ಇಂಡೋನೇಷ್ಯಾ ಶೋ ರೂಂ ಒಳನುಗ್ಗಿದ ಟಿವಿಎಸ್ ಡ್ರೇಕನ್

Written By:

ಪ್ರತಿಷ್ಠಿತ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿದ್ದ ಟಿವಿಎಸ್ ಡ್ರೇಕನ್ ಕಾನ್ಸೆಪ್ಟ್ ವಾಹನ ಯಾವಾಗ ಬಿಡುಗಡೆಯಾಗಲಿದೆ ಎಂಬುದು ದೇಶದ ಅಭಿಮಾನಿಗಳಲ್ಲಿ ಅತೀವ ಕುತೂಹಲ ಮೂಡಿಸಿದೆ.

ಹಾಗಿರಬೇಕೆಂದರೆ ನೆರೆಯ ಇಂಡೋನೇಷ್ಯಾದ ನಿರ್ದಿಷ್ಟ ಶೋ ರೂಂವೊಂದರಲ್ಲಿ ಈ ಬಹುನಿರೀಕ್ಷಿತ ಬೈಕ್ ಪ್ರದರ್ಶನಗೊಂಡಿದೆ. 250 ಸಿಸಿ ವಿಭಾಗದಲ್ಲಿ ಡ್ರೇಕನ್ ಹೊಸ ಅಲೆಯೆಬ್ಬಿಸಲಿದೆ ಎಂಬುದು ಅಭಿಮಾನಿಗಳ ನಂಬಿಕೆ.

TVS Draken

ಡ್ರೇಕನ್ ನಿಖರತೆ ಹೆಚ್ಚಿಸುವ ನಿಟ್ಟಿನಲ್ಲಿ ಇತರ ದೇಶಗಳಿಂದಲೂ ವಿಮರ್ಶಗೆ ಒಳಗಾಗುವುದು ಟಿವಿಎಸ್ ಗುರಿಯಾಗಿದೆ. ಈ ಮೂಲಕ ನಿರ್ಮಾಣ ವರ್ಷನ್‌ನಲ್ಲಿ ಬಹುಮೂಲ್ಯ ಬದಲಾವಣೆ ತರುವ ಮೂಲಕ ಹೆಚ್ಚು ಗ್ರಾಹಕ ಸ್ನೇಹಿ ಎನಿಸಿಕೊಳ್ಳಬಹುದಾಗಿದೆ.

ಬಜಾಜ್ ಹಾಗೂ ಕೆಟಿಎಂ ಹಾದಿಯನ್ನೇ ತುಳಿದಿದ್ದ ಟಿವಿಎಸ್. ಜರ್ಮನಿಯ ಐಕಾನಿಕ್ ಬಿಎಂಡಬ್ಲ್ಯು ಮೊಟೊರಾಡ್ ಜತೆಗೂಡಿ ಸಾಧಾರಣ ಬೈಕ್ ಉತ್ಪಾದಿಸುವದರಲ್ಲಿ ಮಗ್ನವಾಗಿದೆ. ಈ ಮೂಲಕ ಬೆಳೆದು ಬರುತ್ತಿರುವ ರಾಷ್ಟ್ರಗಳತ್ತ ತನ್ನ ಗಮನ ಕೇಂದ್ರಿಕರಿಸುತ್ತಿದೆ.

250 ಸಿಸಿ ಸಿಂಗಲ್ ಸಿಲಿಂಡರ್ ಡಿಒಎಚ್‌ಸಿ ಎಂಜಿನ್ ಹೊಂದಲಿರುವ ಟಿವಿಎಸ್ ಡ್ರೇಕನ್ 38.5 ಅಶ್ವಶಕ್ತಿ (23 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಳ್ಳಲಿದೆ. ವರದಿಗಳ ಪ್ರಕಾರ 2015 ಮಧ್ಯಂತರ ಅವಧಿಯಲ್ಲಿ ಡ್ರೇಕನ್ ಮಾದರಿ ಬಿಡುಗಡೆಯಾಗುವ ಸಾಧ್ಯತೆಯಿದೆ.

English summary
TVS Motors India had revealed a concept motorcycle called the Draken at the 2014 Auto Expo held in New Delhi.
Story first published: Tuesday, June 10, 2014, 15:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark