ನಿರೀಕ್ಷಿಸಿ ಟಿವಿಎಸ್ 'ಸ್ಕೂಟಿ ಜೆಸ್ಟ್' ಸ್ಕೂಟರ್

Written By:

ನಿಮಗೆಲ್ಲರಿಗೂ ತಿಳಿದಂತೆಯೇ ಸ್ಕೂಟಿ ಟಿವಿಎಸ್‌ನ ಜನಪ್ರಿಯ ಸ್ಕೂಟರ್ ಬ್ರಾಂಡ್ ಆಗಿದೆ. ಸ್ಕೂಟರ್ ವಿಭಾಗದಲ್ಲಿ ಟಿವಿಎಸ್ ಯಶಸ್ಸಿನ ಹಿಂದುಗಡೆ ಸ್ಕೂಟಿ ಪಾತ್ರ ಬಹುದೊಡ್ಡದಾಗಿತ್ತು.

ಪ್ರಸ್ತುತ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಟಿವಿಎಸ್, 2014 ಆಟೋ ಎಕ್ಸ್ ಪೋದಲ್ಲಿ ನೂತನ ಸ್ಕೂಟಿ ಜೆಸ್ಟ್ 110 ಸಿಸಿ ಸ್ಕೂಟರ್ ಪರಿಚಯಿಸಿದ್ದು ವಾಹನ ಪ್ರೇವಮಿಗಳಲ್ಲಿ ಭಾರಿ ನಿರೀಕ್ಷೆಗೆ ಕಾರಣವಾಗಿದೆ. ಟಿವಿಎಸ್ ದೇಶಕ್ಕೆ ಪರಿಚಯಿಸಿರುವ ಎಲ್ಲ ಆಟೋಮ್ಯಾಟಿಕ್ ಸ್ಕೂಟರ್ ಆವೃತ್ತಿಗಳು ಹೆಚ್ಚು ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿತ್ತು. ಪ್ರಮುಖವಾಗಿಯೂ ಹೆಣ್ಮಕ್ಕಳಲ್ಲಿ ಸ್ಕೂಟಿ ಹೆಚ್ಚು ಜನಪ್ರಿಯತೆ ಪಡೆದಿತ್ತು.

ನೂತನ ಸ್ಕೂಟಿ ಜೆಸ್ಟ್ ಮಾದರಿಯು ಮುಂದುಗಡೆಯಿಂದ ಪೆಪ್‌ಗೆ ಸಮಾನವಾದ ವಿನ್ಯಾಸ ಪಡೆದಿದೆ. ಹಾಗಿದ್ದರೂ ಸ್ಕೂಟಿ ಜೆಸ್ಟ್ ವಿನ್ಯಾಸದಲ್ಲಿ ನಾವೀನ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ. ಇದನ್ನು ನೀವೇ ಗಮನಿಸಬಹುದಾಗಿದೆ. ಉದಾಹರಣೆಗೆ ಎಲ್‌ಇಡಿ ಇಂಡಿಕೇಟರ್ ಲ್ಯಾಂಪ್, ರಿಯರ್ ಸ್ಟಾಪ್ ಲ್ಯಾಂಪ್ ಡಿಸೈನ್ ಹಾಗೂ ಗ್ರಾಬ್ ಹ್ಯಾಂಡಲ್ ಜತೆಗೆ ಇನ್ನಿತರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಈ ಎಲ್ಲ ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ನೂತನ ಸ್ಕೂಟಿ ಜೆಸ್ಟ್, ಹೆಚ್ಚು ಸ್ಥಳಾವಕಾಶ ಹೊಂದಿರುವ ಸೀಟು, ದೊಡ್ಡದಾದ ಫುಟ್ ಬೋರ್ಡ್ ಮತ್ತು 19 ಲೀಟರ್ ಸ್ಟೋರೆಜ್ ಪ್ರದೇಶ ಪಡೆದುಕೊಂಡಿದೆ. ಹಾಗೆಯೇ ದೊಡ್ಡದಾದ ಹೆಡ್ ಲೈಟ್ ಜತೆಗೆ ಡ್ಯುಯಲ್ ಟೋನ್ ಬಾಡಿ ಕಲರ್ ಸಹ ಪಡೆದುಕೊಂಡಿದೆ. ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದ್ದಲ್ಲಿ ಪ್ರತಿ ಲೀಟರ್‌ಗೆ 62 ಕೀ.ಮೀ. ವರೆಗೂ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

TVS Scooty Zest Scooter
English summary
TVS Scooty can be largely credited with making small automatic scooters popular in India. Particularly among youngsters (mostly female riders). The reason behind its near monopoly in the segment for many years was the Scooty's primary design features.
Story first published: Monday, February 10, 2014, 14:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark