ಬೆಂಗ್ಳೂರಿಗರಿಗೆ ತಲೆನೋವಾದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ

Written By:

ನಿರೀಕ್ಷೆಯಂತೆಯೇ ರಾಜ್ಯ ಸರಕಾರವು ಬೆಂಗಳೂರಿನಲ್ಲಿ ಹಿಂಬದಿ ದ್ವಿಚಕ್ರ ಸವಾರರಿಗೂ ಹೆಲ್ಮೆಟ್ ನಿಯಮವನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ಇದರೊಂದಿಗೆ ದೈನಂದಿನ ದ್ವಿಚಕ್ರ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ.

ಇದಕ್ಕೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆಯು 2015 ಡಿಸೆಂಬರ್ 31ರಂದೇ ಅಧಿಸೂಚನೆ ಹೊರಡಿಸಿದ್ದು, 2016 ಜನವರಿ 15ರೊಳಗೆ ನಿಯಮ ಕಡ್ಡಾಯವಾಗಿ ಜಾರಿಗೆ ಬರಲಿದೆ.

ಬೆಂಗ್ಳೂರಿಗರಿಗೆ ತಲೆನೋವಾದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ

ಸಾರಿಗೆ ಇಲಾಖೆಯ ಪ್ರಕಟಣೆಯ ಪ್ರಕಾರ ದ್ವಿಚಕ್ರ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ನಿಮಯ ಉಲ್ಲಂಘಿಸುವವರು 100 ರುಪಾಯಿಗಳ ದಂಡವನ್ನು ತೆರಬೇಕಾಗುತ್ತದೆ.

ಬೆಂಗ್ಳೂರಿಗರಿಗೆ ತಲೆನೋವಾದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ

ಹೊಸ ನಿಮಯದಿಂದ ಹೆಲ್ಮೆಟ್ ಮಾರಾಟದಲ್ಲಿ ಭಾರಿ ಪ್ರಮಾಣದ ಹೆಚ್ಚಳ ಕಂಡು ಬರಲಿದೆ. ಬೆಂಗಳೂರಿನಲ್ಲಿ ಮಾತ್ರವಾಗಿ 40.95 ಲಕ್ಷ ದ್ವಿಚಕ್ರ ವಾಹನಗಳು ದೈನಂದಿನ ಸವಾರಿ ನಡೆಸುತ್ತಿದೆ.

ಬೆಂಗ್ಳೂರಿಗರಿಗೆ ತಲೆನೋವಾದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ

ಮೊದಲ 15 ದಿನಗಳ ಕಾಲ ನಿಮಯವನ್ನು ಸಡಿಲಗೊಳಿಸಿರುವ ಸಾರಿಗೆ ಇಲಾಖೆಯು ಈ ವೇಳೆಯಲ್ಲಿ ಹೆಲ್ಮೆಟ್ ಖರೀದಿಗಾಗಿ ಕಾಲವಕಾಶವನ್ನು ನೀಡಿದೆ.

ಬೆಂಗ್ಳೂರಿಗರಿಗೆ ತಲೆನೋವಾದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ

ದ್ವಿಚಕ್ರ ಸವಾರರ ಸುರಕ್ಷತೆಯ ದೃಷ್ಟಿಕೋನದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ ಉಚಿತವೆನಿಸಿದರೂ ಇದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬೆಂಗ್ಳೂರಿಗರಿಗೆ ತಲೆನೋವಾದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ನಿಯಮ

ಒಟ್ಟಿನಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವುದು ಪ್ರಾಯೋಗಿಕವಾಗಿ ಎಷ್ಟರ ಮಟ್ಟಿಗೆ ಯಶ ಕಾಣಲಿದೆ ಎಂಬುದರ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚಿಸಿರಿ.

English summary
Bengaluru: helmet made mandatory for pillion riders
Story first published: Monday, January 4, 2016, 12:56 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark