ವ್ರೂಮ್, ವ್ರೂಮ್... ಬೆಂಗಳೂರಿನಲ್ಲಿ ಡ್ರಾಗ್ ರೇಸ್ ಅಬ್ಬರ!

Written By:

ಭಾರತೀಯ ಮೋಟಾರು ಕ್ರೀಡೆಗಳಲ್ಲಿ ಹೊಸತು ಎನಿಸಿಕೊಂಡಿರುವ 'ಡ್ರಾಗ್ ರೇಸ್' ನಿಧಾನವಾಗಿ ಜನಪ್ರಿಯಗೊಳ್ಳುತ್ತಿದೆ. ದೇಶದ ಮೋಟಾರು ಕ್ರೀಡೆ ಕೇಂದ್ರಗಳತ್ತ ಗಮನ ಹಾಯಿಸಿದಾಗ ನಮ್ಮ ಬೆಂಗಳೂರು ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇದಕ್ಕಾಗಿ ಉದ್ಯಾನ ನಗರಿ ತಳಹದಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳಿಗೆ ನಾವು ಕೃತಜ್ಞತೆ ಸಲ್ಲಿಸಬೇಕಾಗುತ್ತದೆ.

ಪ್ರಸಕ್ತ ಸಾಲಿನ ಎಪ್ರಿಲ್ ತಿಂಗಳಿನಲ್ಲಷ್ಟೇ ಫೇಡರೇಷನ್ ಆಪ್ ಮೋಟಾರ್ ಸ್ಪೋರ್ಟ್ಸ್ ಆಫ್ ಇಂಡಿಯಾ (ಎಫ್‌ಎಂಎಸ್‌ಸಿಐ) ಆತಿಥ್ಯದಲ್ಲಿ ಬೆಂಗಳೂರು ಮೂಲದ ಜಿನೆವಾ ಸರ್ವಿಸಸ್ 'ವ್ರೂಮ್' ಎಂಬ ಕ್ವಾರ್ಟರ್ ಮೈಲು ಡ್ರಾಗ್ ರೇಸ್ ಕ್ರೀಡಾಕೂಟವನ್ನು ಆಯೋಜಿಸಿತ್ತು.

ಪ್ರಸ್ತುತ ಮೋಟಾರು ಕ್ರೀಡೆಗೆ ವಾಹನ ಪ್ರೇಮಿಗಳಿಂದ ಅಭೂತಪೂರ್ವ ಬೆಂಬಲ ದೊರಕಿತ್ತು. ಇದರಿಂದ ಪ್ರೇರಣೆಗೊಂಡಿರುವ ಸಂಸ್ಥೆಯು ವ್ರೂಮ್ ಎರಡನೇ ಆವೃತ್ತಿಯನ್ನು ಪ್ರಸಕ್ತ ಸಾಲಿನ ಸೆಪ್ಟೆಂಬರ್ 24 ಹಾಗೂ 25ರಂದು ಆಯೋಜಿಸಲಿದೆ.

ವ್ರೂಮ್ ಎರಡನೇ ಆವೃತ್ತಿಯ ಮೋಟಾರು ಕ್ರೀಡಾಕೂಟಕ್ಕೆ ನಮ್ಮ ಡ್ರೈವ್ ಸ್ಪಾರ್ಕ್ ಆನ್ ಲೈನ್ ಅಧಿಕೃತ ಪಾಲುದಾರಿಕೆಯನ್ನು ಪಡೆದಿದೆ ಎಂಬುದನ್ನು ಬಹಳ ಹೆಮ್ಮೆಯಿಂದಲೇ ಹೇಳಲಿಚ್ಛಿಸುತ್ತೇವೆ. ಅಲ್ಲದೆ ವ್ರೂಮ್ ರೋಚಕ ಕ್ಷಣಗಳ ಮಾಹಿತಿ, ಚಿತ್ರ ಹಾಗೂ ವಿಡಿಯೋಗಳನ್ನು ಓದುಗರ ಜೊತೆಗೆ ಹಂಚಿಕೊಳ್ಳಲಿದ್ದೇವೆ.

ಅಷ್ಟಕ್ಕೂ ಮೇಲೆ ಕೊಟ್ಟಿರುವ ವ್ರೂಮ್ ಎರಡನೇ ಆವೃತ್ತಿಯ ಟೀಸರ್ ವಿಡಿಯೋವನ್ನು ನೋಡಲು ಮರೆಯದಿರಿ.

To Follow DriveSpark On Facebook, Click The Like Button
ವ್ರೂಮ್ ಡ್ರಾಗ್ ರೇಸ್

ದೇಶದೆಲ್ಲ ಸ್ಪರ್ಧಾಳುಗಳಿಗೆ ಡ್ರಾಗ್ ರೇಸ್ ನಲ್ಲಿ ಭಾಗವಹಿಸಲು ಮುಕ್ತ ಅವಕಾಶವಿರುತ್ತದೆ. ಇಲ್ಲಿ ಹಳೆಯ ಟು ಸ್ಟ್ರೋಕ್ ಮೋಟಾರ್ ಸೈಕಲ್ ಗಳಿಂದ ಹಿಡಿದು ಬಿಎಂಡಬ್ಲ್ಯು ಎಸ್1000ಆರ್ ಆರ್ ಗಳಂತಹ ಅತ್ಯಾಧುನಿಕ ಕ್ರೀಡಾ ಬೈಕ್ ಗಳು ಸ್ಪರ್ಧೆಯಲ್ಲಿ ಭಾಗಹಿಸಲಿದೆ. ಅತ್ತ ಕಾರುಗಳು ಇದರಿಂದ ಹೊರತಾಗಿಲ್ಲ. ವಿಶೇಷವಾಗಿ ಟ್ಯೂನ್ ಮಾಡಲಾದ ಹೋಂಡಾ ಸಿಟಿಯಿಂದ ಆರಂಭಿಸಿ ಅತಿ ನೂತನ ಆಡಿ ಆರ್8, ಫೆರಾರಿ ಹಾಗೂ ಲಂಬೋರ್ಗಿನಿಗಳಂತಹ ಸೂಪರ್ ಕಾರುಗಳು ಕಣ್ಮಣ ತಣಿಸಲಿದೆ.

ವ್ರೂಮ್ 2016 ಜಲಕ್; ಹೋಂಡಾ ಸಿಟಿ ಮಣಿಸಿದ ಆಡಿ ಆರ್8 - ರೋಚಕ ವಿಡಿಯೋ ವೀಕ್ಷಿಸಿ

ನೀವು ಕೂಡಾ ವ್ರೂಮ್ ಡ್ರಾಗ್ ರೇಸ್ ವೀಕ್ಷಿಸಲು ಇಚ್ಛಿಸುವುದಾದ್ದಲ್ಲಿ ಟಿಕೇಟುಗಳು ಬುಕ್ ಮೈ ಶೋ ದಲ್ಲಿ ಲಭ್ಯವಾಗಲಿದೆ. ಪ್ರಸ್ತುತ ವಾಹನ ಪ್ರೇಮಿಗಳಿಗಾಗಿ ವ್ರೂಮ್ ಹೈ ರೆಸೊಲ್ಯೂಷನ್ ಚಿತ್ರಗಳನ್ನು ಹಂಚಲಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಡ್ರೈವ್ ಸ್ಪಾರ್ಕ್ ಓದಲು ಮರೆಯದಿರಿ.

Read more on ರೇಸ್ race
English summary
Ready, Set, Vroom — Are You Ready For The Second Edition Of Vroom Drag Race?
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark