ಟ್ರಯಂಫ್-ಬಜಾಜ್ ಪಾಲುದಾರಿಕೆಯ ಹೆಚ್ಚಿನ ಮಾಹಿತಿ ಇಲ್ಲಿದೆ

Written By:

ಭಾರತದಲ್ಲಿ ಪ್ರಖ್ಯಾತ ಟ್ರಯಂಫ್ ಮೋಟರ್ ಸೈಕಲ್‌ಗಳ ವಿತರಣೆಯನ್ನು ಭಾರತದಲ್ಲಿ ಹೊಂದುವ ವಿಚಾರವನ್ನು ಈಗಾಗಲೇ ಬಜಾಜ್ ಸ್ಪಷ್ಟಪಡಿಸಿತ್ತು, ಈ ಬಗ್ಗೆ ಹೆಚ್ಚಿನ ವಿಚಾರಗಳು ಹೊರ ಬಿದ್ದಿವೆ.

ಟ್ರಯಂಫ್-ಬಜಾಜ್ ಪಾಲುದಾರಿಕೆಯ ಹೆಚ್ಚಿನ ಮಾಹಿತಿ ಇಲ್ಲಿದೆ

ಕಳೆದ ಆಗಸ್ಟ್ 8ರಂದು ಭಾರತೀಯ ಮೋಟಾರ್ ಸೈಕಲ್ ದೈತ್ಯ ಬಜಾಜ್ ಮತ್ತು ಯುಕೆ ಮೂಲದ ಕ್ರೀಡಾ ಬೈಕ್ ತಯಾರಕ ಟ್ರಯಂಫ್ ಸಂಸ್ಥೆಗಳು ತಮ್ಮ ಸಹಭಾಗಿತ್ವವನ್ನು ಪ್ರಕಟಿಸಿದ್ದವು, ಈ ಪಾಲುದಾರಿಕೆಯ ಬಗ್ಗೆ ಹೆಚ್ಚಿನ ವಿಚಾರಗಳನ್ನು ಬಜಾಜ್ ಆಟೊ ಎಂಡಿ ಬಹಿರಂಗಪಡಿಸಿದ್ದಾರೆ.

ಟ್ರಯಂಫ್-ಬಜಾಜ್ ಪಾಲುದಾರಿಕೆಯ ಹೆಚ್ಚಿನ ಮಾಹಿತಿ ಇಲ್ಲಿದೆ

ಈ ಎರಡು ಕಂಪನಿಗಳ ಪಾಲುದಾರಿಕೆಯ ಮೊದಲ ಉತ್ಪನ್ನವಾಗಿ 'ಮಿಡ್‌ವೇಟ್' ಸಬ್-800 ಸಿ.ಸಿ ಮೋಟಾರ್ ಸೈಕಲ್ ಅನ್ನು 3 ವರ್ಷದ ಒಳಗಾಗಿ ಬಿಡುಗಡೆಗೊಳಿಸಿದೆ.

ಟ್ರಯಂಫ್-ಬಜಾಜ್ ಪಾಲುದಾರಿಕೆಯ ಹೆಚ್ಚಿನ ಮಾಹಿತಿ ಇಲ್ಲಿದೆ

ರಾಯಲ್ ಎನ್‌ಫೀಲ್ಡ್ ಮುಖ್ಯ ಭೂಮಿಕೆಗೆ ತೆಗೆದುಕೊಳ್ಳುವ ಬಗ್ಗೆ ಬಜಾಜ್-ಟ್ರಯಂಫ್ ಗಂಭೀರ ಯೋಜನೆ ರೂಪಿಸುತ್ತಿದ್ದು, ಈ ನಿಟ್ಟಿನಲ್ಲಿ ಪುಣೆಯ ಚಕನ್‌ನಲ್ಲಿ ಹೊಸ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದೆ.

ಟ್ರಯಂಫ್-ಬಜಾಜ್ ಪಾಲುದಾರಿಕೆಯ ಹೆಚ್ಚಿನ ಮಾಹಿತಿ ಇಲ್ಲಿದೆ

ಹೊಸ ಕಾರ್ಖಾನೆಯ ಮೇಲೆ ಹೂಡಿಕೆ ಮಾಡವ ಹಣದ ಪ್ರಮಾಣವನ್ನು ಮತ್ತು ಅದರ ಒಟ್ಟು ಉತ್ಪಾದನಾ ಸಾಮರ್ಥ್ಯವನ್ನು 6 ತಿಂಗಳ ಒಳಗಾಗಿ ನಿರ್ಧರಿಸಲಾಗುವುದು ಎಂಬ ಮಾಹಿತಿ ತಿಳಿದುಬಂದಿದೆ.

ಟ್ರಯಂಫ್-ಬಜಾಜ್ ಪಾಲುದಾರಿಕೆಯ ಹೆಚ್ಚಿನ ಮಾಹಿತಿ ಇಲ್ಲಿದೆ

ಸಹಭಾಗಿತ್ವದಲ್ಲಿ ನಿರ್ಮಿಸಲಾದ ಮೋಟಾರ್ ಸೈಕಲ್‌ಗಳನ್ನು ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮಯನ್ಮಾರ್, ಕೊಲಂಬಿಯಾ ಮತ್ತು ಆಫ್ರಿಕಾದ ಬಹುತೇಕ ದೇಶಗಳಲ್ಲಿ ಬಜಾಜ್ ಟ್ರಯಂಪ್ ಬೈಕುಗಳನ್ನು ವಿತರಿಸುವ ಯೋಜನೆ ಹಾಕೀಕೊಂಡಿದೆ.

ಟ್ರಯಂಫ್-ಬಜಾಜ್ ಪಾಲುದಾರಿಕೆಯ ಹೆಚ್ಚಿನ ಮಾಹಿತಿ ಇಲ್ಲಿದೆ

ಈ ಪಾಲುದಾರಿಕೆಯ ಹೊರತಾಗಿ ಪಾಶ್ಚಿಮಾತ್ಯ ದೇಶಗಳ ಬಹುತೇಕ ಭಾಗದಲ್ಲಿ ಮಾರುಕಟ್ಟೆಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಟ್ರಯಂಫ್ ಮುಂದುವರಿಸಲಿದೆ ಎಂದು ಹೇಳಿಕೊಂಡಿದೆ.

English summary
The first product from this partnership will come in 3 years, and will be a ‘middleweight’ sub-800 cc motorcycle. Now, Rajiv Bajaj, the MD of Bajaj Auto, has revealed new details about this partnership.
Story first published: Wednesday, September 13, 2017, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark