕ್ಕೆ ವಿನ್ಯಾಸ ಕಲ್ಪಿಸಲಾಗಿದೆ. ಹಿಂದಿನ ಆವೃತ್ತಿಗಿಂತಲೂ ಆಕ್ರಮಣಕಾರಿ ವಿನ್ಯಾಸ ಪಡೆದುಕೊಂಡಿರುವ ಕವಾಸಕಿ, ಪರಿಷ್ಕೃತ ಹೆಡ್ ಲ್ಯಾಂಪ್, ಎಲ್‌ಇಡಿ ಲೈಟ್‌ಗಳಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

To Follow DriveSpark On Facebook, Click The Like Button

ನೂತನ ಕವಾಸಕಿ ಝಡ್1000, 17 ಲೀಟರ್ ಇಂಧನ ಟ್ಯಾಂಕ್ ಜತೆಗೆ ಎಬಿಎಸ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇದು 1043 ಸಿಸಿ, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 10000 ಆರ್‌ಪಿಎಂ (111 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅಂದ ಹಾಗೆ 2014 ಕವಾಸಕಿ ಝಡ್1000 ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದರ ದರ 13ರಿಂದ 14 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಇನ್ನು ಬಜಾಜ್ ಆಟೋ ಶೋ ರೂಂಗಳಲ್ಲಿ ಕವಾಸಕಿ ಝಡ್1000 ಬೈಕ್ ಮಾರಾಟವಾಗಲಿದೆ.

Kawasaki Z1000
English summary
2014 Kawasaki Z1000, the naked sports bike based on the liter class Ninja will be launched in India on December 23, as announced by the Japanese two wheeler manufacturer.
Story first published: Friday, December 20, 2013, 11:39 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark