ಜಿಕ್ಸರ್ ಮಾದರಿಗಾಗಿ #NotForEveryone ಅಭಿಯಾನ ಆರಂಭಿಸಿದ ಸುಜುಕಿ
ಜನಪ್ರಿಯ ಜಿಕ್ಸರ್ ಮೋಟಾರ್ ಸೈಕಲ್ ಜಾಹೀರಾತಿಗಾಗಿ ಹೊಸ ಅಭಿಯಾನ ಶುರು ಮಾಡಿರುವ ಸುಜುಕಿ ಸಂಸ್ಥೆಯು #NotForEveryone ಎನ್ನುವ ಹೊಸ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಜನಪ್ರಿಯ ಜಿಕ್ಸರ್ ಮೋಟಾರ್ ಸೈಕಲ್ ಜಾಹೀರಾತಿಗಾಗಿ ಹೊಸ ಅಭಿಯಾನ ಶುರು ಮಾಡಿರುವ ಸುಜುಕಿ ಸಂಸ್ಥೆಯು #NotForEveryone ಎನ್ನುವ ಹೊಸ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮೊನ್ನೆಯಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಜಿಕ್ಸರ್ ಹೊಸ ಸರಣಿಗಳು ಬಿಡುಗಡೆಯಾಗಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ಬೃಹತ್ ಪ್ರಮಾಣದ ಬಂಡವಾಳದೊಂದಿಗೆ #NotForEveryone ಅನ್ನುವ ಹೊಚ್ಚ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ.

ಡಿಜಿಟಲ್ ಮಾಧ್ಯಮಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಸುಜುಕಿ ಸಂಸ್ಥೆಯು ಮುದ್ರಣ ಮಾಧ್ಯಮ ಮತ್ತು ಹೊರಾಂಗಣ ಚಟುವಟಿಕೆಗಳೊಂದಿಗೆ 360-ಡಿಗ್ರಿ ಪ್ಯಾನ್-ಇಂಡಿಯಾ ಅಭಿಯಾನ ಆರಂಭಿಸಿದ್ದು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಟಿವಿ ಚಾನೆಲ್‌ಗಳಲ್ಲೂ ಹೊಸ ಅಭಿಯಾನವನ್ನು ಪ್ರಸಾರ ಮಾಡುತ್ತಿದೆ.
Recommended Video


ಇದಲ್ಲದೇ ಗ್ರಾಹಕರ ಆಯ್ಕೆಗಳನ್ನು ಸರಳಗೊಳಿಸುತ್ತಿರುವ ಬಜಾಜ್ ಸಂಸ್ಥೆಯು, ಸುಧಾರಿತ ತಂತ್ರಜ್ಞಾನಗಳೊಂದಿಗೆ ಹೊಸ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದೆ.

ಹೊಸ ಬಗೆಯ ಗ್ರಾಫಿಕ್ಸ್ ಎಸ್ಪಿ ಸಿಂಬಲ್ ಜೊತೆ ಮೊನ್ನೆಯಷ್ಚೇ ಬಿಡುಗಡೆಗೊಂಡಿರುವ ಜಿಕ್ಸರ್ ಆವೃತ್ತಿಯು ಈಗಾಗಲೇ ಭರ್ಜರಿಯಾಗಿ ಮಾರಾಟಗೊಳ್ಳುತ್ತಿದ್ದು, ವಿವಿಧ ಮಾಧ್ಯಮ ಸಹಯೋಗದೊಂದಿಗೆ ಹೆಚ್ಚಿನ ಪ್ರಚಾರ ನೀಡಲು ಮುಂದಾಗಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಮೋಟಾರ್ ಬೈಕ್ ವಿಭಾಗದಲ್ಲಿ ಹೊಸ ಬೇಡಿಕೆಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ಸುಜುಕಿ ಸಂಸ್ಥೆಯು , ಜಿಕ್ಸರ್ ಮಾರಾಟದಲ್ಲಿ ಹೊಸ ದಾಖಲೆಗಾಗಿ #NotForEveryone ಎನ್ನುವ ಹೊಸ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಗಮನಾರ್ಹ.


Click it and Unblock the Notifications








