ಕೆಟಿಎಂ ಸ್ಪೋರ್ಟ್ಸ್ ಬೈಕ್‌ಗೆ ಎಬಿಎಸ್ ಜಲಕ್

By Nagaraja

ಕೆಟಿಎಂ ಡ್ಯೂಕ್ 390 ಸ್ಪೋರ್ಟ್ಸ್ ಬೈಕ್ ಆಗಮನ ಇನ್ನು ಹತ್ತಿರದಲ್ಲಿದೆ. ಇದರಂತೆ ಬೈಕ್‌ಗೆ ಸ್ಪೋರ್ಟಿ ಟಚ್ ನೀಡಲು ಹೆಚ್ಚಿನ ಫೀಚರ್ಸ್ ಆಳವಡಿಸಲಾಗಿದೆ.

ವರದಿಗಳ ಪ್ರಕಾರ ಕೆಟಿಎಂ ಡ್ಯೂಕ್ ನೂತನ ಎಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ ಪಡೆಯಲಿದೆ. ಪ್ರಸ್ತುತ ಬೈಕ್ ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕಳೆದ ವರ್ಷದ EICMA ಶೋದಲ್ಲಿ ಕೆಟಿಎಂ ಡ್ಯೂಕ್ 390 ಬೈಕ್ ಅನಾವರಣಗೊಳಿಸಲಾಗಿತ್ತು. ಇದೀಗ ಬಜಾಜ್ ಪಾಲುದಾರಿಕೆಯಲ್ಲಿ ಪುಣೆಯ ಚಕಾನ್ ಘಟಕದಲ್ಲಿ ತಯಾರುಗೊಳ್ಳಲಿದೆ.

ಇದು ಶಕ್ತಿಶಾಲಿ ಎಂಜಿನ್ ಪಡೆಯಲಿದ್ದು 43 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನು ಭಾರತೀಯ ರಸ್ತೆಗಳಿಗೆ ಹೋಲಿಸಿದಾಗ ಎಬಿಎಸ್ ಆಯ್ಕೆ ಉತ್ತಮ ಸಮತೋಲನ ನೀಡಲಿದೆ.

ಈ ಮೂಲಕ ಎಬಿಎಸ್ ಆಯ್ಕೆಯುಳ್ಳ ದೇಶದ ಮೂರನೇ ಬೈಕ್ ಎನಿಸಿಕೊಳ್ಳಲಿದೆ. ಕೆಟಿಎಂ ಹೊರತಾಗಿ ಹೋಂಡಾ ಸಿಬಿಆರ್250ಆರ್ ಹಾಗೂ ಟಿವಿಎಸ್ ಆಪಾಚೆ ಆರ್‌ಟಿಆರ್180 ಬೈಕ್‌ಗಳಿಗೆ ಎಬಿಎಸ್ ಆಯ್ಕೆಗಳಿವೆ.

ಅಂದ ಹಾಗೆ ಕೆಟಿಎಂ ಡ್ಯೂಕ್ ದರ ಎರಡು ಲಕ್ಷ ಅಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಿದೆ. ಈ ಬಗ್ಗೆ ಸಂಪೂರ್ಣ ವಿವರಣೆಯನ್ನು ಕಂಪನಿ ಮುಂದಿನ ದಿನಗಳಲ್ಲಿ ನೀಡಲಿದೆ.

Most Read Articles

Kannada
English summary
The highly anticipated KTM Duke 390 sport bike, that will be launched in India sometime during the middle of the year, could come with an optional Anti-lock Braking System, reports Autocar India.
Story first published: Friday, March 29, 2013, 12:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X