ಬೆಂಗ್ಳೂರಲ್ಲಿ ಟ್ರಯಂಪ್ ಐಕಾನಿಕ್ ಬೈಕ್ ಬುಕ್ಕಿಂಗ್ ಆರಂಭ

Written By:

ನಿಮ್ಮ ಮಾಹಿತಿಗಾಗಿ, ಅಂದಾಜು ಒಂದು ತಿಂಗಳ ಹಿಂದೆ ಅಂದರೆ 2013 ನವೆಂಬರ್ 28ರಂದು ಟ್ರಯಂಪ್ ಮೋಟಾರ್ ಸೈಕಲ್ಸ್ ದೇಶದಲ್ಲಿ ಲಾಂಚ್ ಆಗಿತ್ತು. ಇದರ ಮುಂದುವರಿದ ಭಾಗವೆಂಬಂತೆ ಟ್ರಯಂಪ್ ವೆರಿಯಂಟ್‌ಗಳ ಬುಕ್ಕಿಂಗ್ ಪ್ರಕ್ರಿಯೆ ಬೆಂಗಳೂರು ಹಾಗೂ ಹೈದಬಾರಾಬಾದ್‌ನಲ್ಲಿ ಆರಂಭಗೊಂಡಿದೆ.

ಆದರೆ ಇಲ್ಲಿ ಗಮನಿಸಬೇಕಾದ ಕುತೂಹಲಕಾರಿ ಸಂಗತಿ ಏನೆಂದರೆ ಮೇಲೆ ಉಲ್ಲೇಖಿಸಲಾದ ನಗರಗಳಲ್ಲಿ ಟ್ರಯಂಪ್ ಡೀಲರ್‌ಶಿಪ್ ಇನ್ನಷ್ಟೇ ತೆರೆದುಕೊಳ್ಳಬೇಕಾಗಿದೆ. ಈ ಪೈಕಿ ನಮ್ಮ ಬೆಂಗಳೂರಿನಲ್ಲಿ ಜನವರಿ ವೇಳೆಯಲ್ಲಿ ಪ್ರದರ್ಶನ ಮಳಿಗೆ ತೆರೆದುಕೊಳ್ಳುವ ನಿರೀಕ್ಷೆಯಿದೆ.

ಹಾಗಿದ್ದರೂ ದೆಹಲಿ ಹಾಗೂ ಮುಂಬೈ ಗ್ರಾಹಕರು ಬುಕ್ಕಿಂಗ್‌ಗಾಗಿ ಇನ್ನು ಒಂದೆರಡು ವಾರಗಳಷ್ಟು ಕಾಯಬೇಕಾಗಿದೆ. ಯಾಕೆಂದರೆ ತಿಂಗಳಾಂತ್ಯದಲ್ಲಷ್ಟೇ ಟ್ರಯಂಪ್ ಬೈಕ್‌ಗಳ ವಿತರಣೆ ಕಾರ್ಯವನ್ನು ಬ್ರಿಟನ್ ಮೂಲದ ಈ ವಾಹನ ತಯಾರಕ ಸಂಸ್ಥೆ ಆರಂಭಿಸಲಿದೆ.

ದೇಶದಲ್ಲಿ ಒಟ್ಟು 10 ಮಾದರಿಗಳನ್ನು ಟ್ರಯಂಪ್ ಮೋಟಾರುಸೈಕಲ್ಸ್ ಮಾರಾಟಗೈಯಲಿದೆ. ಈ ಪೈಕಿ 6 ವೆರಿಯಂಟ್‌ಗಳು ಸ್ಥಳೀಯವಾಗಿ ಜೋಡಣೆಯಾಗಲಿದೆ. ಅವುಗಳೆಂದರೆ ಬೊನೆವಿಲ್ಲೆ, ಬೊನೆವಿಲ್ಲೆ ಟಿ100, ಡೇಟೋನಾ 675 ಆರ್, ಸ್ಟ್ರೀಟ್ ಟ್ರಿಪಲ್, ಸ್ಪೀಡ್ ಟ್ರಿಪಲ್ ಮತ್ತು ಥ್ರಕ್ಸ್ಟನ್. ಈ ಎಲ್ಲ ಮಾದರಿಗಳು 5.7 ಲಕ್ಷ ರು.ಗಳಿಂದ 11.4 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

Triumph

ಇನ್ನುಳಿದಂತೆ ರಾಕೆಟ್ III ರೊಡ್‌ಸ್ಟರ್, ಟೈಗರ್ ಎಕ್ಸ್‌ಪ್ಲೋರರ್, ಟೈಗರ್ 800 ಎಕ್ಸ್‌ಸಿ ಮತ್ತು ಥಂಡರ್ ಬರ್ಡ್ ಸ್ಟ್ರೋಮ್ ಮಾದರಿಗಳು ಕಂಪ್ಲೀಟ್ ಬಿಲ್ಡ್ ಯುನಿಟ್ ಸಿದ್ಧಾಂತ ಮುಖಾಂತರ ಮಾರಾಟವಾಗಲಿದೆ. ಇವುಗಳು 20 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ಈ ನಡುವೆ ಖುಷಿ ಸುದ್ದಿಯೊಂದು ಬಂದಿದ್ದು, ಟ್ರಯಂಪ್ ಮೋಟಾರ್ ಸೈಕಲ್ಸ್ ವಿಶೇಷವಾಗಿಯೂ ಭಾರತ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು 250ಸಿಸಿ ಬೈಕ್‌ಗಳನ್ನು ಉತ್ಪಾದಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

English summary
Triumph Motorcycles, which launched its range of two wheelers on November 28, 2013, in India has started accepting bookings in the cities of Bangalore and Hyderabad.
Story first published: Wednesday, January 1, 2014, 13:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark