ಸುಜುಕಿ ಸ್ಪೆಷಲ್ ಎಡಿಷನ್ ಜಿಎಸ್‌ಆರ್750ಝಡ್ ಲಾಂಚ್

Written By:

ವಿಶ್ವಸನೀಯ ಹಾಗೂ ವೇಗದ ಬೈಕ್‌ಗಳನ್ನು ಉತ್ಪಾದಿಸುವಲ್ಲಿ ಹೆಸರುವಾಸಿಯಾಗಿರುವ ಸುಜುಕಿ ಸಂಸ್ಥೆಯು ಇದೀಗ ಜಿಎಸ್‌‌ಆರ್750ಝಡ್ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಜಪಾನ್‌ನ ಅತ್ಯಂತ ಶಕ್ತಿಶಾಲಿ ಬೈಕ್‌ಗಳಲ್ಲಿ ಒಂದಾಗಿರುವ ಸುಜುಕಿ ಜಿಎಸ್‌‌ಎಕ್ಸ್‌ಆರ್750ಝಡ್ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದನ್ನೇ ಪ್ರೇರಣೆಯಾಗಿ ಪಡೆದುಕೊಂಡಿರುವ ಸಂಸ್ಥೆಯು, ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

To Follow DriveSpark On Facebook, Click The Like Button
Suzuki Motorcycles

ಸುಜುಕಿ ಜಿಎಸ್‌‌ಆರ್750ಝಡ್ ನೆಕ್ಡ್ ಸ್ಟ್ರೀಟ್ ಬೈಕ್ ಆಗಿದ್ದು, 750 ಸಿಸಿ ಎಂಜಿನ್ ಪಡೆದುಕೊಂಡಿದೆ. ಆದರೆ ಸದ್ಯಕ್ಕೆ ಈ ಬೈಕ್ ಇಂಗ್ಲೆಂಡ್‌ನಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿರುತ್ತದೆ.

ಇದರ 749 ಸಿಸಿ ಲಿಕ್ವಿಡ್ ಕೂಲ್ಡ್ 4 ಸಿಲಿಂಡರ್ ಎಂಜಿನ್ 105 ಅಶ್ವಶಕ್ತಿ (80 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ.

ಅಂದ ಹಾಗೆ ಸಜುಕಿ ಜಿಎಸ್‌‌ಆರ್750ಝಡ್ ಸ್ಟಾಂಡರ್ಡ್ ವರ್ಷನ್ 7.55 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ. ಹಾಗೆಯೇ ಎಬಿಎಸ್ ಮಾದರಿ 7.95 ರು.ಗಳಷ್ಟು ಬೆಲೆ ಬಾಳಲಿದೆ.

English summary
The Japanese manufacturer has built a special edition GSR750Z and is on sale now. Suzuki's GSR750Z is a naked street bike that sports the iconic 750cc engine present in the GSXR750.
Story first published: Wednesday, June 18, 2014, 11:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark