ಮಧ್ಯಮ ಗಾತ್ರದ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಮುಂದಾದ ಬಜಾಜ್-ಟ್ರಯಂಫ್

Written By:

ಕಳೆದ ವಾರ ಬಜಾಜ್ ಆಟೊ ಮತ್ತು ಟ್ರಯಂಪ್ ಮೋಟಾರ್‌ಸೈಕಲ್ ಜಾಗತಿಕ ಪಾಲುದಾರಿಕೆಯನ್ನು ಘೋಷಿಸಿದ್ದು, ಎರಡೂ ಕಂಪನಿಗಳು ಹೊಸ ಮಧ್ಯಮ ಗಾತ್ರದ ಮೋಟಾರ್ ಸೈಕಲ್‌ಗಳನ್ನು ಅಭಿವೃದ್ಧಿಪಡಿಸಲಿವೆ.

To Follow DriveSpark On Facebook, Click The Like Button
ಮಧ್ಯಮ ತೂಕದ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಮುಂದಾದ ಬಜಾಜ್-ಟ್ರಯಂಫ್

ಬಿಸಿನೆಸ್ ಸ್ಟ್ಯಾಂಡರ್ಡ್ ಜೊತೆಗೆ ಮಾತುಕತೆ ನೆಡೆಸುತ್ತಿರುವ ವೇಳೆಯಲ್ಲಿ ಟ್ರಯಂಪ್ ಮೋಟಾರ್‌ಸೈಕಲ್ ಸಿಇಒ ಆದಂತಹ ನಿಕ್ ಬ್ಲೇರ್ ಅವರು ಈ ಪಾಲುದಾರಿಕೆಯನ್ನು ಖಚಿತಪಡಿಸಿದ್ದು, ಎರಡೂ ಕಂಪೆನಿಗಳು ಹೊಸ ಶ್ರೇಣಿಯ ಮಧ್ಯಮ ಗಾತ್ರದ ಮೋಟಾರ್ ಸೈಕಲ್‌ಗಳನ್ನು ಅಭಿವೃದ್ಧಿ ಪ್ರಾರಂಭಿಸಿವೆ ಎಂದು ತಿಳಿಸಿದರು.

ಮಧ್ಯಮ ತೂಕದ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಮುಂದಾದ ಬಜಾಜ್-ಟ್ರಯಂಫ್

ಪಾಲುದಾರಿಕೆಯಿಂದ ಅಭಿವೃದ್ಧಿಪಡಿಸಲಾದ ಮಧ್ಯಮ ಗಾತ್ರದ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಕಂಪನಿ ದೃಢಪಡಿಸಿದ್ದು, ಸಹಭಾಗಿತ್ವದ ಬಗ್ಗೆ ಎರಡೂ ಸಂಸ್ಥೆಗಳು ಹೆಚ್ಚು ವಿಶ್ವಾಸ ಹೊಂದಿವೆ ಎನ್ನಬಹದು.

ಮಧ್ಯಮ ತೂಕದ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಮುಂದಾದ ಬಜಾಜ್-ಟ್ರಯಂಫ್

ಟ್ರಯಂಫ್ ಕಂಪನಿಯು ಅಸ್ತಿತ್ವದಲ್ಲಿರುವ ವಿದೇಶಿ ಮಾರುಕಟ್ಟೆಗಳಿಗೆ ಮತ್ತು ಬಜಾಜ್ ಆಟೊ ಸಂಸ್ಥೆಯ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಈ ಮೋಟಾರ್ ಸೈಕಲ್‌ಗಳನ್ನು ರಫ್ತು ಮಾಡಲಾಗುವುದು ಎಂದು ಬ್ಲೇರ್ ಬಹಿರಂಗಪಡಿಸಿದ್ದಾರೆ.

ಮಧ್ಯಮ ತೂಕದ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಮುಂದಾದ ಬಜಾಜ್-ಟ್ರಯಂಫ್

ರಾಯಲ್ ಎನ್‌ಫೀಲ್ಡ್ ಪ್ರಾಬಲ್ಯ ಹೊಂದಿರುವ 400ಸಿಸಿ ಇಂದ 800ಸಿಸಿ ವಿಭಾಗವನ್ನು ಗುರಿಯಾಗಿಸಿಕೊಂಡು ಈ ಎರಡೂ ಕಂಪನಿಯ ಸಹಭಾಗಿತ್ವವು, ಮಧ್ಯಮ ತೂಕದ ಮೋಟಾರ್ ಸೈಕಲ್‌ಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಬ್ಲ್ಯೂರ್ ಹೇಳಿದ್ದಾರೆ.

ಮಧ್ಯಮ ತೂಕದ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಮುಂದಾದ ಬಜಾಜ್-ಟ್ರಯಂಫ್

ಬಜಾಜ್ ಈಗಾಗಲೇ ಕೆಟಿಎಂ ಮತ್ತು ಹಸ್ಕ್‌ವರ್ನ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಈಗ ಟ್ರಯಂಫ್ ಕಂಪನಿಯ ಜೊತೆಗಿನ ಸಹಭಾಗಿತ್ವವು ದೇಶೀಯ ಅಥವಾ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವುದೇ ಅತಿಕ್ರಮಣ ಮಾಡುವುದಿಲ್ಲ ಎಂದು ಬ್ಲೇರ್ ತಿಳಿಸಿದ್ದಾರೆ.

ಮಧ್ಯಮ ತೂಕದ ಮೋಟಾರ್ ಸೈಕಲ್‌ಗಳ ಉತ್ಪಾದನೆಗೆ ಮುಂದಾದ ಬಜಾಜ್-ಟ್ರಯಂಫ್

ಪ್ರೀಮಿಯಂ ಮೋಟಾರ್‌ಸೈಕಲ್‌ ವಿಭಾಗವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಈ ಬೆಳವಣಿಗೆಯನ್ನು ನೋಡಿ, ಟ್ರಯಂಫ್ ಸಂಸ್ಥೆಯು ಬಜಾಜ್ ಆಟೊ ಕಂಪನಿಯ ಜೊತೆ ಪಾಲುದಾರಿಕೆಗೆ ಮುಂದಾಗಿರುವುದು ಹೆಚ್ಚು ಸುದ್ದಿ ಮಾಡಿರುವುದಂತೂ ಸತ್ಯ.

English summary
Bajaj Auto and Triumph Motorcycles announced a global partnership last week. Now, both the companies have commenced the development of a new middleweight motorcycle.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark