ಭಾರತದಲ್ಲಿ ಯಮಹಾ ಆಲ್ಫಾ ಸ್ಕೂಟರ್‌ಗೆ ಹಿಂದಕ್ಕೆ ಕರೆ

Written By:

ಭಾರತದ ವಿಸ್ತಾರವಾದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಜಪಾನ್ ಮೂಲದ ಯಮಹಾ ಸ್ಕೂಟರ್‌ಗಳು ತನ್ನದೇ ಆದ ಮಾರಾಟ ವಲಯವನ್ನು ಕಾಯ್ದುಕೊಂಡಿದೆ. ಈ ಪೈಕಿ ಯಮಹಾ ಆಲ್ಫಾ ಉತ್ತಮ ಹೆಸರು ಮಾಡಿಕೊಂಡಿದೆ.

ಆದರೆ ಈಗ ಬಂದಿರುವ ಮಾಹಿತಿಗಳ ಪ್ರಕಾರ ಯಮಹಾ ಆಲ್ಫಾದಲ್ಲಿ ಸಂಭವನೀಯ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಜನಪ್ರಿಯ ಮಾದರಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗುತ್ತದೆ.

yamaha alpha

ಪ್ರಮುಖವಾಗಿಯೂ ಎಂಜಿನ್ ಆಯಿಲ್ ಲೀಕ್ ಆಗುವ ಭೀತಿಯ ಹಿನ್ನಲೆಯಲ್ಲಿ ರಿಕಾಲ್‌ಗೆ ಕರೆ ನೀಡಲಾಗಿದೆ. ಎಂಜಿನ್ ಸಿಲಿಂಡರ್ ಮೇಲಿರುವ ಒ-ರಿಂಗ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಎಂಜಿನಿಯರುಗಳು ವಿವರಣೆ ನೀಡಿದ್ದಾರೆ.

ಪ್ರಸ್ತುತ ಸಮಸ್ಯೆಯನ್ನು ಕೇವಲ ಮೂರು ತಾಸಿನೊಳಗೆ ಸರಿಪಡಿಸಿ ಕೊಡಲಾಗುತ್ತದೆ. ಈ ಸಂಬಂಧ ಯಮಹಾ ಡೀಲರುಗಳು ಗ್ರಾಹಕರ ಸಂಪರ್ಕದಲ್ಲಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಲಭಿಸಿದೆ.

ನೂತನ ಆಲ್ಫಾದಲ್ಲಿ 113 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಆಳವಡಿಸಲಾಗಿದ್ದು, 7.1 ಅಶ್ವಶಕ್ತಿ (8.1 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇದು ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ, ಸುಜುಕಿ ಸ್ವಿಷ್, ಟಿವಿಎಸ್ ಜೂಪಿಟರ್ ಹಾಗೂ ಪಿಯಾಜಿಯೊ ವೆಸ್ಪಾ ಸ್ಕೂಟರುಗಳ ಸವಾಲುಗಳನ್ನು ಎದುರಿಸುತ್ತದೆ.

English summary
The Alpha which was launched some time ago has been recalled for an engine issue. The issue has been raised due to a possible oil leakage problem. Engineers believe there could be an issue with their O-Ring in the cylinder head.
Story first published: Thursday, January 8, 2015, 12:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark