ಕೆಟಿಎಂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದ್ವಿಚಕ್ರ ಕಂಪನಿ

Written By:

ಅಮೆರಿಕದಲ್ಲೂ ಮೋಡಿ ಮಾಡಿರುವ ಕೆಟಿಎಂ, ಅತ್ಯಂತ ವೇಗವಾಗಿ ಬಳೆಯುತ್ತಿರುವ ಮೋಟಾರ್ ಸೈಕಲ್ ಕಂಪನಿಯೆಂಬ ಗೌರವಕ್ಕೆ ಪಾತ್ರವಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಯುರೋಪ್‌ನ ಅತಿ ದೊಡ್ಡ ಮೋಟಾರು ಸೈಕಲ್ ಸಂಸ್ಥೆಯಾಗಿರುವ ಆಸ್ಟ್ರೀಯಾ ಮೂಲದ ಕೆಟಿಎಂ, ಅಮೆರಿಕದಲ್ಲಿ ಬಿಎಂಡ್ಲ್ಯು ಮೊಟೊರಾಡ್‌ನಂತಹ ದಿಗ್ಗಜ ಕಂಪನಿಗಳನ್ನು ಹಿಂದಿಕ್ಕಿ ಇಂತಹದೊಂದು ಗೌರವಕ್ಕೆ ಪಾತ್ರವಾಗಿದೆ.

KTM

ವರದಿಗಳ ಪ್ರಕಾರ 2013 ನವೆಂಬರ್ ತಿಂಗಳಲ್ಲಿ ಕೆಟಿಎಂ ಶೇಕಡಾ 49ರಷ್ಟು ವೃದ್ಧಿ ದಾಖಲಿಸಿದೆ. ಅಲ್ಲದೆ ವಾರ್ಷಿಕವಾಗಿ ಶೇಕಡಾ 29.8ರಷ್ಟು ಏರಿಕೆ ಸಾಧಿಸಿದೆ. ಇದು 2013ನೇ ಸಾಲಿನಲ್ಲಿ ಅತಿ ವೇಗವಾಗಿ ಬೆಳೆದು ಬರುತ್ತಿರುವ ದ್ವಿಚಕ್ರ ಕಂಪನಿಯೆಂಬ ಹಿರಿಮೆಗೆ ಪಾತ್ರವಾಗಲು ನೆರವಾಗಿದೆ.

ಕೆಟಿಎಂನಿಂದ ಹೊಸದಾಗಿ ಪರಿಚಯಗೊಂಡಿದ್ದ 1290 ಸೂಪರ್ ಡ್ಯೂಕ್ ಆರ್ ಹಾಗೂ 1190 ಅಡ್ವೆಂಚರ್ ಮತ್ತು ಆರ್‌ಸಿ 390, ಆರ್‌ಸಿ200 ಆವೃತ್ತಿಗಳು ಉತ್ತಮ ಮಾರಾಟಕ್ಕೆ ಪ್ರೇರೆಪಿಸಿತ್ತು.

English summary
KTM became Europe's largest motorcycle company this year, beating a giant like BMW Motorrad, which now holds second place. The Austrian company has now set its eyes on the United States, where, it claims, it is the fastest growing motorcycle company right now.
Story first published: Tuesday, December 10, 2013, 15:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark