ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ವಿನೂತನ ಕೆಟಿಎಂ 250 ಡ್ಯೂಕ್ ಚಿತ್ರಗಳು: ಭಾರತದಲ್ಲಿ ಬಿಡುಗಡೆ?

Written By:

ಆಸ್ಟ್ರಿಯನ್ ಬೈಕ್ ಉತ್ಪಾದನಾ ಸಂಸ್ಥೆ ಕೆಟಿಎಂ, ಸದ್ಯದಲ್ಲೇ ಭಾರತೀಯ ಮಾರುಕಟ್ಟೆಗೆ ಮತ್ತೊಂದು ವಿನೂತನ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ. ಫೆಬ್ರವರಿ 23ಕ್ಕೆ 200 ಡ್ಯೂಕ್ ಮತ್ತು 390 ಡ್ಯೂಕ್ ವಿನೂತನ ಆವೃತ್ತಿಗಳು ಬಿಡುಗಡೆಗೊಳ್ಳಲಿದ್ದು, ತದನಂತರವಷ್ಟೇ 250 ಡ್ಯೂಕ್ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

To Follow DriveSpark On Facebook, Click The Like Button
ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ವಿನೂತನ ಕೆಟಿಎಂ 250 ಡ್ಯೂಕ್ ಚಿತ್ರಗಳು: ಭಾರತದಲ್ಲಿ ಬಿಡುಗಡೆಗೆ ಪ್ಲ್ಯಾನ್

ಈ ಮಧ್ಯೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಕೊಂಡಿರುವ ಕೆಟಿಎಂ 250 ಡ್ಯೂಕ್ ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಸಿದ್ಧಗೊಳ್ಳುತ್ತಿದೆ. ಆದ್ರೆ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ 250 ಡ್ಯೂಕ್ ವಿಚಾರದಲ್ಲಿ ಕೆಲ ಗೊಂದಲಗಳಿದ್ದು, 250 ಡ್ಯೂಕ್ ಬದಲಾಗಿ 200 ಡ್ಯೂಕ್ ಇದ್ದಿರಬಹುದೇ ಎಂದು ಉಹಿಸಲಾಗುತ್ತಿದೆ. ಆದರೂ ಪುಣೆ ಬಜಾಜ್ ಚಾಕನ್ ಉತ್ಪಾದನಾ ಕೇಂದ್ರದಲ್ಲಿ 250 ಡ್ಯೂಕ್ ಉತ್ಪಾದನೆ ಭರದಿಂದ ಸಾಗಿದ್ದು, ನೂತನ ಆವೃತ್ತಿ ಗಮನಸೆಳೆಯುತ್ತಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ವಿನೂತನ ಕೆಟಿಎಂ 250 ಡ್ಯೂಕ್ ಚಿತ್ರಗಳು: ಭಾರತದಲ್ಲಿ ಬಿಡುಗಡೆಗೆ ಪ್ಲ್ಯಾನ್

ಟೆಸ್ಪಿಂಗ್ ವೇಳೆ ಕಾಣಿಸಿಕೊಂಡಿರುವ ಬೈಕ್ ಚಿತ್ರಗಳ ಪ್ರಕಾರ ಕೆಟಿಎಂ 250 ಡ್ಯೂಕ್ ಬಾಹ್ಯ ರಚನೆ ಅದ್ಭುತವಾಗಿದೆ. ಈ ಹಿಂದಿನ 200 ಡ್ಯೂಕ್ ಕೆಲವು ವೈಶಿಷ್ಠತೆಗಳನ್ನು ಹೊಲುತ್ತಿದ್ದು, ನಿಜಾಂಶ ಬಹಿರಂಗವಾಗದಂತೆ ಪದರಗಳನ್ನು ಮುಚ್ಚಿದ್ದರಿಂದ ಕೆಲವು ವಿನ್ಯಾಸಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಒಟ್ಟಿನಲ್ಲಿ 250 ಡ್ಯೂಕ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಡುವುದು ಖಾತ್ರಿಯಾಗಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ವಿನೂತನ ಕೆಟಿಎಂ 250 ಡ್ಯೂಕ್ ಚಿತ್ರಗಳು: ಭಾರತದಲ್ಲಿ ಬಿಡುಗಡೆಗೆ ಪ್ಲ್ಯಾನ್

ಇನ್ನು 250 ಡ್ಯೂಕ್ ಬೈಕ್ ಅಂತರ್ರಾಷ್ಟ್ರೀಯ ದರ್ಜೆಯಲ್ಲಿ ಸಿದ್ಧಗೊಂಡಿದ್ದು, ಸ್ಪೋರ್ಟ್ಸ್ ಬಳಕೆಯ ಎಂಆರ್‌ಎಫ್ Revz-FC1 ಟೈರ್ ಬಳಸಲಾಗಿದೆ. ಹೀಗಾಗಿ 250 ಡ್ಯೂಕ್ ಸಾಮಾನ್ಯವಾಗಿಯೇ ಅಧಿಕ ಬೇಡಿಕೆ ಸೃಷ್ಠಿಸುವ ಸಾಧ್ಯತೆಗಳಿದ್ದು, 390 ಡ್ಯೂಕ್ ಖರೀದಿ ಸಾಧ್ಯವಾಗದ ಗ್ರಾಹಕರು 250 ಡ್ಯೂಕ್ ಖರೀದಿಸಬಹುದೆಂಬ ನೀರಿಕ್ಷೆಯಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ವಿನೂತನ ಕೆಟಿಎಂ 250 ಡ್ಯೂಕ್ ಚಿತ್ರಗಳು: ಭಾರತದಲ್ಲಿ ಬಿಡುಗಡೆಗೆ ಪ್ಲ್ಯಾನ್

ಆದ್ದರಿಂದಲೇ ಕೆಟಿಎಂ ಡ್ಯೂಕ್ 250 ಭಾರತದಲ್ಲಿ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಫೆಬ್ರವರಿ 23ರ ನಂತರವಷ್ಟೇ ಎಲ್ಲ ಉಹಾಪೋಹಗಳಿಗೆ ಉತ್ತರ ಸಿಗಲಿದೆ. ಇನ್ನು ಕೆಟಿಎಂ 200 ಡ್ಯೂಕ್ ಮತ್ತು 390 ಡ್ಯೂಕ್ ಬಿಡುಗಡೆಯ ದಿನದಂದು ಖಚಿತ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್ ತಪ್ಪದೇ ಓದಿ.

ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ವಿನೂತನ ಕೆಟಿಎಂ 250 ಡ್ಯೂಕ್ ಚಿತ್ರಗಳು: ಭಾರತದಲ್ಲಿ ಬಿಡುಗಡೆಗೆ ಪ್ಲ್ಯಾನ್

ಭಾರತದಲ್ಲಿ ಬಿಡುಗಡೆಗೊಳ್ಳಲು ಕಾಯ್ದಿರುವ ಕೆಟಿಎಂ 250 ಡ್ಯೂಕ್ ಬೈಕ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Spy Pics reveal the 2017 Duke 250 testing in India. What exactly are KTM planning?
Please Wait while comments are loading...

Latest Photos