ಇಂಡಿಯಾ ಬೈಕ್ ವೀಕ್ ಹಬ್ಬಕ್ಕೆ ಗೋವಾದಲ್ಲಿ ಅದ್ದೂರಿ ಚಾಲನೆ

Written By:

ಕಾಯುವಿಕೆ ಕೊನೆಗೂ ಅಂತ್ಯವಾಗಿದ್ದು, ಗೋವಾದಲ್ಲಿ ಆಯೋಜನೆಯಾಗುತ್ತಿರುವ 2015 ಇಂಡಿಯಾ ಬೈಕ್ ವೀಕ್‌ಗೆ ಅದ್ದೂರಿ ಚಾಲನೆ ದೊರಕಿದೆ. ಇದರಂತೆ ಎರಡು ದಿನಗಳ ಪರ್ಯಂತ ಸಾಗುವ ಈ ಬೈಕ್ ಹಬ್ಬಕ್ಕೆ ದೇಶದ್ಯಾಂತದ ವಾಹನ ಪ್ರೇಮಿಗಳು ಒಟ್ಟು ಸೇರಿದ್ದಾರೆ.

ಮೂರನೇ ಆವೃತ್ತಿಯ ಇಂಡಿಯಾ ಬೈಕ್ ವೀಕ್ ಹಬ್ಬಕ್ಕೆ ಭಾರಿ ಜನಸಂದಣೆ ಸೇರಿರುವುದಾಗಿ ಗೋವಾಕ್ಕೆ ನೇರ ವರದಿಗಾಗಿ ತೆರಳಿರುವ ನಮ್ಮ ಪ್ರತಿನಿಧಿಗಳು ತಿಳಿಸಿರುತ್ತಾರೆ.

india bike week

ಕಳೆದ ವರ್ಷ ಹರ್ಲಿ ಡೇವಿಡ್ಸನ್ ಮಾತ್ರ ಪಾಲುದಾರಿಕೆಯಾಗಿದ್ದರೆ ಈ ಬಾರಿ ಟ್ರಯಂಪ್, ಬೆನೆಲ್ಲಿ, ಇಂಡಿಯನ್ ಮೋಟಾರ್‌ಸೈಕಲ್ಸ್ ಹಾಗೂ ವೆಸ್ಪಾಗಳಂತಹ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ಸಹ ಭಾಗವಹಿಸುತ್ತಿದೆ.

ಟ್ರಯಂಪ್ ಅಡ್ವೆಂಚರ್ ಬೈಕ್‌ಗಳಾದ ಡೇಟೋನಾ 675ಆರ್, ಸ್ಟ್ರೀಟ್ ಟ್ರಿಪಲ್ ಪ್ರಮುಖ ಆಕರ್ಷಣೆಯಾಗಲಿದೆ. ಇಲ್ಲಿ ಬೈಕ್ ಪ್ರದರ್ಶನ ಮಾತ್ರವಲ್ಲದೆ ಸ್ಟಂಟ್ ಶೋ, ಪರೇಡ್, ಡ್ರಾಗ್ ರಾಲಿ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮಗಳು ನೆರವೇರಲಿದೆ.

English summary
India Bike Week (IBW) is back with its third edition that promises to be a lot more than just an automobile event. 
Story first published: Saturday, February 21, 2015, 11:18 [IST]
Please Wait while comments are loading...

Latest Photos