ಪ್ಯೂಜೊ ಶೇರು ಖರೀದಿಗೆ ಮಹೀಂದ್ರ ಉತ್ಸುಕತೆ

Written By:

ಮಹೀಂದ್ರ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್ ಲಿಮೆಟೆಡ್, ಪ್ರತಿಷ್ಠಿ ಪ್ಯೂಜೊ ಮೋಟಾರುಸೈಕಲ್ ಶೇರನ್ನು ಪಡೆಯಲು ಉತ್ಸುಕತೆ ವ್ಯಕ್ತಪಡಿಸಿದೆ.

ವರದಿಗಳ ಪ್ರಕಾರ 54 ಬಿಲಿಯನ್ ಯುರೋ ಭಾಗವಾಗಿರುವ ಪ್ಯೂಜೊ ಮೋಟಾರ್‌ಸೈಕಲ್ಸ್‌ನ ಶೇಕಡಾ 51ರಷ್ಟು ಶೇರು ಪಡೆದುಕೊಳ್ಳಲು ಮಹೀಂದ್ರ ಉತ್ಸುಕವಾಗಿದೆ.

Mahindra

116 ವರ್ಷಗಳ ಇತಿಹಾಸ ಹೊಂದಿರುವ ಪ್ಯೊಜೊ ಸ್ಕೂಟರ್‌ಗಳಿಗೆ ಯುರೋಪ್‌ನ ನಗರ ಸಂಚಾರದಲ್ಲಿ ಬಹುದೊಡ್ಡ ಪಾಲಿದೆ. ಇದು 50 ಸಿಸಿಯಿಂದ ಆರಂಭವಾಗಿ 400 ಸಿಸಿ ವರೆಗೆ ಅನೇಕ ಮಾದರಿಗಳನ್ನು ಒದಗಿಸುತ್ತಿದೆ. ಅಲ್ಲದೆ ಜಗತ್ತಿನ ಅತ್ಯಂತ ಯಶಸ್ವಿ ಸ್ಕೂಟರ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಪವನ್ ಗೋನ್ಖಾ, "ಮಹೀಂದ್ರ ಹಾಗೂ ಪ್ಯೂಜೊ ಜತೆಗೂಡುವುದರಿಂದ ಎರಡು ಸಂಸ್ಥೆಗಳಿಗೂ ವಾಣಿಜ್ಯ ಗೆಲುವು ಖಚಿತವಾಗಲಿದೆ" ಎಂದಿದ್ದಾರೆ.

ದೇಶದಲ್ಲಿ ಪ್ಯೂಜೂ ಸ್ಕೂಟರ್‌ಗಳ ಮಾರಾಟ ನೆರವಾಗುವುದು ಮಹೀಂದ್ರ ಗುರಿಯಾಗಿದೆ. ಹಾಗೆಯೇ ಜಾಗತಿಕವಾಗಿ ಗುರುತಿಸಿಕೊಳ್ಳಲು ಮಹೀಂದ್ರಗೆ ಪ್ಯೂಜೊ ನೆರವಾಗಲಿದೆ. ಒಟ್ಟಿನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಾಗಿದೆ.

English summary
Mahindra Two Wheelers Ltd. (MTWL), an unlisted subsidiary of Mahindra & Mahindra Limited and a part of the USD 16.5 billion Mahindra Group, has made an offer to acquire a 51 percent stake in Peugeot Motocycles (PMTC), which is a part of the Euro 54 billion PSA Group based in France.
Story first published: Wednesday, October 8, 2014, 12:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark