ಹ್ಯೊಸಂಗ್ ಎಸ್‌ಟಿ7 ಪವರ್ ಕ್ರೂಸರ್ ಕಾನ್ಸೆಪ್ಟ್

Written By:

ದಕ್ಷಿಣ ಕೊರಿಯೊ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯೊಸಂಗ್ ತನ್ನ ನೂತನ ಎಸ್‌ಟಿ7 ಪವರ್ ಕ್ರೂಸರ್ ಕಾನ್ಸೆಪ್ಟ್‌ನ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದೆ. ಈ ಬಹುನಿರೀಕ್ಷಿತ ಮೋಟಾರ್ ಸೈಕಲ್ ಇಟಲಿಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಮಿಲಾನ್ ಮೋಟಾರು ಶೋದಲ್ಲಿ ಅನಾವರಣವಾಗಲಿದೆ.

ಈ ಚಿತ್ರವನ್ನು ಸೂಕ್ಷ್ಮವಾಗಿ ನೋಡಿದಾಗ ನಿಮಗೆ ಡುಕಾಟಿ ಡಯಾವೆಲ್ ನೆನಪಾಗಬಹುದು. ವೇಗ ಹಾಗೂ ವೇಗವರ್ಧನೆಯ ಸಂಯುಕ್ತ ರೂಪವಾಗಿರುವ ಈ ಸ್ಪೋರ್ಟ್ಸ್ ಬೈಕ್ ಪ್ರಯಾಣಿಕರಿಗೆ ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ.

Hyosung

ಡಿಎಸ್‌ಕೆ ಇಂಟರ್‌ನ್ಯಾಷನಲ್ ಸ್ಕೂಲ್ ಆಫ್ ಡಿಸೈನ್‌ನ ವಿದ್ಯಾರ್ಥಿಗಳು ಇದನ್ನು ವಿನ್ಯಾಸಗೊಳಿಸಿದ್ದಾರೆ. ನೀವಿಲ್ಲಿ ಬೈಕ್ ಹಿಂದುಗಡೆ ವಿಸ್ತಾರವಾದ ವೀಲ್ ಬೇಸ್ ನೋಡಬಹುದಾಗಿದೆ.

ಸದ್ಯವಿರುವ ಹ್ಯೊಸಂಗ್ ಎಸ್‌‍ಟಿ7 678 ಸಿಸಿ ವಿ ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 57 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದೀಗ ಬಿಡುಗಡೆಗೊಳಿಸಿರುವ ಹೊಸ ಬೈಕ್ ಸಹ ಇದಕ್ಕೆ ಸಮಾನವಾದ ಎಂಜಿನ್ ತಂತ್ರಾಂಶವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ.

English summary
South Korean motorcycle manufacturer Hyosung has revealed sketches of a motorcycle concept which it will reveal at this year's EICMA show in Milan, Italy, which will be held in November.
Story first published: Tuesday, June 24, 2014, 16:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark