ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

Written By:

ಪ್ರಖ್ಯಾತ ಜಪಾನ್ ಕಂಪನಿಯು ಮೊದಲ ಬಾರಿಗೆ ದಸರಾ ಸಮಯದಲ್ಲಿ ಒಂದೇ ದಿನದಲ್ಲಿ ಒಂದು ಲಕ್ಷ ದ್ವಿಚಕ್ರಗಳನ್ನು ಮಾರಾಟ ಮಾಡಿ ಹೊಸ ದಾಖಲೆ ನಿರ್ಮಾಣ ಮಾಡಿದೆ.

ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ನಮಗೆಲ್ಲರಿಗೂ ತಿಳಿದಿರುವಂತೆ ಸಾಮಾನ್ಯವಾಗಿ ಭಾರತದಲ್ಲಿ ಹಬ್ಬದ ಸಂದರ್ಭದಲ್ಲಿ ನಮ್ಮ ಜನ ವಾಹನಗಳನ್ನು ಖರೀದಿ ಮಾಡುತ್ತಾರೆ. ಜನರ ಮನಸ್ಥಿತಿಗೆ ತಕ್ಕಂತೆ ವಾಹನ ತಯಾರಕ ಕಂಪನಿಗಳೂ ಸಹ ನವೀನ ವಾಹನಗಳನ್ನು ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳಿಸುತ್ತಾರೆ.

ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೀಗಿರುವಾಗ, ಹೋಂಡಾ ಸಂಸ್ಥೆಯು ಈ ವರ್ಷ ಹಬ್ಬದ ಋತುವಿನಲ್ಲಿ ನಿಬ್ಬೆರಗಾಗಿಸುವ ಸಂಖ್ಯೆಯಲ್ಲಿ ವಾಹನಗಳನ್ನು ಮಾರಾಟ ಮಾಡುವ ಮೂಲಕ ಜನರನ್ನು ತನ್ನೆಡೆ ಆಕಷಿಸಿದೆ ಎನ್ನಬಹುದು. ಹೌದು, ಈ ವರ್ಷ ಹೋಂಡಾ ಕಂಪನಿಗೆ ಸುಗ್ಗಿಯ ಕಾಲ.

ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಆರು ಲಕ್ಷದಷ್ಟು ವಾಹನಗಳನ್ನು ಮಾರಾಟ ಮಾಡಿದೆ. ತದನಂತರದ ಎರಡು ಮಾಸಗಳಲ್ಲಿಯೂ ಸಹ ಸತತವಾಗಿ ಆರು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ, ಕಳೆದ ಎರಡು ತಿಂಗಳ ಅವಧಿಯಲ್ಲಿ ಒಂದು ದಶಲಕ್ಷ ವಾಹನಗಳ ಮಾರಾಟ ಸಂಖ್ಯೆ ತಲುಪಿದೆ.

ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ನವರಾತ್ರಿ ಮೊದಲ ದಿನದಂದು 52,000ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ದಾಖಲೆ ಮಾಡಿದ್ದ ಹೋಂಡಾ ಸಂಸ್ಥೆ, ನಂತರದ ದಿನಗಳಲ್ಲಿ ಕಂಪನಿಯ ಚಿಲ್ಲರೆ ಮಾರಾಟ ಶೇಕಡಾ 50%ರಷ್ಟು ಏರಿಕೆ ಕಂಡಿದೆ, ಎಂಬ ಅಂಕಿ ಅಂಶ ಬಂದಿದೆ. ಹೋಂಡಾ ಕಂಪನಿಯು ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ 601,998 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ತಿಂಗಳಿನಲ್ಲಿ 568,753 ವಾಹನಗಳನ್ನು ಮಾರಾಟ ಮಾಡಿತ್ತು.

ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ದಸರಾ ದಿನದಂದೇ ಹೋಂಡಾದ ಚಿಲ್ಲರೆ ಮಾರಾಟವು ಮೊದಲ ಬಾರಿಗೆ 1 ಲಕ್ಷ ದಾಟಿದ್ದು, ಈ ಹಬ್ಬದ ಸಂದರ್ಭದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚಿನ ಭಾರತೀಯರು ಈಗಾಗಲೇ ತಮ್ಮ ಹೊಸ ಹೋಂಡಾ ದ್ವಿಚಕ್ರ ವಾಹನದ ಜೊತೆ ಆಚರಿಸುತ್ತಿದ್ದಾರೆ ಎನ್ನಬಹುದು.

ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಇದೇ ಮೊದಲ ಬಾರಿಗೆ ಹೋಂಡಾ ದ್ವಿಚಕ್ರ ವಾಹನ ಸಂಸ್ಥೆಯು ಭಾರತದಲ್ಲಿ ಕೇವಲ ಆರು ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮೂರು ದಶಲಕ್ಷದಷ್ಟು ವಾಹನಗಳನ್ನು ಮಾರಾಟ ಮಾಡಿದೆ.

ಒಂದೇ ದಿನದಲ್ಲಿ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡಿದ ಹೋಂಡಾ

ಹೋಂಡಾ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಿಗೆಯಾಗಿರುವುದರಿಂದ ಹೋಂಡಾ ಕಂಪನಿಯು ಲಾಭಾಂಶದ ಲೆಕ್ಕದಲ್ಲಿ ಮತ್ತು ತನ್ನ ಸ್ಥಾನದವಿಚಾರದಲ್ಲಿ ಮತ್ತೆ ನಂಬರ್ ಒನ್ ಮಾರುಕಟ್ಟೆಯ ಪಾಲನ್ನು ಗಳಿಸಿಕೊಳ್ಳಲಿದೆ ಎಂಬ ಮಾತುಗಳು ವಾಹನೋದ್ಯಮದಲ್ಲಿ ಹರಿದಾಡುತ್ತಿವೆ.

English summary
Honda 2Wheelers India sales crossed one million sales (1.052 units) for the first time. The Japanese company sold more than one lakh units on Dusshera day alone for the first time.
Story first published: Thursday, October 5, 2017, 14:55 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark