ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

By Nagaraja

ಎಂಟ್ರಿ ಲೆವೆಲ್ ನಿರ್ವಹಣಾ ಬೈಕ್ ವಿಭಾಗದಲ್ಲೂ ಭದ್ರ ಹಿಡಿತ ಸಾಧಿಸುವ ಛಲದಲ್ಲಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆ ಹೀರೊ ಮೊಟೊಕಾರ್ಪ್, ನಿಗದಿತ ಅವಧಿಗೂ ಮೊದಲೇ ಬಹುನಿರೀಕ್ಷಿತ ಎಕ್ಸ್ ಟ್ರೀಮ್ 200 ಎಸ್ ಬೈಕನ್ನು ಬಿಡುಗಡೆ ಮಾಡಲಿದೆ. 2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಹೀರೊ ಎಕ್ಸ್ ಟ್ರೀಮ್ 200ಎಸ್, ಕ್ರೀಡಾ ಪ್ರೇಮಿ ಬೈಕ್ ಪ್ರಿಯರನ್ನು ಗಮನದಲ್ಲಿಟ್ಟು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

ಡೈಮಂಡ್ ಫ್ರೇಮ್ ಚಾಸೀಯಲ್ಲಿ ನಿರ್ಮಾಣವಾಗಿರುವ ಹೀರೊ ಎಕ್ಸ್ ಟ್ರೀಮ್ 200ಎಸ್ ಒಂದು ನೆಕ್ಡ್ ಸ್ಪೋರ್ಟ್ಸ್ ಬೈಕಾಗಿದೆ. ಇದರಲ್ಲಿ ಟ್ಯುಯಲ್ ಟೋನ್ ಮೈಬಣ್ಣ, ಹೊಂದಿಕೆಯಾಗುವ ಸೀಟು ಬಣ್ಣ, ಮಡ್ ಗಾರ್ಡ್ ಮತ್ತು ಅಲಾಯ್ ಚಕ್ರಗಳಿರಲಿದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

ಸಾಂಪ್ರದಾಯಿಕ ಫಾರ್ಕ್ ಮತ್ತು ಹಿಂಬದಿಯಲ್ಲಿ ಮೊನೊಶಾಕ್ ರಿಯರ್ ಸಸ್ಷೆನ್ಷನ್, ಎರಡು ಬದಿಗಳಲ್ಲೂ ಡಿಸ್ಕ್ ಬ್ರೇಕ್ ಮತ್ತು ಬಹು ಸ್ಪೋಕ್ ಅಲಾಯ್ ಚಕ್ರಗಳಿರಲಿದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

ವಿಭಜಿತ ಗ್ರಾಬ್ ಹ್ಯಾಂಡಲ್, ದೊಡ್ಡದಾದ ಸೈಲನ್ಸರ್, ಎಲ್ ಇಡಿ ಟೈಲ್ ಲ್ಯಾಂಪ್ ಮತ್ತು ಅನಲಾಗ್ ಡಿಜಿಟಲ್ ಮೀಟರ್ ಕನ್ಸಾಲ್ ಸಹ ಲಗತ್ತಿಸಲಾಗಿದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

ಇದರಲ್ಲಿರುವ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ 200 ಸಿಸಿ ಎಂಜಿನ್ 17.2 ಎನ್ ಎಂ ತಿರುಗುಬಲದಲ್ಲಿ 18.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

ಭಾರತ ಮಾರುಕಟ್ಟೆಯಲ್ಲಿ ಪ್ರಮುಖವಾಗಿಯೂ ಬಜಾಜ್ ಪಲ್ಸರ್ 200 ಎನ್ ಎಸ್, ಕೆಟಿಎಂ ಡ್ಯೂಕ್ 200 ಮತ್ತು ಟಿವಿಎಸ್ ಅಪಾಚಿ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

ಇದಕ್ಕೂ ಮೊದಲು ಹೀರೊ ಅಚೀವರ್ 150 ಬಿಡುಗಡೆ ವೇಳೆಯಲ್ಲಿ 2017 ಡಕಾರ್ ರಾಲಿ ವೇಳೆಯಲ್ಲಿ ಮಗದೊಂದು ಹೊಸ ಬೈಕ್ ಬಿಡುಗಡೆ ಮಾಡುವುದಾಗಿ ಸಂಸ್ಥೆ ಘೋಷಿಸಿತ್ತು. ಇದರಿಂದ 2017 ಪ್ರಾರಂಭದಲ್ಲೇ ಹೀರೊ ಎಕ್ಸ್ ಟ್ರೀಮ್ 200ಎಸ್ ಬಿಡುಗಡೆಯಾಗುವುದು ಬಹುತೇಕ ಖಚಿತವೆನಿಸಿದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

ಅದೇ ಹೊತ್ತಿಗೆ ಹೆಚ್ಚು ಶಕ್ತಿಶಾಲಿ 250 ಸಿಸಿ ಬೈಕ್ ಗಳ ತಯಾರಿಯಲ್ಲೂ ಹೀರೊ ತೊಡಗಿಸಿಕೊಂಡಿದೆ. ಹೀರೊ ಎಚ್ ಎಫ್3ಆರ್, ಹೀರೊ ಎಚ್ ಎಫ್250ಆರ್ ಮತ್ತು ಹಸ್ಟೂರ್ ಹೀರೊ ಮುಂದಿನ ಯೋಜನೆಗಳಲ್ಲಿ ಸಾಲು ಗಟ್ಟಿ ನಿಂತಿದೆ.

ಹೊಸ ವರ್ಷಕ್ಕೆ ಹೀರೊ ಎಕ್ಸ್ ಟ್ರೀಮ್ 200ಎಸ್; ವಿಶೇಷತೆಗಳೇನು?

2016ನೇ ಆರ್ಥಿಕ ಸಾಲಿನಲ್ಲಿ ಮೋಟಾರುಸೈಕಲ್ ಹಾಗೂ ಸ್ಕೂಟರ್ ಸೇರಿದಂತೆ ಹೀರೊ ಮೊಟೊಕಾರ್ಪ್ ಒಟ್ಟು 66.32 ಲಕ್ಷ ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ. ತನ್ಮೂಲಕ ಬರೋಬ್ಬರಿ 28,990 ಕೋಟಿ ರುಪಾಯಿಗಳ ಮಾರಾಟ ಮೌಲ್ಯವನ್ನು ಸಂಪಾದಿಸಿತ್ತು. ಇದು ಕಳೆದ ವಷಕ್ಕೆ ಹೋಲಿಸಿದಾಗ ಶೇಕಡಾ 31ರಷ್ಟು (3,132 ಕೋಟಿ ರು.) ಏರಿಕೆಯಾಗಿದೆ.

ಇವನ್ನೂ ಓದಿ

ಇವನ್ನೂ ಓದಿ

01. ವಿಮರ್ಶೆ: ಸಾಧನೆಯ ಹಂಬಲವಿರಲಿ; ಹೀರೊ ಅಚೀವರ್ ಗಾಡಿ ಜೊತೆಗಿರಲಿ

02. ಮತ್ತೆ ಮೋಡಿ ಮಾಡಲಿರುವ ಕರಿಜ್ಮಾ ಭರ್ಜರಿ ರಿ ಎಂಟ್ರಿಗೆ ರೆಡಿ

03. ಸ್ಟಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಹೀರೊ ಪ್ಯಾಶನ್ ಪ್ರೊ ಬಿಡುಗಡೆ

Most Read Articles

Kannada
English summary
Hero Xtreme 200S Will Be Launching In India Sooner Than Expected
Story first published: Monday, October 17, 2016, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X