ಇಂಡಿಯಾ ಬೈಕ್ ವೀಕ್ ರಂಜಿಸಿದ ಬೆನೆಲ್ಲಿ ಟೊರ್ನಡೊ 302

Written By:

ಇತ್ತೀಚೆಗಷ್ಟೇ ನವದೆಹಲಿ ಸಾಗಿದ 2016 ಆಟೋ ಎಕ್ಸ್ ಪೋದಲ್ಲಿ ನೀಡಿರುವ ಭರ್ಜರಿ ಪ್ರದರ್ಶನದ ಬೆನ್ನಲ್ಲೇ ಕಡಲ ಕಿನಾರೆ ಗೋವಾದಲ್ಲಿ ನಡೆದ 2016 ಇಂಡಿಯಾ ಬೈಕ್ ವೀಕ್ ನಲ್ಲೂ ಅತಿ ನೂತನ ಬೆನೆಲ್ಲಿ ಟೊರ್ನಡೊ 302 ತನ್ನ ಶಕ್ತಿ ಪ್ರದರ್ಶನ ನಡೆಸಿದೆ.

ಡಿಎಸ್‌ಕೆ ಸಹಯೋಗದಲ್ಲಿ ಭಾರತಕ್ಕೆ ಕಾಲಿಟ್ಟಿರುವ ಇಟಲಿಯ ಪ್ರಖ್ಯಾತ ಬೆನೆಲ್ಲಿ, ದೇಶದಲ್ಲಿ ಈಗಾಗಲೇ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸಿದೆ. ಅಲ್ಲದೆ ಭವಿಷ್ಯದಲ್ಲಿ ಬಿಡುಗಡೆಯಾಗಲಿರು ತನ್ನ ಶ್ರೇಣಿಯ ಬೈಕ್ ಗಳನ್ನು ಪ್ರದರ್ಶಿಸಿದೆ.

ಬೆನೆಲ್ಲಿ ಟೊರ್ನಡೊ 302

ಎಂಜಿನ್ ತಾಂತ್ರಿಕತೆ

300 ಸಿಸಿ ಇನ್ ಲೈನ್ ಟ್ವಿನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬೆನೆಲ್ಲಿ ಟೊರ್ನಡೊ 27 ಎನ್ ಎಂ ತಿರುಗುಬಲದಲ್ಲಿ 35 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

8.34 ಸೆಕೆಂಡುಗಳಲ್ಲಿ ಗಂಟೆಗೆ ಗರಿಷ್ಠ 100 ಕೀ.ಮೀ. ವೇಗವರ್ಧನೆ

ಗರಿಷ್ಠ ವೇಗ ಗಂಟೆಗೆ 154 ಕೀ.ಮೀ.

ಸಸ್ಪೆನ್ಷನ್, ಚಕ್ರ, ಬ್ರೇಕ್

41 ಎಂಎಂ ಅಪ್ ಸೈಡ್ ಡೌನ್ ಫಾರ್ಕ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಪಡೆಯಲಿದೆ. 17 ಇಂಚುಗಳ ಮೆಲ್ಟ್ಜರ್ ಚಕ್ರಗಳನ್ನು ಜೋಡಣೆ ಮಾಡಲಾಗಿದೆ. ಅಂತೆಯೇ ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಲಭ್ಯವಾಗಲಿದೆ.

ಬಿಡುಗಡೆ, ಬೆಲೆ

ಸರಿ ಸುಮಾರು ಮೂರು ಲಕ್ಷ ರು.ಗಳ ಅಸುಪಾಸಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವ ನೂತನ ಟೊರ್ನಡೊ 302, ಪ್ರಸಕ್ತ ಸಾಲಿನ ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಆಯಾಮ (ಎಂಎಂ)

ಉದ್ದ: 2157

ಅಗಲ: 746

ಎತ್ತರ: 1146

ಚಕ್ರಾಂತರ: 1410

ಗ್ರೌಂಡ್ ಕ್ಲಿಯರನ್ಸ್: 180

ಪ್ರತಿಸ್ಪರ್ಧಿಗಳು

ಕೆಟಿಎಂ ಡ್ಯೂಕ್ 390

ಕವಾಸಕಿ ನಿಂಜಾ 300

ಯಮಹಾ ಆರ್3

ಬೆನೆಲ್ಲಿ ಟೊರ್ನಡೊ 302 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಾಗ...

English summary
2016 India Bike Week: Benelli Showcases Sporty Tornado 302
Story first published: Thursday, February 25, 2016, 12:17 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X