ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಬಿಡುಗಡೆ

Written By:

ಭಾರತೀಯ ದ್ವಿಚಕ್ರ ವಾಹನ ತಯಾರಕ ಕಂಪೆನಿಯಾದ ಟಿವಿಎಸ್, ತನ್ನ ಹೊಸ ಜನರೇಷನ್ ಅಪಾಚೆ ಆರ್‌ಟಿಆರ್ 160 ಮೋಟಾರ್ ಸೈಕಲ್ ಸಿದ್ಧಪಡಿಸುತ್ತಿದ್ದು, ಈಗಾಗಲೇ ಭಾರತದಲ್ಲಿ ಪರೀಕ್ಷೆ ನೆಡೆಸಲಾಗುತ್ತಿದೆ.

ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಹೊಸ ಅಪಾಚೆ ಆರ್‌ಟಿಆರ್ 160 ಮೋಟಾರ್‌ಸೈಕಲ್ ವಿಶಾಖಪಟ್ಟಣಂನಲ್ಲಿ ಕಾಣಿಸಿಕೊಂಡಿದೆ. ನವೀನ ಮಾದರಿಯ ಈ ಬೈಕ್, ಆರ್‌ಟಿಆರ್ 200 4ವಿ ಬ್ಯಾಡ್ಜ್ ಪಡೆದುಕೊಂಡಿದೆ. 160ಸಿಸಿ ಬೈಕ್ ಆಗಿದ್ದರೂ ಸಹ ಪರೀಕ್ಷೆಯ ಸಲುವಾಗಿ 200 4ವಿ ಬ್ಯಾಡ್ಜ್ ಹೊದಿಕೆಯೊಂದಿಗೆ ರಸ್ತೆಯಲ್ಲಿ ಕಾಣಿಸಿಕೊಂಡಿದೆ.

ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಹೊಸ ಜನರೇಷನ್ ಅಪಾಚೆ ಆರ್‌ಟಿಆರ್ 160 ಸಿಂಗಲ್-ಪೀಸ್ ಹ್ಯಾಂಡಲ್, ನಿಯಮಿತ ಮಿಶ್ರಲೋಹದ ಚಕ್ರಗಳು, ಸಿಂಗಲ್ ಪೀಸ್ ಸೀಟು ಮತ್ತು ಕೆಂಪು ಬಣ್ಣದ ರಿಮ್ ಪಡೆದ ತೆಳುವಾದ ಹಿಂಭಾಗದ ಟೈರ್ ಹೊಂದಿದೆ.

ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಅಪಾಚೆ ಆರ್‌ಟಿಆರ್ 160 ಬೈಕ್ ತನ್ನ ಹಿರಿಯ ಸಹೋದರನಂತಿರುವ ಅಪಾಚೆ ಆರ್‌ಟಿಆರ್ 200 4ವಿ ಬೈಕಿನಿಂದ ಹೆಚ್ಚು ವಿನ್ಯಾಸದ ಸೂಚನೆಗಳನ್ನು ಪಡೆದುಕೊಂಡಿದೆ.

ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಡಿಜಿಟಲ್ ಸಲಕರಣೆ ಕ್ಲಸ್ಟರ್, ಬಿಕಿನಿ ಫೇರ್ರಿಂಗ್, ಇಂಧನ ಟ್ಯಾಂಕ್, ಡಬಲ್ ಬ್ಯಾರೆಲ್ ಎಕ್ಸ್‌ಸಾಸ್ಟ್, ಎಲ್ಇಡಿ ಟೈಲ್ ದೀಪ ಮತ್ತು ಟರ್ನ್ ಇಂಡಿಕೇಟರ್‌ಗಳು ಪಡೆದುಕೊಂಡಿರುವ ಈ ಮೋಟಾರ್ ಸೈಕಲ್ 200ಸಿಸಿ ಬೈಕ್ ಹೋಲುತ್ತದೆ.

ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಚಿತ್ರಗಳನ್ನು ಗಮನಿಸಿದಂತೆ, ಮೊದಲ ಬಾರಿಗೆ ಅಪಾಚೆ ಆರ್‌ಟಿಆರ್ 160 ಬೈಕ್ ಹಿಂಭಾಗದಲ್ಲಿ ಮೊನೋಶಾಕ್ ಸೂಸ್ಪೆನ್‌ಷನ್ ಪಡೆಯುತ್ತದೆ. ಬ್ರೇಕ್ ವಿಚಾರಗಳ ಬಗ್ಗೆ ಹೇಳುವುದಾದರೆ, ಈ ಬೈಕ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ನೊಂದಿಗೆ ಬಿಡುಗಡೆಯಾಗಲಿದೆ.

ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಹೊಸ ಜನರೇಷನ್ ಅಪಾಚೆ ಆರ್‌ಟಿಆರ್ 160 ಬೈಕಿನಲ್ಲಿ ವಿಶಿಷ್ಟವಾದ ಎಂಜಿನ್ ಅಳವಡಿಸಲಾಗಿದ್ದು, 13.1 ಎನ್ಎಂ ತಿರುಗುಬಲದಲ್ಲಿ 15.2 ರಷ್ಟು ಅಶ್ವಶಕ್ತಿಯನ್ನು ಉತ್ಪಾದಿಸಲಿದೆ ಹಾಗು ಈ ಎಂಜಿನ್ 5-ಸ್ಪೀಡ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಅನಾವರಣಗೊಳ್ಳಲಿದೆ ಎಂಬ ವಿಚಾರ ತಿಳಿದು ಬಂದಿದೆ.

ಮುಂದಿನ ಪೀಳಿಗೆಯ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಭಾರತದ ಮಾರುಕಟ್ಟೆಗೆ ಬಿಡುಗಡೆಯಾದ ನಂತರ ಹೊಸ ಅಪಾಚೆ ಆರ್‌ಟಿಆರ್ 160 ಬೈಕ್, ಬಜಾಜ್ ಸಂಸ್ಥೆಯ ಪಲ್ಸರ್ ಎನ್ಎಸ್ 160, ಸುಝುಕಿ ಜಿಕ್ಸರ್, ಯಮಹಾ ಎಫ್‌ಝೆಡ್ ವಿ2.0 ಮತ್ತು ಹೋಂಡಾ ಸಿಬಿ ಹಾರ್ನರ್ 160 ಆರ್ ನಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ.

Read more on ಟಿವಿಎಸ್ tvs
English summary
Indian two-wheeler manufacturer TVS is readying the new-gen Apache RTR 160, and the motorcycle has been already spotted testing in the country.
Story first published: Monday, September 4, 2017, 18:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark