ಬಜಾಜ್ ಪಲ್ಸರ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

Written By:

ಬಜಾಜ್ ಆಟೊ ಭಾರತದಲ್ಲಿ ತನ್ನ ಹೊಸ ಎನ್ಎಸ್160 ಬೈಕ್ ಪರಿಚಯಿಸಿದೆ. ಈ ಬೈಕ್ ಪಲ್ಸರ್ ಸರಣಿಯ ಮಾದರಿಯಾಗಿದ್ದು, ಕಂಪನಿ ಹೆಚ್ಚು ನಿರೀಕ್ಷೆ ಹೊಂದಿದೆ.

To Follow DriveSpark On Facebook, Click The Like Button
ಬಜಾಜ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

ಪ್ರತಿಷ್ಠಿತ ಭಾರತೀಯ ದ್ವಿಚಕ್ರ ವಾಹನ ತಯಾರಕ ಬಜಾಜ್ ಆಟೊ ಪಲ್ಸರ್ ಸರಣಿಯ ಮತ್ತೊಂದು ದ್ವಿಚಕ್ರ ವಾಹನ ಏನ್‌ಎಸ್160 ಬಿಡುಗಡೆಗೊಳಿಸಿದೆ. ಪಲ್ಸರ್ ಎನ್ಎಸ್160 ರೂ. 82,400 (ಎಕ್ಸ್ ಷೋ ರೂಂ ಪುಣೆ) ಬೆಲೆ ಹೊಂದಿದೆ.

ಬಜಾಜ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

ಈ ಹೊಸ ಏನ್‌ಎಸ್160 ಬೈಕ್, ಪಲ್ಸರ್ ವಿಭಾಗದಲ್ಲಿ ಹೊಸ ಉತ್ಪನ್ನವಾಗಿದೆ ಮತ್ತು ಈ ಬೈಕ್‌ ಇತ್ತೀಚೆಗೆ ಸ್ಥಗಿತಗೊಂಡಿರುವ ಪಲ್ಸರ್ ಎಎಸ್150 ಬೈಕ್ ಆಧರಿಸಿದೆ.

ಬಜಾಜ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

ಒಟ್ಟಾರೆ ವಿನ್ಯಾಸವು ತನ್ನ ದೊಡ್ಡ ಸಹೋದರ ಪಲ್ಸರ್ ಏನ್‌ಎಸ್200ಗೆ ಹೋಲಿಕೆ ಹೊಂದಿದೆ, ಆದರೆ ಸ್ವಿಂಗ್ ಆರ್ಮ್ ಎನ್ಎಸ್200 ಮಾದರಿಗೆ ಹೋಲಿಸಿದರೆ ತೆಳುವಾಗಿದೆ.

ಬಜಾಜ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

ಹೊಸ ಪಲ್ಸರ್ ಬಿಡುಗಡೆಗೆ ಸಂಬಂಧಿಸಿದಂತೆ ಬಜಾಜ್ ಆಟೊ ಸಂಸ್ಥೆ ಅಧಿಕೃತ ಘೋಷಣೆ ಮಾಡಿಲ್ಲದಿದ್ದರೂ ಸಹ ಪುಣೆ ಮತ್ತು ಮುಂಬೈನಲ್ಲಿರುವ ಹಲವಾರು ವಿತರಕರು ಪಲ್ಸರ್ ಎನ್ಎಸ್ 160 ಮಾರಾಟದಲ್ಲಿದೆ ಎಂದು ಖಚಿತಪಡಿಸಿದ್ದಾರೆ.

ಬಜಾಜ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

ಈ ನೂತನ ದ್ವಿಚಕ್ರ ವಾಹನ ಸಿಂಗಲ್ ಸಿಲಿಂಡರ್ ಆಯಿಲ್ ಕೋಲ್ಡ್ 160.3 ಸಿಸಿ ಎಂಜಿನ್ ಹೊಂದಿದ್ದು, 14.6 ಏನ್‌ಎಂ ತಿರುಗುಬಲದಲ್ಲಿ 15.5 ಅಶ್ವಶಕ್ತಿ ಉತ್ಪಾದಿಸಲಿದೆ.

ಬಜಾಜ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

ಹೊಸ 160ಸಿಸಿ ಮೋಟಾರ್ ಸೈಕಲ್ ವಿಭಾಗಿಸಲಾದ ಸೀಟುಗಳು, ವಿಭಾಗಿಸಲಾದ ಹಿಂಭಾದಿಯ ಹಿಡಿ ಮತ್ತು ಎಲ್ಇಡಿ ಟೈಲ್ ಲ್ಯಾಂಪ್‌ ಮತ್ತು ಕೆಳಭಾಗದಲ್ಲಿರುವ ಹೋಗೆ ಉಗುಳುವ ಕೊಳವೆ ಪಡೆದುಕೊಂಡಿದೆ.

ಬಜಾಜ್ ಎನ್ಎಸ್160 ಬೈಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 82,400

ಏನ್‌ಎಸ್160 ಬೈಕ್ 142 ಕೆ.ಜಿ ತೂಕ ಹೊಂದಿದ್ದು, ಎನ್ಎಸ್200 ಗಿಂತ 10 ಕೆ.ಜಿ ಹಗುರವಾಗಿ ಮತ್ತು ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಪಡೆದುಕೊಂಡಿದೆ.

English summary
Read in Kannada about Bajaj Auto has introduced the all-new Pulsar NS160 in the Indian market. The Pulsar NS 160 is priced at Rs 82,400 ex-showroom (Pune).
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark