50 ಲಕ್ಷ ಬೆಲೆ ಬಾಳುವ ಎಂವಿ ಅಗಸ್ಟಾ ಸೂಪರ್ ಬೈಕ್ ಗಳು ಭಾರತಕ್ಕೆ ಎಂಟ್ರಿ

By Nagaraja

ಮರ್ಸಿಡಿಸ್ ಬೆಂಝ್ ಅಧೀನತೆಯಲ್ಲಿರುವ ಇಟಲಿಯ ಹೈ ಎಂಡ್ ಸೂಪರ್ ಬೈಕ್ ತಯಾರಿಕ ಸಂಸ್ಥೆಯಾಗಿರುವ ಎಂವಿ ಅಗಸ್ಟಾ, ಪುಣೆ ತಳಹದಿಯ ಕೈನಾಟಿಕ್ ಸಂಸ್ಥೆಯ ಜೊತೆಗಾರಿಕೆಯಲ್ಲಿ ಅತಿ ನೂತನ ತ್ರಿವಳಿ ಕ್ರೀಡಾ ಬೈಕ್ ಗಳನ್ನು ಭಾರತಕ್ಕೆ ಪರಿಚಯಿಸಿದೆ.

ಎಂವಿ ಅಗಸ್ಟಾ ಬಿಡುಗಡೆ ಮಾಡಿರುವ ಐಷಾರಾಮಿ ಕ್ರೀಡಾ ಬೈಕ್ ಗಳು ಪುಣೆ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 16.78 ಲಕ್ಷ ರು.ಗಳಿಂದ ಆರಂಭವಾಗಿ 50.10 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

50 ಲಕ್ಷ ಬೆಲೆ ಬಾಳುವ ಎಂವಿ ಅಗಸ್ಟಾ ಸೂಪರ್ ಬೈಕ್ ಗಳು ಭಾರತಕ್ಕೆ ಎಂಟ್ರಿ

ಎಂವಿ ಅಗಸ್ಟಾ ಬಿಡುಗಡೆ ಮಾಡಿರುವ ಮೂರು ಲಗ್ಷುರಿ ಸೂಪರ್ ಬೈಕ್ ಗಳು ಇಂತಿದೆ: ಎಫ್4, ಎಫ್3 ಮತ್ತು ಬ್ರುಟಲ್ 1090. ಇವುಗಳನ್ನು ದೇಶದಲ್ಲಿ ಸ್ಥಿತಗೊಂಡಿರುವ ಆರು ಶೋ ರೂಂಗಳ ಮುಖಾಂತರ ವಿತರಣೆ ಮಾಡಲಾಗುವುದು. ಸಂಸ್ಥೆಯು ಎಂವಿ ಅಗಸ್ಟಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಕಾರ್ಯಾಚರಿಸಲಿದೆ.

50 ಲಕ್ಷ ಬೆಲೆ ಬಾಳುವ ಎಂವಿ ಅಗಸ್ಟಾ ಸೂಪರ್ ಬೈಕ್ ಗಳು ಭಾರತಕ್ಕೆ ಎಂಟ್ರಿ

ನಾಲ್ಕು ದಶಕದಷ್ಟು ಹಿಂದೆ ಭಾರತದಲ್ಲಿ ಗೈಗೆಟುಕುವ ದರಗಳಲ್ಲಿ ಲುನಾ ಮೊಪೆಡ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿರುವ ಕೈನಾಟಿಕ್ ಸಂಸ್ಥೆಯ ಜೊತೆಗಿನ ಇಟಲಿಯ ಐಕಾನಿಕ್ ಎಂವಿ ಅಗಸ್ಟಾ ಸಹಭಾಗಿತ್ವವು ಹಲವಾರು ಕಾರಣಗಳಿಂದಾಗಿ ಮಹತ್ವದೆನಿಸಿಕೊಂಡಿದೆ.

50 ಲಕ್ಷ ಬೆಲೆ ಬಾಳುವ ಎಂವಿ ಅಗಸ್ಟಾ ಸೂಪರ್ ಬೈಕ್ ಗಳು ಭಾರತಕ್ಕೆ ಎಂಟ್ರಿ

ಎಂವಿ ಅಗಸ್ಟಾ ಕಿಟ್ ಗಳನ್ನು ಭಾರತಕ್ಕೆ ರವಾನಿಸಿದ ಬಳಿಕ ಇಲ್ಲಿನ ಅಹ್ಮೆದ್ ನಗರದಲ್ಲಿರುವ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆ ಮಾಡಲಾಗುವುದು. ಬಳಿಕ ಹೊಸತಾದ ತೆರೆದುಕೊಂಡಿರುವ 'ಮೊಟೊರಾಯಲ್' ಶೋ ರೂಂ ಮುಖಾಂತರ ವಿತರಣೆ ಮಾಡಲಾಗುವುದು.

50 ಲಕ್ಷ ಬೆಲೆ ಬಾಳುವ ಎಂವಿ ಅಗಸ್ಟಾ ಸೂಪರ್ ಬೈಕ್ ಗಳು ಭಾರತಕ್ಕೆ ಎಂಟ್ರಿ

ಮುಂದಿನ ಎರಡು ವರ್ಷದೊಳಗೆ 10ರಿಂದ 12 ಅಗಸ್ಟಾ ಸೂಪರ್ ಬೈಕ್ ಗಳನ್ನು ಭಾರತಕ್ಕೆ ಪರಿಚಯಿಸುವ ಇರಾದೆಯನ್ನು ಕೈನಾಟಿಕ್ ವ್ಯಕ್ತಪಡಿಸಿದೆ. ಈ ಮೂಲಕ ಗರಿಷ್ಠ ಮಾರಾಟವನ್ನು ಗುರಿಯಿರಿಸಿಕೊಂಡಿದ್ದು, ಹಂತ ಹಂತವಾಗಿ ಯೋಜನೆ ಜಾರಿಗೊಳಿಸಲಾಗುವುದು.

50 ಲಕ್ಷ ಬೆಲೆ ಬಾಳುವ ಎಂವಿ ಅಗಸ್ಟಾ ಸೂಪರ್ ಬೈಕ್ ಗಳು ಭಾರತಕ್ಕೆ ಎಂಟ್ರಿ

ಪುಣೆಯಲ್ಲಿ ಎಕ್ಸ್ ಕ್ಲೂಸಿವ್ ಡೀಲರ್ ಶಿಪ್ ತೆರೆದುಕೊಂಡಿರುವ ಎಂ ಅಗಸ್ಟಾ, ಸದ್ಯದಲ್ಲೇ ಬೆಂಗಳೂರು, ಮುಂಬೈ, ಚೆನ್ನೈ, ಅಹಮದಾಬಾದ್ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಗೂ ವಿಸ್ತರಿಸಲಿದೆ.

ಎಫ್4

ಎಫ್4

ಎಫ್4 ಮಾದರಿಯು ಮೂರು ವೆರಿಯಂಟ್ ಗಳಲ್ಲಿ ಇದು ಲಭ್ಯವಾಗಲಿದೆ. ಅವುಗಳೆಂದರೆ ಎಫ್4, ಆಫ್4 ಆರ್‌ಆರ್ ಮತ್ತು ಎಫ್4 ಆರ್‌ಸಿ

  • ಎಫ್4: 26.78 ಲಕ್ಷ ರು.
  • ಆಫ್4 ಆರ್‌ಆರ್: 35.71 ಲಕ್ಷ ರು.
  • ಎಫ್4 ಆರ್‌ಸಿ: 50.01 ಲಕ್ಷ ರು.
  • ಎಫ್4

    ಎಫ್4

    ಇದರಲ್ಲಿರುವ 998 ಸಿಸಿ 4 ಸಿಲಿಂಡರ್ ಎಂಜಿನ್ 111 ಎನ್ ಎಂ ತಿರುಗುಬಲದಲ್ಲಿ 195 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ರೆಡ್/ಸಿಲ್ವರ್/ಮ್ಯಾಟ್ ಬ್ಲ್ಯಾಕ್ ಮತ್ತು ವೈಟ್ ಐಸ್ ಪಿಯರ್ಲ್/ಮ್ಯಾಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.

    ಎಫ್4

    ಎಫ್4

    ಇಟಲಿಯ ಐಕಾನಿಕ್ ಮೋಟಾರ್ ಸೈಕಲ್ ವಿನ್ಯಾಸಗಾರ ಮಸ್ಸಿಮೊ ತಂಬುರಿನಿ ಎಂವಿ ಅಗಸ್ಟಾ ಎಫ್4 ಮಾದರಿಯ ಸೂತ್ರಧಾರಿಯಾಗಿದ್ದಾರೆ. ಅಲ್ಲದೆ ಯುರೋಪ್, ಅಮೆರಿಕ ಮತ್ತು ಜಪಾನ್ ರಾಷ್ಟ್ರಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

    ಎಫ್4 ಆರ್ ಎರ್

    ಎಫ್4 ಆರ್ ಎರ್

    998ಸಿಸಿ 4 ಸಿಲಿಂಡರ್ ಎಂಜಿನ್ ನಿಂದಲೇ ನಿಯಂತ್ರಿಸಲ್ಪಡುವ ಎಫ್4 ಆರ್ ಆರ್ ಗರಿಷ್ಠ 201 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ಪುಣೆ ಎಕ್ಸ್ ಶೋ ರೂಂ ಬೆಲೆ 35.71 ಲಕ್ಷ ರು.ಗಳಾಗಿದ್ದು, ಗಂಟೆಗೆ ಗರಿಷ್ಠ 297.5 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

    ಎಫ್4 ಆರ್ ಎರ್

    ಎಫ್4 ಆರ್ ಎರ್

    998ಸಿಸಿ 4 ಸಿಲಿಂಡರ್ ಎಂಜಿನ್ ನಿಂದಲೇ ನಿಯಂತ್ರಿಸಲ್ಪಡುವ ಎಫ್4 ಆರ್ ಆರ್ ಗರಿಷ್ಠ 201 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ಪುಣೆ ಎಕ್ಸ್ ಶೋ ರೂಂ ಬೆಲೆ 35.71 ಲಕ್ಷ ರು.ಗಳಾಗಿದ್ದು, ಗಂಟೆಗೆ ಗರಿಷ್ಠ 297.5 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

    ಎಫ್4 ಆರ್ ಆರ್

    ಎಫ್4 ಆರ್ ಆರ್

    ಇದು ಎಫ್4 ಶ್ರೇಣಿಯ ಟಾಪ್ ಎಂಡ್ ವೆರಿಯಂಟ್ ಆಗಿದ್ದು, ವೈಟ್ ಐಸ್ ಪಿಯರ್ಲ್/ಮೆಟಲ್ ಬ್ಲ್ಯಾಕ್ ಕಾರ್ಬನ್ ಮತ್ತು ಎವಿಯೊ ಗ್ರೇ/ಬ್ಲ್ಯಾಕ್ ಕಾರ್ಬನ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ನಿರ್ವಹಣೆ, ಸ್ಪೀಡ್, ವಿನ್ಯಾಸಕ್ಕೆ ಯಾವುದೇ ರಾಜಿಗೂ ತಯಾರಿಲ್ಲದ ಅಗಸ್ಟಾ ಎಫ್4 ಆರ್ ಆರ್, ಲೀನ್ ಆಂಗಲ್ ಸೆನ್ಸಾರ್, ಫುಲ್ ರೈಡ್-ಬೈ-ಡೈರ್, ಓಹ್ಲಿನ್ ಎಲೆಕ್ಟ್ರಾನಿಕ್ ಸಸ್ಪೆನ್ಷನ್, ಸ್ಟೀರಿಂಗ್ ಡ್ಯಾಂಪರ್ ಮುಂತಾದ ವ್ಯವಸ್ಥೆಗಳನ್ನು ಹೊಂದಿರುತ್ತದೆ.

    ಎಫ್3

    ಎಫ್3

    ಅಂತೆಯೇ ಕಡಿಮೆ ಶಕ್ತಿಶಾಲಿ 798 ಸಿಸಿ 3 ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಎಪ್3 ಆವೃತ್ತಿಯು 88.1 ಎನ್ ಎಂ ತಿರುಗುಬಲದಲ್ಲಿ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ ಎಕ್ಸ್ ಶೋ ರೂಂ ಬೆಲೆಯು 16.78 ಲಕ್ಷ ರು.ಗಳಾಗಿದ್ದು, ಗಂಟೆಗೆ ಗರಿಷ್ಠ 241 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

    ಎಫ್3

    ಎಫ್3

    ಎಬಿಎಸ್, ಎಂಟು ಹಂತಗಳ ಟ್ರಾಕ್ಷನ್ ಕಂಟ್ರೋಲ್, ಬಹು ರೈಡಿಂಗ್ ಮೋಡ್ ಮತ್ತು ಮ್ಯಾಟ್ ಮೆಟ್ಯಾಲಿಕ್ ಸೆನ್ನಾ ಬ್ಲ್ಯಾಕ್, ಪಿಯರ್ಲ್ ಐಸ್ ವೈಟ್/ಮ್ಯಾಟ್ ಎವಿಯೊ ಗ್ರೇ ಮತ್ತು ರೆಡ್/ಸಿಲ್ವರ್ ಬಣ್ಣಗಳ ಆಯ್ಕೆಗಳಲ್ಲಿ ದೊರಕಲಿದೆ.

    1090 ಬ್ರುಟಲ್

    1090 ಬ್ರುಟಲ್

    ನೆಕ್ಡ್ ಬೈಕ್ ಆಗಿರುವ 1090 ಬ್ರುಟಲ್ ಅತ್ಯಂತ ಶಕ್ತಿಶಾಲಿ 1078 ಸಿಸಿ ಫೋರ್ ಸಿಲಿಂಡರ್ ಎಂಜಿನ್ ನಿಯಂತ್ರಿಸಲ್ಪಡಲಿದ್ದು, 112 ಎನ್ ಎಂ ತಿಗುಗುಬಲದಲ್ಲಿ 144 ಅಶ್ವಶಕ್ತಿ ಉತ್ಪಾದಿಸಲಿದೆ. ಇದರ ಎಕ್ಸ್ ಶೋ ರೂಂ ಬೆಲೆ 20.10 ಲಕ್ಷ ರು.ಗಳಾಗಿದೆ.

    1090 ಬ್ರುಟಲ್ ಆರ್ ಆರ್

    1090 ಬ್ರುಟಲ್ ಆರ್ ಆರ್

    ಹಾಗೆಯೇ ಬ್ರುಟಲ್ ಗೆ ಸಮಾನವಾದ ಎಂಜಿನ್ ನಿಯಂತ್ರಿಸ್ಪಡುವ 1090 ಬ್ರುಟಲ್ ಆರ್ ಆರ್ ಪುಣೆ ಎಕ್ಸ್ ಶೋ ರೂಂ ಬೆಲೆ 23.78 ಲಕ್ಷ ರು.ಗಳಾಗಿದೆ.

Most Read Articles

Kannada
English summary
MV Agusta Enters India, Launches 3 Superbikes
Story first published: Wednesday, May 11, 2016, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X