ರಹಸ್ಯವಾಗಿ ಬಿಎಂಡಬ್ಲ್ಯು-ಟಿವಿಎಸ್ ನಿಂದ ಮಗದೊಂದು ಟೂರಿಂಗ್ ಬೈಕ್ ಅಭಿವೃದ್ಧಿ

Written By:

ಜರ್ಮನಿಯ ಪ್ರತಿಷ್ಠಿತ ದ್ವಿಚಕ್ರ ವಾಹನ ಸಂಸ್ಥೆ ಬಿಎಂಡ್ಲ್ಯು ಮೊಟೊರಾಡ್ ಮತ್ತು ಭಾರತ ಮೂಲದ ಟಿವಿಎಸ್ ಮೋಟಾರ್ಸ್ ಜಂಟಿ ಸಹಭಾಗಿತ್ವದಲ್ಲಿ ಅತ್ಯಾಧುನಿಕ ಜಿ310 ಬೈಕ್ ನಿರ್ಮಿಸಲಾಗಿದ್ದು, ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಅಪ್ಪಳಿಸಲಿದೆ. ಪ್ರಸ್ತುತ ವಾಹನ ನಿಕಟವರ್ತಿಗಳಿಂದ ಬಂದಿರುವ ಮಾಹಿತಿಗಳ ಪ್ರಕಾರ ಈ ಎರಡು ಜನಪ್ರಿಯ ಸಂಸ್ಥೆಗಳು ಮಗದೊಂದು ಉತ್ಪನ್ನದ ತಯಾರಿಯಲ್ಲಿದೆ.

ಬಿಎಂಡಬ್ಲ್ಯು ಹಾಗೂ ಟಿವಿಎಸ್ ಮಗದೊಂದು ಜಿಎಸ್310ಆರ್ ಎಂಬ ಅಡ್ವೆಂಚರ್ ಟೂರರ್ ಬೈಕ್ ನಿರ್ಮಾಣದಲ್ಲಿ ರಹಸ್ಯವಾಗಿ ತೊಡಗಿಸಿಕೊಂಡಿದೆ. ನೂತನ ಜಿಎಸ್310ಆರ್ 2017ನೇ ಸಾಲಿನಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ.

ರಹಸ್ಯವಾಗಿ ಬಿಎಂಡಬ್ಲ್ಯು-ಟಿವಿಎಸ್ ನಿಂದ ಮಗದೊಂದು ಟೂರಿಂಗ್ ಬೈಕ್ ಅಭಿವೃದ್ಧಿ

ಬಿಎಂಡಬ್ಲ್ಯು ಜಿ310ಆರ್ ಇನ್ನಷ್ಟೇ ಭಾರತ ಮಾರುಕಟ್ಟೆಯನ್ನು ತಲುಪಬೇಕಿದೆ. ಇನ್ನೊಂದೆಡೆ ಟಿವಿಎಸ್ ಸಹ ಇದೇ ತಳಹದಿಯಲ್ಲಿ ನಿರ್ಮಾಣವಾಗಿರುವ ಅಕುಲಾ 310 ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದು ಜನಪ್ರಿಯ ಅಪಾಚಿ ಎಂಬ ಹೆಸರಿನಿಂದಲೂ ಗುರುತಿಸುವ ಸಾಧ್ಯತೆಯಿದೆ.

ರಹಸ್ಯವಾಗಿ ಬಿಎಂಡಬ್ಲ್ಯು-ಟಿವಿಎಸ್ ನಿಂದ ಮಗದೊಂದು ಟೂರಿಂಗ್ ಬೈಕ್ ಅಭಿವೃದ್ಧಿ

ಈಗ ಜಿ310ಆರ್ ಮಾದರಿಯಿಂದ ಪ್ರೇರಣೆ ಪಡೆದುಕೊಂಡು 310 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಯಂತ್ರಿತ ಜಿಎಸ್310ಆರ್ ಬೈಕನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದು 24 ಎನ್ ಎಂ ತಿರುಗುಬಲದಲ್ಲಿ 34 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ರಹಸ್ಯವಾಗಿ ಬಿಎಂಡಬ್ಲ್ಯು-ಟಿವಿಎಸ್ ನಿಂದ ಮಗದೊಂದು ಟೂರಿಂಗ್ ಬೈಕ್ ಅಭಿವೃದ್ಧಿ

ಒಂದು ಟೂರಿಂಗ್ ಬೈಕ್ ಗೆ ಬೇಕಾದ ಎಲ್ಲ ರೀತಿಯ ವೈಶಿಷ್ಟ್ಯಗಳನ್ನು ಜಿಎಸ್310ಆರ್ ಪಡೆದುಕೊಳ್ಳಲಿದೆ. ಇನ್ನು ಕೆಲವೊಂದು ಗಮನಾರ್ಹ ವಿನ್ಯಾಸ ನೀತಿಯನ್ನು ಜಿ310ಆರ್ ಜೊತೆಗೆ ಹಂಚಿಕೊಳ್ಳಲಿದೆ.

ರಹಸ್ಯವಾಗಿ ಬಿಎಂಡಬ್ಲ್ಯು-ಟಿವಿಎಸ್ ನಿಂದ ಮಗದೊಂದು ಟೂರಿಂಗ್ ಬೈಕ್ ಅಭಿವೃದ್ಧಿ

ಅಂದ ಹಾಗೆ ತಮಿಳುನಾಡಿನ ಹೊಸೂರು ಘಟಕದಲ್ಲಿ ನಿರ್ಮಾಣವಾಗಲಿರುವ ಬಿಎಂಡಬ್ಲ್ಯು ಜಿ310ಆರ್ 2017ನೇ ಸಾಲಿನ ವರ್ಷಾರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ರಹಸ್ಯವಾಗಿ ಬಿಎಂಡಬ್ಲ್ಯು-ಟಿವಿಎಸ್ ನಿಂದ ಮಗದೊಂದು ಟೂರಿಂಗ್ ಬೈಕ್ ಅಭಿವೃದ್ಧಿ

ಬಿಎಂಡಬ್ಲ್ಯು 310ಆರ್ ಬೈಕ್‌ನ ಟಿವಿಎಸ್ ಪ್ರತಿರೂಪವಾಗಿರುವ ಅಕುಲಾ ಸಂಪೂರ್ಣ ಫೇರ್ಡ್ ವರ್ಷನ್ ಆವೃತ್ತಿಯು, 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದನ್ನು ಪ್ರಸಕ್ತ ಸಾಲಿನಲ್ಲೇ ಸಂಸ್ಥೆಯ ಜನಪ್ರಿಯ 'ಅಪಾಚಿ' ಎಂಬ ಹೆಸರಿನಲ್ಲಿ ಮಾರಾಟವಾಗುವುದು ಬಹುತೇಕ ಖಚಿತವೆನಿಸಿದೆ.

English summary
BMW And TVS Is Secretly Developing An Adventure/Touring Motorcycle
Story first published: Saturday, September 3, 2016, 13:02 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark