ಲೋನಾವಾಲಾದಲ್ಲಿ ಸಂಪನ್ನಗೊಂಡ ಡ್ರಾಗ್ ರೇಸ್

By Nagaraja

2014ನೇ ಸಾಲಿನ ವ್ಯಾಲಿ ರನ್ ರೇಸ್ ಅನ್ನು ಎಲೈಟ್ ಒಕ್ಟಾನೆ ಆಯೋಜಿಸಿತ್ತು. ದೇಶದ ಅಧಿಕೃತ ಡ್ರಾಗ್ ರೇಸ್ ಎಂದೇ ಬಿಂಬಿತವಾಗಿರುವ ವ್ಯಾಲಿ ರನ್, ಲೋನಾವಾಲಾದ ಆಂಬಿ ವ್ಯಾಲಿ ರನ್ ಸ್ಟ್ರಿಪ್‌ನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು.

400ರಷ್ಟು ಡ್ರಾಗ್ ರೇಸಿಂಗ್ ಉತ್ಸಾಹಿಗಳು 2014ನೇ ಸಾಲಿನ ಎರಡನೇ ಆವೃತ್ತಿಯಲ್ಲಿ ಭಾಗವಹಿಸಿತ್ತು. ಇಲ್ಲಿ ಸೂಪರ್ ಬೈಕ್ ಹಾಗೂ ಸೂಪರ್ ಕಾರುಗಳು ತಮ್ಮ ಆವೇಗವನ್ನು ಪ್ರದರ್ಶಿಸಿದ್ದವು. 11 ಬಾರಿಯ ವಿಶ್ವ ಡ್ರಾಗ್ ರೇಸ್ ಚಾಂಪಿಯನ್ ರಿಕಿ ಗಾಡ್ಸನ್ ನೂತನ ಕವಾಸಕಿ ಝಡ್‌ಎಕ್ಸ್14ಆರ್ ಬೈಕ್‌ನಲ್ಲಿ ಜಾದೂ ಪ್ರದರ್ಶಿಸುವ ಮೂಲಕ ಗಮನ ಸೆಳೆದರು. ಇದು ಗಾಡ್ಸನ್ ಅವರ ಎರಡನೇ ಭಾರತ ಭೇಟಿಯಾಗಿತ್ತು.

ಲೋನಾವಾಲಾದಲ್ಲಿ ಸಂಪನ್ನಗೊಂಡ ಡ್ರಾಗ್ ರೇಸ್

ಈ ಸಂದರ್ಭದಲ್ಲಿ ತಮಗೆ ಸರಿಸಾಟಿಯಾಗಿ ನಿಲ್ಲಲು ರಿಕ್ಕಿ ಗಾಡ್ಸನ್ ಬಯಸಿದ್ದರು. ಇದಕ್ಕಾಗಿ ತಮ್ಮ ಸ್ಪರ್ಧಿಗಳಿಗೆ ಕೆಲವೊಂದು ಸಲಹೆ ಹೇಳಿಕೊಟ್ಟಿದ್ದರು. ಆದರೆ ಯಾರಿಂದಲೂ ಗಾಡ್ಸನ್ ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ.

ಲೋನಾವಾಲಾದಲ್ಲಿ ಸಂಪನ್ನಗೊಂಡ ಡ್ರಾಗ್ ರೇಸ್

ಅಂತಿಮವಾಗಿ ಶರವೇಗದಲ್ಲಿ ಸಾಗಿದ ರಿಕ್ಕಿ ತಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಲು ಯಶಸ್ವಿಯಾಗಿದ್ದರು.

ಲೋನಾವಾಲಾದಲ್ಲಿ ಸಂಪನ್ನಗೊಂಡ ಡ್ರಾಗ್ ರೇಸ್

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಅವರು, ಬೈಕ್ ಕೊಳ್ಳುವುದು ತುಂಬಾನೇ ಸುಲಭ. ಆದರೆ ರೇಸ್‌ಗಳಲ್ಲಿ ಅದರ ನಿರ್ವಹಣೆ ಕಾಪಾಡಿಕೊಳ್ಳುವುದು ತುಂಬಾನೇ ಕಷ್ಟಕರ. ಹಾಗಾಗಿ ಕಠಿಣ ಪ್ರಯತ್ನವನ್ನು ಮುಂದುವರಿಸಿ ಎಂದು ಕಿವಿಮಾತು ನೀಡಿದ್ದಾರೆ.

ಲೋನಾವಾಲಾದಲ್ಲಿ ಸಂಪನ್ನಗೊಂಡ ಡ್ರಾಗ್ ರೇಸ್

ಪ್ರತಿ ಬಾರಿಯೂ ರೇಸ್‌ಗೂ ಮೊದಲು ಫ್ಯೂಯಿಡ್ ಮತ್ತು ಏರ್ ಪ್ರೆಶರ್ ಚೆಕ್ ಮಾಡುವಂತೆಯೂ ಸಲಹೆ ಮಾಡಿದ್ದಾರೆ. ಇದರಿಂದ ಅತ್ಯುತ್ತಮ ಚಾಲನೆ ಕಂಡುಕೊಳ್ಳಲು ಸಾಧ್ಯ ಎಂದಿದ್ದಾರೆ.

ವೀಡಿಯೋ ವೀಕ್ಷಿಸಿ

Most Read Articles

Kannada
English summary
Elite Octane has organized the second edition Valley Run. The official drag race in India at Amby Valley air strip, Lonavala.
Story first published: Thursday, January 30, 2014, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X