ಕಪ್ಪು ವರ್ಣದಲ್ಲೂ ಕೆಟಿಎಂ ಡ್ಯೂಕ್ ಎಂಟ್ರಿ

By Nagaraja

ಕಳೆದ ವರ್ಷ ಅಂದರೆ 2013 ಜೂನ್ ತಿಂಗಳಲ್ಲಿ ಕೆಟಿಎಂ ಡ್ಯೂಕ್ 390 ದೇಶಕ್ಕೆ ಭರ್ಜರಿ ಎಂಟ್ರಿ ಕೊಟ್ಟಿತ್ತು. ಈ ಬಹುನಿರೀಕ್ಷಿತ ಬೈಕ್ ಪ್ರಾರಂಭದಲ್ಲಿ ಬಿಳಿ ಹಾಗೂ ಕೇಸರಿ ಬಣ್ಣಗಳಲ್ಲಿ ಲಭ್ಯವಾಗಿತ್ತು.

ಇದು ಇತರ ಬಣ್ಣಗಳನ್ನು ನೆಚ್ಚಿಕೊಂಡವರಲ್ಲಿ ನಿರಾಸೆಗೆ ಕಾರಣವಾಗಿದೆ. ಪ್ರಸ್ತುತ ಈ ಆಸ್ಟ್ರೀಯಾ ಮೂಲದ ವಾಹನ ತಯಾರಕ ಸಂಸ್ಥೆಯು ಬೇಡಿಕೆಯನ್ನು ಗಮನಿಸಿ ಕಪ್ಪು ವರ್ಣದಲ್ಲೂ ಕೆಟಿಎಂ ಡ್ಯೂಕ್ 390 ಒದಗಿಸಲು ಮುಂದಾಗಿದೆ.

KTM Duke 390

ನಿಮ್ಮ ಮಾಹಿತಿಗಾಗಿ, ದೇಶದಲ್ಲಿ ಲಾಂಚ್ ಆಗಿರುವ ಬೆನ್ನಲ್ಲೇ ಕೆಟಿಎಂ ಡ್ಯೂಕ್ 390 ಆವೃತ್ತಿಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಇದರಿಂದಾಗಿ ಕಾಯುವಿಕೆ ಅವಧಿ ಮೂರು ತಿಂಗಳ ವರೆಗೂ ವಿಸ್ತರಿಸಲಾಗಿತ್ತು. ಈ ಹಿಂದೆ ಕಪ್ಪು ವರ್ಣ ಡ್ಯೂಕ್ ಅನ್ನು 2013 ನವೆಂಬರ್ ತಿಂಗಳಲ್ಲಿ ಯುರೋಪ್‌ನಲ್ಲಿ ಪರಿಚಯಿಸಲಾಗಿತ್ತು. ಇದೀಗ ಭಾರತವನ್ನು ಪ್ರವೇಶಿಸಿದ್ದರೂ ದರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ.

ಅಂದ ಹಾಗೆ ಕೆಟಿಎಂ ಡ್ಯೂಕ್ 390 ಡ್ಯೂಕ್ 373ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 43.5 ಪಿಎಸ್ ಪವರ್ (35 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕೇವಲ ಏಳು ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಹಾಗೆಯೇ ಗಂಟೆಗೆ ಗರಿಷ್ಠ 170 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
The black livery KTM Duke 390 was released for Europe in November 2013. Finally in India, bookings for the new paint scheme has commenced and deliveries will be done February onwards.
Story first published: Saturday, January 25, 2014, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X