ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

Written By:

ಕೇಂದ್ರ ಸರ್ಕಾರದ ಬಹುನೀರಿಕ್ಷಿತ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೊಂಡಿದ್ದು, ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಗಳ ಉತ್ಪನ್ನಗಳಲ್ಲಿ ಭಾರೀ ಬೆಲೆ ಏರಿಳಿತ ಕಂಡಿವೆ.

To Follow DriveSpark On Facebook, Click The Like Button
ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿ ಜಾರಿ ಹಿನ್ನೆಲೆ ಪ್ರಮುಖ ಬೈಕ್ ಉತ್ಪಾದನಾ ಸಂಸ್ಥೆಗಳು ಬೆಲೆ ಏರಿಕೆ ಮಾಡಿದ್ದರೆ ಇನ್ನು ಕೆಲವು ಬೈಕ್ ಉತ್ಪಾದನಾ ಸಂಸ್ಥೆಗಳು ಬೆಲೆ ಇಳಿಕೆ ಮಾಡಿವೆ. ಇದರಿಂದಾಗಿ ಹಿಂದಿನ ಬೆಲೆಗಳಿಗೂ ಜಿಎಸ್‌ಟಿ ನಂತರದ ಬೆಲೆಗಳೂ ಸಾಕಷ್ಟು ವ್ಯತ್ಯಾಸವಿದ್ದು, ಪ್ರಸ್ತುತ ದರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಹೊಸದಾಗಿ ಅನುಷ್ಠಾನಗೊಂಡಿರುವ ಸರಕು ಮತ್ತು ಸೇವಾ ತೆರಿಗೆ ಅನ್ವಯ 350ಸಿಸಿ ಮೇಲ್ಪಟ್ಟ ಬೈಕ್ ದರಗಳು ಹೆಚ್ಚಳಗೊಂಡಿದ್ದು, 350 ಸಿಸಿಗಿಂತಲೂ ಕಡಿಮೆ ಎಂಜಿನ್ ಸಾಮರ್ಥ್ಯ ಬೈಕ್ ಬೆಲೆಗಳು ಇಳಿಕೆಯಾಗಿವೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಬಜಾಜ್

ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಬಜಾಜ್ ಉತ್ಪಾದಿತ 350 ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್ ಬೆಲೆಗಳ ಮೇಲೆ ಶೇ.4ರಷ್ಟು ವಿನಾಯ್ತಿ ನೀಡಲಾಗಿದೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಆದ್ರೆ 350ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮಥ್ಯ ಹೊಂದಿರುವ ಬಜಾಜ್ 400 ಬೆಲೆಗಳಲ್ಲಿ ಏರಿಕೆಯಾಗಿದ್ದು, ಶೇ.08ರಷ್ಟು ಹೆಚ್ಚಳ ಮಾಡಲಾಗಿದೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಇನ್ನು ಬಜಾಜ್ ಪಲ್ಸರ್ ಬೆಲೆಗಳನ್ನು ನೋಡುವುದಾದರೇ ಜಿಎಸ್‌ಟಿಗೂ ಮುನ್ನ ರೂ.82,147 ಹಾಗೂ ಜಿಎಸ್‌ಟಿ ನಂತರ ರೂ.78,86 ಮತ್ತು ಉನ್ನತ ಶ್ರೇಣಿಯೂ ರೂ. 1,32,347ಕ್ಕೆ ಇಳಿಕೆಯಾಗಿದೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿಗೂ ಮುನ್ನ ಬಜಾಜ್ ಡಿಸ್ಕವರಿ ಬೆಲೆ- ರೂ. 57,326

ಜಿಎಸ್‌ಟಿ ಜಾರಿ ನಂತರ ಬಜಾಜ್ ಡಿಸ್ಕವರಿ ಬೆಲೆ- ರೂ. 55,033

ಜಿಎಸ್‌ಟಿಗೂ ಮುನ್ನ ಡೋಮಿನಾರ್ 400 ಬೆಲೆ- ರೂ. 1,54,503

ಜಿಎಸ್‌ಟಿ ಜಾರಿ ನಂತರ ಡೋಮಿನಾರ್ 400 ಬೆಲೆ- ರೂ. 1,55,739

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ರಾಯಲ್ ಎನ್‌ಫೀಲ್ಡ್

ಜಿಎಸ್‌ಟಿಗೂ ಮುನ್ನವೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬೆಲೆ ಇಳಿಕೆಯ ಸುಳಿವು ನೀಡಿತ್ತು. ಆದ್ರೆ ಜಿಎಸ್‌ಟಿ ಜಾರಿ ನಂತರ 350ಸಿಸಿ ಸಾಮರ್ಥ್ಯಕ್ಕಿಂತ ಹೆಚ್ಚಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆಗಳು ಏರಿಕೆಯಾಗಿವೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿಗೂ ಮುನ್ನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಸಿಸಿ ಬೆಲೆ- ರೂ. 1,52,865

ಜಿಎಸ್‌ಟಿ ಜಾರಿ ನಂತರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350ಸಿಸಿ ಬೆಲೆ- ರೂ. 1,54,087

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿಗೂ ಮುನ್ನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆಲೆ- ರೂ. 1,82,364

ಜಿಎಸ್‌ಟಿ ನಂತರ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೆಲೆ- ರೂ. 1,83,822

ಜಿಎಸ್‌ಟಿಗೂ ಮುನ್ನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಸಿಸಿ ಬೆಲೆ- ರೂ. 1,28,409

ಜಿಎಸ್‌ಟಿ ಜಾರಿ ನಂತರ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಸಿಸಿ ಬೆಲೆ - ರೂ. 1,29,436

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಟಿವಿಎಸ್

ದೇಶಿಯವಾಗಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಟಿವಿಎಸ್ ಬೈಕ್‌ ಬೆಲೆಗಳು ಕಡಿಮೆಯಾಗಿದ್ದು, 350 ಸಿಸಿ ಮೇಲ್ಪಟ್ಟ ಕೆಲವು ಟಿವಿಎಸ್ ಮಾದರಿಗಳ ಬೆಲೆ ಹೆಚ್ಚಳಗೊಂಡಿವೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿಗೂ ಮುನ್ನ ಟಿವಿಎಸ್ ಸ್ಟಾರ್ ಸಿಟಿ ಬೆಲೆ- ರೂ. 51,888

ಜಿಎಸ್‌ಟಿ ಜಾರಿ ನಂತರ ಟಿವಿಎಸ್ ಸ್ಟಾರ್ ಸಿಟಿ ಬೆಲೆ - ರೂ. 49,812

ಜಿಎಸ್‌ಟಿಗೂ ಮುನ್ನ ಟಿವಿಎಸ್ ಅಪಾಚಿ ಆರ್‌ಟಿಆರ್ 200 ಬೆಲೆ- ರೂ. 1,05,609

ಜಿಎಸ್‌ಟಿ ಜಾರಿ ನಂತರ ಟಿವಿಎಸ್ ಅಪಾಚಿ ಆರ್‌ಟಿಆರ್ 200 ಬೆಲೆ- ರೂ. 1,01,304

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿಗೂ ಮುನ್ನ ಟಿವಿಎಸ್ ವಿಕ್ಟರ್ ಬೆಲೆ- ರೂ. 59,286

ಜಿಎಸ್‌ಟಿ ಜಾರಿ ನಂತರ ಟಿವಿಎಸ್ ವಿಕ್ಟರ್ ಬೆಲೆ - ರೂ. 56,914

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಹೋಂಡಾ

ದ್ಪಿಚಕ್ರ ವಾಹನಗಳ ವಿಭಾಗದಲ್ಲೇ ಅತಿ ಹೆಚ್ಚು ಡಿಸ್ಕೌಂಟ್ ಘೋಷಣೆ ಮಾಡಿದ ಹೋಂಡಾ, ತನ್ನ ಪ್ರಮುಖ ಬೈಕ್ ಮಾದರಿಗಳಿಗೆ ವಿಶೇಷ ರಿಯಾಯ್ತಿ ನೀಡಿದೆ.

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿಗೂ ಮುನ್ನ ಹೋಂಡಾ ಸಿಬಿ ಯುನಿಕ್ಸ್ 160 ಬೆಲೆ- ರೂ. 85,215

ಜಿಎಸ್‌ಟಿ ಜಾರಿ ನಂತರ ಹೋಂಡಾ ಸಿಬಿ ಯುನಿಕ್ಸ್ 160 ಬೆಲೆ - ರೂ. 88,623

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ಜಿಎಸ್‌ಟಿಗೂ ಮುನ್ನ ಹೋಂಡಾ ಸಿಬಿ ಶೈನ್ ಎನ್ಪಿ ಬೆಲೆ- ರೂ. 70,147

ಜಿಎಸ್‌ಟಿ ನಂತರ ಹೋಂಡಾ ಸಿಬಿ ಶೈನ್ ಎನ್ಪಿ ಬೆಲೆ ಬೆಲೆ - ರೂ. 67,341

ಜಿಎಸ್‌ಟಿ ಮುನ್ನ ಹೋಂಡಾ ಸಿಬಿಆರ್ 650 ಎಫ್ ಬೆಲೆ- ರೂ.8,64,249

ಜಿಎಸ್‌ಟಿ ನಂತರ ಹೋಂಡಾ ಸಿಬಿಆರ್ 650 ಎಫ್ ಬೆಲೆ -ರೂ.8,71,162

ಜಿಎಸ್‌ಟಿ ಜಾರಿ ಹಿನ್ನೆಲೆ ಬೈಕ್‌ಗಳ ಬೆಲೆಗಳಲ್ಲಿ ಭಾರೀ ಏರಿಳಿತ

ವಿ.ಸೂಚನೆ- ಜಿಎಸ್‌ಟಿ ಜಾರಿ ನಂತರ ದ್ಪಿಚಕ್ರ ವಾಹನ ಉತ್ಪಾದಕರು ನೀಡಿರುವ ಡಿಸ್ಕೌಂಟ್ ಬೆಲೆಗಳು ದೆಹಲಿ ಎಕ್ಸ್‌ಶೋರಂ ಬೆಲೆಗಳಾಗಿದ್ದು, ಅವುಗಳು ಬೇರೆ ಬೇರೆ ನಗರಗಳಲ್ಲಿ ಬೆಲೆ ವ್ಯತ್ಯಾಸ ಹೊಂದಿರುತ್ತವೆ.

English summary
Read in Kannada about GST Impact on Bike Prices.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark