ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

Written By:

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ತಯಾರಕ ಕಂಪನಿ ಕೆಟಿಎಂ, 2017ರ ನೂತನ ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಇದೇ ಫೆಬ್ರವರಿ 23ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್ ಬಿಡುಗಡೆಗೊಳ್ಳಲಿದ್ದು, ಖರೀದಿಗೆ ಗ್ರಾಹಕರು ಕಾಯ್ದುಕುಳಿತಿದ್ದಾರೆ.

To Follow DriveSpark On Facebook, Click The Like Button
ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

ಫೆಬ್ರುವರಿ 23ಕ್ಕೆ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್ ಬಿಡುಗಡೆಗೊಳ್ಳಲಿದ್ದು, ಹೊಸ ಬೈಕ್‌ ಮಾದರಿ ಬಗೆಗೆ ಭಾರೀ ನೀರಿಕ್ಷೆಯಿದೆ. ಈ ಹಿಂದೆ 2016ರ ನವೆಂಬರ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ EICMA ಪ್ರದರ್ಶನದಲ್ಲಿ ನೂತನ ಆವೃತ್ತಿಗಳು ಯಶಸ್ವಿ ಪ್ರದರ್ಶನ ಕಂಡಿದ್ದವು.

ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

ಈ ಮೊದಲು ಕೆಟಿಎಂ ತನ್ನ 200 ಡ್ಯೂಕ್ ಪ್ರಾರಂಭಿಸುವ ಮೂಲಕ 2012ರಲ್ಲಿ ಭಾರತೀಯ ದ್ವಿಚಕ್ರ ಮಾರುಕಟ್ಟೆ ಪ್ರವೇಶ ಮಾಡಿತ್ತು. ಬೈಕ್ ಸವಾರರಿಗೆ ಹೊಸ ಅನುಭೂತಿ ನೀಡಿದ್ದ ಕೆಟಿಎಂ, ಅಲ್ಪಾವಧಿಯಲ್ಲೇ ಸಾಕಷ್ಟು ಜನಪ್ರಿಯತೆ ಪಡೆಯಿತು. ಇದಕ್ಕೆ ಪ್ರಮುಖ ಕಾರಣ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಕೆಟಿಎಂ, 2013ರಲ್ಲಿ ನೂತನ ಮಾದರಿಯ 390 ಡ್ಯೂಕ್ ಬಿಡುಗಡೆಗೊಳಿಸಿ ಯಶಸ್ವಿಯಾಗಿತ್ತು.

ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

2013ರಲ್ಲಿ ಬಿಡುಗಡೆಯಾಗಿದ್ದ ಕೆಟಿಎಂ 390 ಡ್ಯೂಕ್ ಆವೃತ್ತಿ, ಉತ್ತಮ ಕಾರ್ಯಕ್ಷಮತೆಯಿಂದಾಗಿ ಯುವಜನತೆಯ ಮೆಚ್ಚುಗೆಗೆ ಪಾತ್ರವಾಗಿತ್ತು. ಡ್ಯುಯಲ್ ಚಾನಲ್ ಎಬಿಎಸ್ ಉಪಕರಣ ಹೊಂದಿದ್ದರೂ, ಕೈಗೆಟುಕುವ ದರದಲ್ಲಿ ಬೈಕ್ ಬೆಲೆ ನಿಗದಿ ಮಾಡಿ ಗಮನಸೆಳೆದಿತ್ತು.

ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

ಸದ್ಯ ಬಿಡುಗಡೆಗೊಳ್ಳಲು ಸಜ್ಜಾಗಿರುವ 2017ರ 390 ಡ್ಯೂಕ್, ಹೊಸ ಎಲ್ಇಡಿ ಹೆಡ್ ಲ್ಯಾಂಪ್, ಹ್ಯಾಂಡ್ ಫ್ರಿ ಕಿಟ್ ಮತ್ತು ಆಡಿಯೊ ಪ್ಲೇಯರ್ ಹೊಂದಿದೆ. ಜೊತೆಗೆ ನೂತನ ಮಾದರಿಗಳಿಗೆ ಹೊಸ ರೂಪ ನೀಡಲಾಗಿದ್ದು, ಪ್ರಸ್ತುತ ತಂತ್ರಜ್ಞಾನಗಳೊಂದಿಗೆ ನವೀಕರಿಸಲಾಗಿದೆ.

ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

390 ಡ್ಯೂಕ್ 2017 ಆವೃತ್ತಿಯಲ್ಲಿ ಹೊಸ ಫ್ರಂಟ್ ಫ್ರೋಕ್ಸ್, ದೊಡ್ಡದಾದ ಬ್ರೇಕ್, ಬೃಹತ್ ಗ್ರಾತದ ಇಂಧನ ಟ್ಯಾಂಕ್, ಸ್ಲಿಪ್ಪರ್ ಕ್ಲಚ್ ವ್ಯವಸ್ಥೆ ಹೊಂದಿದೆ. ಅಲ್ಲದೇ 373 ಸಿಸಿ ಎಂಜಿನ್ ಸಾಮರ್ಥ್ಯವಿದ್ದು, ರೈಡ್ ಬೈ ವೈಯರ್ ತಂತ್ರಜ್ಞಾನ ಅಳವಡಿಸಲಾಗಿದೆ.

ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

373ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಡ್ಯೂಕ್ 390 ಆವೃತ್ತಿ, 44ಬಿಎಚ್‌ಪಿ ಹಾಗೂ 35ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಅದೇ ರೀತಿಯಾಗಿ 200 ಡ್ಯೂಕ್ ಹೊಸ ಆವೃತ್ತಿ 200ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 25 ಬಿಎಚ್‌ಪಿ ಮತ್ತು 19.2ಎನ್ಎಂಟಾರ್ಕ್ ಉತ್ವಾದಿಸುವ ಶಕ್ತಿ ಹೊಂದಿದೆ.

ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

ಈ ಮಧ್ಯೆ ನೂತನ ಮಾದರಿಯ ಕೆಟಿಎಂ 390 ಡ್ಯೂಕ್ ಹಾಗೂ 200 ಡ್ಯೂಕ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಕೆಲ ಬೈಕ್ ವಿತರಕರು, ಗ್ರಾಹಕರಿಂದ 20 ಸಾವಿರ ರೂಪಾಯಿ ಮುಂಗಡ ಹಣ ಪಡೆದು ಬುಕಿಂಗ್ ಆರಂಭಿಸಿದ್ದಾರೆ.

ಫೆಬ್ರವರಿ 23ಕ್ಕೆ ವಿನೂತನ ಕೆಟಿಎಂ 390 ಡ್ಯೂಕ್, 200 ಡ್ಯೂಕ್ ಬಿಡುಗಡೆ

ಅದ್ಭುತ ವೆಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲು ಸಜ್ಜಾಗಿರುವ ಕೆಟಿಎಂ ಹೊಸ ಆವೃತ್ತಿಗಳ ಖರೀದಿಗೆ ಜನ ಎದುರು ನೋಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಬೈಕ್ ವಿತರಕರಿಗೆ ಇದು ವರದಾನವಾಗಲಿದೆ.

ಫೆಬ್ರವರಿ 23ಕ್ಕೆ ಬಿಡುಗಡೆಗೊಳ್ಳಲಿರುವ ಕೆಟಿಎಂ ನೂತನ ಆವೃತ್ತಿಯ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The 2017 version of 390 Duke also gets new front forks, big 320mm front brake, larger tank, slipper-clutch and ride-by-wire throttle body.
Please Wait while comments are loading...

Latest Photos