ಎಂವಿ ಆಗಸ್ಟಾದಿಂದ ಮಗದೊಂದು ದುಬಾರಿ ಬೈಕ್ ಬಿಡುಗಡೆ

Written By:

ಈಗಷ್ಟೇ ಭಾರತಕ್ಕೆ ಚೊಚ್ಚಲ ಬೈಕ್ ಪರಿಚಯಿಸಿರುವ ಇಟಲಿಯ ಐಕಾನಿಕ್ ಎಂವಿ ಆಗಸ್ಟಾ ಮಗದೊಂದು ಐಷಾರಾಮಿ ಬೈಕ್ ಅನ್ನು ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಅದುವೇ

ಎಂವಿ ಆಗಸ್ಟಾ ಎಫ್4 ಸೂಪರ್ ಬೈಕ್

ಬೆಲೆ ಮಾಹಿತಿ: 25.5 ಲಕ್ಷ ರು. (ಎಕ್ಸ್ ಶೋ ರೂಂ ಪುಣೆ)

ಎಂವಿ ಆಗಸ್ಟಾ ಎಫ್4

ಕೈನಾಟಿಕ್ ಸಂಸ್ಥೆಯ ಜತೆಗಾರಿಕೆಯಲ್ಲಿ ಇಟಲಿಯ ಐಕಾನಿಕ್ ಸೂಪರ್ ಬೈಕ್ ಗಳನ್ನು ಭಾರತದಲ್ಲಿ ಆಗಸ್ಟಾ ಮಾರಾಟ ಮಾಡಲಿದೆ. ಇದರಂತೆ ಚೊಚ್ಚಲ ಬ್ರೂಟಲ್ 1090 ಬೈಕ್ ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿತ್ತು.

ಭಾರತದಲ್ಲಿ ಎಂವಿ ಆಗಸ್ಟಾ ಚೊಚ್ಚಲ ಬೈಕ್ ಬಿಡುಗಡೆ

ಆಗಸ್ಟಾ ಕೈನಾಟಿಕ್ ಜೊತೆಗಾರಿಕೆಯು ಮೋಟಾರಾಯಲ್ ಎಂಬ ಹೆಸರಿನಿಂದ ಗುರುತಿಸಲ್ಪಡಲಿದೆ. ಅಲ್ಲದೆ ನೂತನ ಎರಡು ಬೈಕ್ ಗಳು ಮೋಟಾರಾಯಲ್ ಡಾಟ್ ಇನ್ (http://motoroyale.in/) ವೆಬ್ ಸೈಟ್ ನಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

ಎಂವಿ ಆಗಸ್ಟಾ ಎಫ್4

ಈಗ ಮುಂಬೈನಲ್ಲಿ ಮೊದಲ ಡೀಲರ್ ಶಿಪ್ ತೆರೆದುಕೊಳ್ಳಲಿರುವ ಆಗಸ್ಟಾ ತದಾ ಬಳಿಕ ಬೆಂಗಳೂರು, ದೆಹಲಿ ಮತ್ತು ಪುಣೆಗಳಂತಹ ನಗರಗಳಿಗೂ ವಿತರಕ ಜಾಲವನ್ನು ವಿತರಿಸಲಿದೆ.

ಎಂಜಿನ್ ತಾಂತ್ರಿಕತೆ

 • ಎಂವಿ ಆಗಸ್ಟಾ ಎಫ್4
 • 998 ಸಿಸಿ,
 • ಲಿಕ್ವಿಡ್ ಕೂಲ್ಡ್,
 • 192.25 ಅಶ್ವಶಕ್ತಿ,
 • 110.8 ಎನ್‌ಎಂ ತಿರುಗುಬಲ
 • ಆರು ಸ್ಪೀಡ್ ಗೇರ್ ಬಾಕ್ಸ್
ಎಂವಿ ಆಗಸ್ಟಾ ಎಫ್4

ವಿಶಿಷ್ಟತೆ

 • ವೆಹಿಕಲ್ ಇಂಟೇಗ್ರೇಟಡ್ ಕಂಟ್ರೋಲ್ ಸಿಸ್ಟಂ (MVICS),
 • ಎಲೆಕ್ಟ್ರಾನಿಕಲಿ ಅಶಿಸ್ಟಡ್ ಶಿಫ್ಟ್ (ಇಎಎಸ್),
 • ಟಾರ್ಕ್ ಶಿಫ್ಟ್ ಸಿಸ್ಟಂ,
 • ಲೀನ್ ಆಂಗಲ್ ಸೆನ್ಸಾರ್,
 • 8 ವಿಧಗಳ ಟ್ರಾಕ್ಷನ್ ಕಂಟ್ರೋಲ್,
 • ಎಲ್ಡಾರ್ (ELDOR) ಎಲೆಕ್ಟಾನಿಕ್ ಪ್ಯಾಕೇಜ್ ಜೊತೆ ರೈಡ್ ಬೈ ವೈರ್

ಪ್ರತಿಸ್ಪರ್ಧಿ: ಡುಕಾಟಿ 1299 ಪಿನಾಗಲ್ ಸೂಪರ್ ಬೈಕ್.

ಎಂವಿ ಆಗಸ್ಟಾ ಎಫ್4
ಎಂವಿ ಆಗಸ್ಟಾ ಎಫ್4
English summary
MV Agusta F4 Launches In India At A Price Of Rs. 25.5 Lakh
Story first published: Thursday, October 22, 2015, 11:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X