ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

Written By:

ಇಟಲಿಯ ಅತಿ ಪುರಾತನ ಹಾಗೂ ಅತ್ಯಂತ ಖ್ಯಾತಿ ಪಡೆದಿರುವ ಸ್ಪೋರ್ಟ್ಸ್ ಬೈಕ್ ತಯಾರಕ ಕಂಪನಿಯಾಗಿರುವ ಎಂವಿ ಅಗಸ್ಟಾ (Meccanica Verghera Agusta)ಮತ್ತೊಂದು ನೂತನ ಬೈಕನ್ನು ಅನಾವರಣಗೊಳಿಸಿದೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಫ್3, ಎಫ್4, ಬ್ರೂಟಲೆ ಹಾಗೂ ರೈವಲೆ ಸರಣಿಯ ಬೈಕ್‌ಗಳು ಎಂವಿ ಅಗಸ್ಟಾದ ಪ್ರಮುಖ ಉತ್ಪನ್ನಗಳಾಗಿದ್ದು, ಇದೇ ಸರಣಿಯಲ್ಲಿ ಮತ್ತೊಂದು ಬ್ರೂಟಲೆ 800 ಮಾಡೆಲ್ ಬೈಕನ್ನು ಅಗಸ್ಟಾ ಬಿಡುಗಡೆ ಮಾಡಿದೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

ಬೆಲೆಗಳು

ಪೂರ್ಣ ಪ್ರಮಾಣದಲ್ಲಿ ದೇಶಿಯವಾಗಿ ಉತ್ಪಾದನೆಗೊಂಡಿರುವ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಬೆಲೆಯು ಎಕ್ಸ್‌ಶೋರಂಗಳ ಪ್ರಕಾರ ರೂ.15.59 ಲಕ್ಷಕ್ಕೆ ಲಭ್ಯವಿದ್ದು, ವಿಶೇಷವಾಗಿ ರೇಸಿಂಗ್ ವಿಭಾಗಕ್ಕಾಗಿಯೇ ಅದ್ಭುತ ವಿನ್ಯಾಸಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

798ಸಿಸಿ ಇನ್‌ಲೈನ್ ತ್ರಿ ಸಿಲಿಂಡರ್ ಎಂಜಿನ್‌ನೊಂದಿಗೆ ಅಭಿವೃದ್ದಿ ಹೊಂದಿರುವ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್, 109ಬಿಎಚ್‌ಪಿ ಮತ್ತು 83ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

ಹೀಗಾಗಿ ಗಂಟೆಗೆ 237 ಕಿ.ಮಿ ಚಾಲನಾ ಶಕ್ತಿ ಪಡೆದುಕೊಂಡಿರುವ ಬ್ರೂಟಲೆ 800 ಬೈಕ್ ಆವೃತ್ತಿಯೂ ಎಂವಿಐಸಿಎಸ್ ತಂತ್ರಜ್ಞಾನದ ವ್ಯವಸ್ಥೆಯನ್ನು ಪಡೆದುಕೊಳ್ಳುವ ಮೂಲಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಮಾದರಿಯಲ್ಲಿ ಮೂರು ಹಂತದ ಎಬಿಎಸ್ ವ್ಯವಸ್ಥೆಯಿದ್ದು, ರೈಡ್ ಬೈ ವೈರ್ ಸಿಸ್ಟಂ, ಸ್ಲಿಪ್ಪರ್ ಕ್ಲಚ್, ಅಲ್ಯುಮಿನಿಯಂ ಫ್ರೇಮ್‌ಗಳು, 17-ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

ಇದರ ಜೊತೆಗೆ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಮುಂಭಾಗದ ಚಕ್ರವು 320ಎಂಎಂ 4-ಪಿಸ್ಟನ್ ಡಬಲ್ ಫ್ಲೋಟಿಂಗ್ ಡಿಸ್ಕ್‌ ಪಡೆದುಕೊಂಡಿದ್ದರೇ ಹಿಂಬದಿಯ ಚಕ್ರವೂ 2-ಪಿಸ್ಟನ್ 220-ಎಂಎಂ ಡಿಸ್ಕ್‌ನೊಂದಿಗೆ ಅಭಿವೃದ್ಧಿಗೊಂಡಿವೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

ಇನ್ನು ಬ್ರೂಟಲೆ 800 ಬೈಕ್ ಬಿಡುಗಡೆ ಮಾತನಾಡಿದ ಎಂವಿ ಅಗಸ್ಟಾ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಅಂಜಿಕ್ಯಾ ಫಿರೋದಾ, "ಬ್ರೂಟಲೆ 800 ಬೈಕ್ ಆವೃತ್ತಿ ಭಾರೀ ನೀರಿಕ್ಷೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ರೇಸಿಂಗ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ" ಎಂದಿದ್ದಾರೆ.

ಭಾರತದಲ್ಲಿ ಬಿಡುಗಡೆಯಾದ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

111 ಬಿಎಚ್‌ಪಿ ಉತ್ಪಾದನಾ ಆವೃತ್ತಿಗಳಾದ ಟ್ರಯಂಪ್ ಸ್ಟ್ರೀಟ್ ಟ್ರಿಪ್ಪಲ್, ಕವಾಸಕಿ ಝಡ್900 ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿ ಎಂವಿ ಅಗಸ್ಟಾ ಬ್ರೂಟಲೆ 800 ಬೈಕ್ ಅಭಿವೃದ್ಧಿಯಾಗಿದ್ದು, ಮುಂಬರುವ ದಿನಗಳಲ್ಲಿ ಹೊಸ ಯಾವ ರೀತಿ ಬೇಡಿಕೆಯನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

English summary
Read in Kannada about MV Agusta Brutale 800 Launched In India.
Story first published: Wednesday, July 19, 2017, 15:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark