ರಾಯಲ್ ಎನ್‌ಫೀಲ್ಡ್‌ನಿಂದ 2 ಹೊಚ್ಚ ಹೊಸ ಬುಲೆಟ್

Written By:

ದೇಶದ ಐಕಾನಿಕ್ ಬುಲೆಟ್ ತಯಾರಿಕ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್ ಹೊಸ ಪೀಳಿಗೆಯ ಬೇಡಿಕೆಗಳಿಗೆ ಅನುಸಾರವಾಗಿ ಮುಂದಿನ ವರ್ಷಗಳಲ್ಲಿ ಎರಡು ಹೊಚ್ಚ ಹೊಸ ಬುಲೆಟ್‌ಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈ ಬಗ್ಗೆ ಚೆನ್ನೈ ಮೂಲದ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್ ಖಚಿತಪಡಿಸಿದೆ. ದೇಶದ ಪ್ರೀಮಿಯಂ ದ್ವಿಚಕ್ರ ವಾಹನಗಳಲ್ಲಿ ರಾಯಲ್ ಎನ್‌ಫೀಲ್ಡ್ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.

royal enfield

ಬಲ್ಲ ಮೂಲಗಳ ಪ್ರಕಾರ ಎನ್‌ಫೀಲ್ಡ್ ಹೊಸ ಮಾದರಿಗಳು 2016 ಹಾಗೂ 2017ರಲ್ಲಿ ಆಗಮನವಾಗಲಿದೆ. ಈ ಪೈಕಿ ಮೊದಲನೇ ಬೈಕ್ 350ರಿಂದ 400 ಸಿಸಿ ಒಳಗಡೆ ಕಾಣಿಸಿಕೊಳ್ಳಲಿದೆ.

ಇದಕ್ಕೆ ಈಗಾಗಲೇ ನಾಮಕರಣ ಕೂಡಾ ಆಗಿದ್ದು 'ಹಿಮಾಲಯನ್' ಎಂದೆನಿಸಿಕೊಳ್ಳಲಿದೆ. ಇದೊಂದು ಸಾಹಸ ಪ್ರಿಯರಿಗೆ ಪರಿಪೂರ್ಣ ಬೈಕ್ ಎನಿಸಿಕೊಳ್ಳಲಿದೆ.

2017ರ ವೇಳೆಯಾಗುವಾಗ ಮಗದೊಂದು ಕ್ರೂಸರ್ ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದುವರೆಗೆ ಬೈಕ್ ಹೆಸರು ಹೊರಬಂದಿಲ್ಲ. ಇದು 750 ಸಿಸಿ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಆದರೆ ಹೆಚ್ಚಿನ ಮಾಹಿತಿಗಳು ಸದ್ಯಕ್ಕೆ ಲಭ್ಯವಾಗಿಲ್ಲ.

royal enfield

ನಿಕಟ ಭವಿಷ್ಯದಲ್ಲೇ ತನ್ನ ಎರಡು ಘಟಕಗಳಿಗೆ ಎನ್‌ಫೀಲ್ಡ್ ಹೂಡಿಕೆ ಮಾಡಲಿದೆ. ಇದರ ಮೊದಲ ಘಟಕ ಚೆನ್ನೈ ಹಾಗೂ ಎರಡನೇಯದ್ದು ಬ್ರಿಟನ್‌ನಲ್ಲಿ ಆಗಿರಲಿದೆ. ಈ ಮೂಲಕ ಜಾಗತಿಕ ಮಾರುಕಟ್ಟೆಗೂ ಆದ್ಯತೆ ಕೊಡಲಿದೆ.

English summary
Royal Enfield has confirmed that it is working on new motorcycles. The Indian manufacturer will be launching a host of new motorcycles between 2016 to 2017.
Story first published: Tuesday, March 3, 2015, 7:42 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark