ಮಹೀಂದ್ರ ಮೊಜೊ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಏನಿದೆ?

Written By:

ಕಳೆದ ಕೆಲವು ಸಮಯಗಳಿಂದ ಮಹೀಂದ್ರ ಮೊಜೊ ಬಿಡುಗಡೆ ಸಂಬಂಧ ಅನೇಕ ವರದಿಗಳು ಬಂದಿವೆ. ಅಲ್ಲದೆ 2012 ಹಾಗೂ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಈ ಬಹುನಿರೀಕ್ಷಿತ ಬೈಕ್ ಹಲವಾರು ಬಾರಿ ಟೆಸ್ಟಿಂಗ್ ಹಮ್ಮಿಕೊಳ್ಳಲಾಗಿದೆ.

ಇದೀಗ ಮೊಜೊ ಇನ್ಸ್ಟ್ರಮೆಂಟ್ ಕ್ಲಸ್ಟರ್‌ಗೆ ಸಂಬಂಧಪಟ್ಟ ವೀಡಿಯೋವೊಂದನ್ನು ಚಿತ್ರಿಕರಿಸಲಾಗಿದೆ. ಪೆಟ್ರೋಲ್ ಬಂಕ್‌ವೊಂದರಲ್ಲಿ ಇಂಧನ ತುಂಬಿಸುವ ವೇಳೆ ಇದನ್ನು ಸೆರೆಹಿಡಿಯಲಾಗಿದೆ.

Mahindra Mojo

ವಿಶಿಷ್ಟವಾಗಿ ಗುರುತಿಸಲ್ಪಟ್ಟಿರುವ ಮೊಜೊ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ ಡಿಜಿಟಲ್ ಅನಾಲಾಗ್ ಸ್ಪಿಡೋ/ಟ್ಯಾಕ್‌ಮೀಟರ್‌ನಲ್ಲಿ ನೀಲಿ ಬ್ಯಾಕ್‌ಲೈಟ್ ಇರಲಿದೆ. ಇದು ಮೇಲ್ಗಡೆ ಗೇರ್ ಶಿಫ್ಟ್ ಇಂಡಿಕೇಟರ್ ಅಂತೆಯೇ ಟ್ಯಾಕೋ ಮೀಟರ್ ಒಳಗಡೆಯ ಲೈಟ್ ಆರ್‌ಪಿಎಂ ಸೂಚಿಸಲಿದೆ. ಅಷ್ಟೇ ಅಲ್ಲದೆ ಸಮಯ ಹಾಗೂ ಇಂಧನ ಮಟ್ಟವನ್ನು ಸೂಚಿಸಲಿದೆ.

ಡೇಟೈಮ್ ರನ್ನಿಂಗ್ ಲೈಟ್ಸ್, ಅಪ್‌ಸೈಡ್ ಡೌನ್ ಫ್ರಂಟ್ ಫಾರ್ಕ್, ಹಿಂದುಗಡೆ ಮೊನೊಶಾಕ್, ಉದ್ದನೆಯ ಹಾಗೂ ಆರಾಮದಾಯಕ ಆಸನ, ಡ್ಯುಯಲ್ ಎಕ್ಸಾಸ್ಟ್ ಮುಂತಾದ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

ಅಂದ ಹಾಗೆ ಮಹೀಂದ್ರ ಮೊಜೆ 295 ಸಿಸಿ ಲಿಕ್ವಿಡ್ ಕೂಲ್ಡ್, ಡ್ಯುಯಲ್ ಓವರ್ ಹೆಡ್ ಕ್ಯಾಮ್‌ಶಾಫ್ಟ್ ಎಂಜಿನ್ ಪಡೆದುಕೊಳ್ಳಲಿದ್ದು, 27 ಅಶ್ವಶಕ್ತಿ (25 ಎನ್‌ಎಂ ಪೀಕ್ ಟಾರ್ಕ್) ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಎಬಿಎಸ್ ಸ್ಟಾಂಡರ್ಡ್ ಆಗಿ ಪಡೆದುಕೊಳ್ಳುವ ಸಾಧ್ಯತೆಯಿದೆ.

ಹಾಗಿದ್ದರೂ ಮಹೀಂದ್ರ ಮೊಜೊ ಬಿಡುಗಡೆ ಬಗ್ಗೆ ಸ್ಪಷ್ಟ ಮಾಹಿತಿಗಳು ಬಂದಿಲ್ಲ. ಇದು ಪ್ರಸಕ್ತ ಸಾಲಿನಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗಲಿದೆ. ಇದು ಪ್ರಮುಖವಾಗಿಯೂ ಇನ್ನಷ್ಟೇ ಬಿಡುಗಡೆಯಾಗಲಿರುವ ಹೋಂಡಾ ಸಿಬಿಆರ್300ಆರ್, ಸುಜುಕಿ ಇನಾಝುಮಾ, ಯಮಹಾ ಆರ್25, ಕೆಟಿಎಂ ಡ್ಯೂಕ್390 ಮತ್ತು ಆರ್‌ಸಿ 390 ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

<iframe width="600" height="450" src="//www.youtube.com/embed/jerwzFa2tPg?rel=0" frameborder="0" allowfullscreen></iframe>

English summary
The Mojo by Mahindra Two Wheelers has become the most anticipated motorcycle in India. It was first showcased at the 2012 Auto Expo and again at 2014 Auto Expo, held in New Delhi. It has also been spied several times in Pune where its is being tested and manufactured.
Story first published: Saturday, August 16, 2014, 14:40 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more