ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಸ್ಪ್ಲೆಂಡರ್ ಐಸ್ಮಾರ್ಟ್ 100 ಸಿಸಿ ಬೈಕ್ ನ ಮಾರಾಟವನ್ನು ಹಿಂಪಡೆದಿದೆ. ಹ್ಹಾಂ! ಇದ್ಯಾಕೆ ಇಂತಹದೊಂದು ನಿರ್ಧಾರ? ಎಂಬ ಸಹಜ ಪ್ರಶ್ನೆ ಬೈಕ್ ಪ್ರೇಮಿಗಳಲ್ಲಿ ಮೂಡಬಹುದು.

ವಿಷಯ ಏನೆಂದರೆ, ಅತಿ ನೂತನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕ್ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವಂತೆಯೇ ಹೊಸ ಮಾದರಿಗೆ ಹಳೆಯ ಐಸ್ಮಾರ್ಟ್ 100 ಸಿಸಿ ಬೈಕ್ ಹಾದಿ ಬಿಟ್ಟುಕೊಡುತ್ತಿದೆ.

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

ಹೀರೊ ಸಂಸ್ಥೆಯು 2014ನೇ ಇಸವಿಯಲ್ಲಿ ಮೊದಲ ಬಾರಿಗೆ ಐಸ್ಮಾರ್ಟ್ ತಂತ್ರಜ್ಞಾನವನ್ನು (ಐ3ಎಸ್) ಒಳಗೊಂಡಿರುವ ಐಸ್ಮಾರ್ಟ್ ಬೈಕನ್ನು ಪರಿಚಯಿಸಿತ್ತು.

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

ಇದರಲ್ಲಿರುವ ಎಂಜಿನ್ ಸ್ಟ್ಯಾರ್ಟ್-ಸ್ಟಾಪ್ ತಂತ್ರಗಾರಿಕೆಯು ಇಂಧನ ಉಳಿತಾಯದೊಂದಿಗೆ ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಿತ್ತು.

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

ಇದರ 97.2 ಸಿಸಿ ಏರ್ ಕೂಲ್ಡ್ ಫೋರ್ ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಪಿಡಿವಿ ಎಂಜಿನ್ 8.05 ಎನ್ ಎಂ ತಿರುಗುಬಲದಲ್ಲಿ 8.36 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿದ್ದು, ಗಂಟೆಗೆ ಗರಿಷ್ಠ 87 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

ಸಂಸ್ಥೆಯ ಪ್ರಕಾರ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 100 ಸಿಸಿ ಬೈಕ್ ಪ್ರತಿ ಲೀಟರ್ ಗೆ 102 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

ಇನ್ನೊಂದೆಡೆ ತನ್ನದೇ ಘಟಕದಲ್ಲಿ ಅಭಿವೃದ್ಧಿಪಡಿಸಿರುವ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಪ್ರಯಾಣಿಕ ಬೈಕ್, ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 9 ಎನ್ ಎಂ ತಿರುಗುಬಲದಲ್ಲಿ 8.9 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 4 ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಮಾರಾಟ ಸ್ಥಗಿತ; ಕಾರಣ ಏನಿರಬಹುದು?

ನೂತನ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕ್ ಭಾರತದಲ್ಲಿ ಅಂದಾಜು 58,000 ರು.ಗಳಷ್ಟು ದುಬಾರಿಯೆನಿಸಲು ಸಾಧ್ಯತೆಯಿದೆ. ಇದು ಕೂಡಾ 90ರಿಂದ 100ರ ಅಸುಪಾಸಿನಲ್ಲಿ ಮೈಲೇಜ್ ಕಾಪಾಡಿಕೊಳ್ಳಲಿದೆ.

Most Read Articles

Kannada
English summary
Hero Splendor iSmart 100cc Discontinued
Story first published: Friday, July 8, 2016, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X