ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ; ಏನದು ಗೊತ್ತಾ?

Written By:

ಬಜಾಜ್ ಡೊಮಿನರ್ 400 ಬೈಕ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಮಗದೊಂದು ವಿಶಿಷ್ಟತೆಯನ್ನು ಆಕರ್ಷಕ ಟೀಸರ್ ಮೂಲಕ ಸಂಸ್ಥೆಯು ಬಹಿರಂಗಗೊಳಿಸಿದೆ. ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ.

To Follow DriveSpark On Facebook, Click The Like Button
ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಹೌದು, ಅತಿ ನೂತನ ಬಜಾಜ್ ಡೊಮಿನರ್ 400 ಬೈಕ್ ಎಲ್ ಇಡಿ ಲೈಟಿಂಗ್ಸ್ ಗಳನ್ನು ಒಳಗೊಂಡಿರುವ ಅತ್ಯಾಕರ್ಷಕ ಹೆಡ್ ಲ್ಯಾಂಪ್ ವ್ಯವಸ್ಥೆಯನ್ನು ಗಿಟ್ಟಿಸಿಕೊಂಡಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಬಜಾಜ್ ಡೊಮಿನರ್ 400 ಕ್ರೀಡಾತ್ಮಕ ಬೈಕ್ 2016 ಡಿಸೆಂಬರ್ 15ರಂದು ಭರ್ಜರಿ ಬಿಡುಗಡೆ ಕಾಣಲಿದೆ. ಈ ಸಂಬಂಧ ಟೀಸರ್ ಚಿತ್ರವನ್ನು ಒಂದೊಂದಾಗಿ ಬಜಾಜ್ ಬಿಡುಗಡೆಗೊಳಿಸುತ್ತಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಬಜಾಜ್ ಡೊಮಿನರ್ 400 ಕ್ರೂಸರ್ ಸ್ಪೋರ್ಟ್ ಬೈಕ್ ಮೊದಲ ಬಾರಿಗೆ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿತ್ತು. ಇದು ಪ್ರಮುಖವಾಗಿಯೂ ರಾಯಲ್ ಎನ್ ಫೀಲ್ಡ್ ಮತ್ತು ಮಹೀಂದ್ರ ಮೊಜೊ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಕೆಟಿಎಂ ಎಂಜಿನ್ ಫ್ಯಾಮಿಲಿಯ 373.2 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಂಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಡೊಮಿನರ್ 35 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಬಜಾಜ್ ಡೊಮಿನರ್ 400 ಭಾರತ ಮಾರುಕಟ್ಟೆಯಲ್ಲಿ ಅಂದಾಜು 1.5 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

'ಬಿಗ್ ಬೈಕ್ ಫಾರ್ ಬಿಗ್ ಬಾಯ್ಸ್' ಎಂಬ ಧ್ಯೇಯ ವಾಕ್ಯದೊಂದಿಗೆ ಬಜಾಜ್ ಡೊಮಿನರ್ 400 ರಸ್ತೆಗಿಳಿಯಲಿದೆ. ಅಲ್ಲದೆ ಯಾವತ್ತೂ ಬೈಕ್ ರೈಡಿಂಗ್ ಸಮಾನವಾಗಿರಲ್ಲ ಎಂಬುದನ್ನು ಉಲ್ಲೇಖಿಸಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ದೇಶದ ನಂ.1 ಕ್ರೀಡಾ ಬೈಕ್ ತಯಾರಕರಾದ ಬಜಾಜ್ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಅತ್ಯಂತ ಶಕ್ತಿಶಾಲಿ ಬೈಕ್ ಇದಾಗಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಇನ್ನುಳಿದಂತೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಸಂಪೂರ್ಣ ಡಿಜಿಟಲ್ ಹಾಗೂ ವಿಭಜಿತ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಯಾಕ್-ಲಿಟ್ ಸ್ವಿಚ್ ಗೇರ್ ಹಾಗೂ ಮೊನೊಶಾಕ್ ಸಸ್ಪೆನ್ಷನ್ ಸೌಲಭ್ಯವೂ ಲಭ್ಯವಾಗಲಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಸ್ಪಾನಿಶ್ ಪದ ಡೊಮಿನರ್ ಎಂಬುದು ಮೀರಿಸು ಅಥವಾ ಉತ್ಕೃಷ್ಟ ಶಕ್ತಿಯ ಅರ್ಥವನ್ನು ನೀಡುತ್ತಿದೆ.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

ಇದಕ್ಕೂ ಮೊದಲು ನವೆಂಬರ್ 18ರಂದು ಡೊಮಿನರ್ 400 ಚೊಚ್ಚಲ ಬೈಕನ್ನು ಚಕನ್ ಘಟಕದಲ್ಲಿ ಮಹಿಳಾ ಎಂಜಿನಿಯರ್ ಗಳ ಸಾರಥ್ಯದಲ್ಲಿ ಹೊರತರಲಾಗಿತ್ತು.

ಬಜಾಜ್ ಡೊಮಿನರ್ 400 ಮಗದೊಂದು ವಿಶಿಷ್ಟತೆ ಬಹಿರಂಗ

2014 ಆಟೋ ಎಕ್ಸ್ ಪೋದಲ್ಲಿ ಬಜಾಜ್ ಕ್ರೂಸರ್ ಸ್ಪೋರ್ಟ್ 400 ಬೈಕ್ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ತದಾ ಬಳಿಕ ವ್ಯಾಂಟೇಜ್ ಸ್ಪೋರ್ಟ್ 400 ಹಾಗೂ ಕ್ರೆಟೊಸ್ 400 ಎಂದು ಹೆಸರಿಸಿಕೊಂಡರೂ ಕೊನೆಗೆ ಡೊಮಿನರ್ ನಲ್ಲಿ ಅಂತ್ಯ ಕಂಡಿದೆ.

English summary
Bajaj Teases Dominar 400 Again Revealing New Feature
Story first published: Monday, December 12, 2016, 11:48 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark