ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

Written By:

ಎಬಿಎಸ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಗೊಂಡಿರುವ ಜಿಕ್ಸರ್ ಎಸ್ಎಫ್ ಆವೃತ್ತಿಯು ಬಿಡುಗಡೆಯಾಗಿದ್ದು, ಹೊಸ ಬೈಕ್‌ನ ತಾಂತ್ರಿಕ ವಿವರಗಳು ಮತ್ತು ಬೆಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

ಎಬಿಎಸ್(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ) ನೊಂದಿಗೆ ಹೊಸತನ ಪಡೆದಿರುವ ಸುಜುಕಿ ಜಿಕ್ಸರ್ ಎಸ್ಎಫ್ ಬೈಕ್ ಆವೃತ್ತಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಆರಂಭಿಕ ಬೈಕ್ ಆವೃತ್ತಿಯ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.95,599 ಕ್ಕೆ ಲಭ್ಯವಿರಲಿವೆ.

ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

ಇದರ ಜೊತೆ ಉನ್ನತ ಮಾದರಿಯ ತಂತ್ರಜ್ಞಾನಗಳನ್ನು ಹೊಂದಿರುವ ಜಿಕ್ಸರ್ ಎಸ್ಎಫ್ ಎಬಿಎಸ್ ಎಫ್1 ಆವೃತ್ತಿಯು ದೆಹಲಿ ಎಕ್ಸ್‌ಶೋರಂಗಳ ಪ್ರಕಾರ ರೂ.99,312ಕ್ಕೆ ಲಭ್ಯವಿದ್ದು, ಅಗತ್ಯ ಸುರಕ್ಷಾ ಸಾಧನಗಳನ್ನು ಪಡೆದುಕೊಂಡಿವೆ.

ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

155-ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿರುವ ಜಿಕ್ಸರ್ ಆವೃತ್ತಿಗಳು 14.5-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿವೆ.

ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

ಅದಲ್ಲದೇ ತ್ರಿವಳಿ ಮಾದರಿಯ ಪೇಂಟ್ ಸ್ಕಿಮ್, ವಿನೂತನ ಲೊಗೊ ಮಾದರಿ ಮತ್ತು ಅತ್ಯುತ್ತಮ ಗ್ರಾಫಿಕ್ಸ್ ಪಡೆದುಕೊಂಡಿರುವ ಜಿಕ್ಸರ್ ಎಸ್ಎಫ್ ಎಬಿಎಸ್, ಪ್ರಸ್ತುತ ಮಾರುಕಟ್ಟೆಯಲ್ಲಿನ ಅನುಗುಣವಾಗಿ ಸ್ಪೋರ್ಟ್ ಲುಕ್ ಪಡೆದುಕೊಂಡಿದೆ.

ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

ಸ್ಪೋರ್ಟ್ ಲುಕ್ ನೀಡಿರುವ ಹಿನ್ನೆಲೆ ಜಿಕ್ಸರ್ ಎಸ್ಎಫ್ ಆವೃತ್ತಿಗಳಲ್ಲಿ ಟ್ವಿನ್ ಫೋರ್ಟ್ ಎಕ್ಸಾಸ್ಟ್ ನೀಡಲಾಗಿದ್ದು, ಡಿಜಿಟಲ್ ಇನ್ಟ್ರುಮೆಂಟ್, ಮಂಭಾಗದಲ್ಲಿ 41 ಎಂಎಂ ಫೋರ್ಕ್ ಚಕ್ರಗಳು ಮತ್ತು ವೈಲ್ಡ್ ರೆಡಿಯಲ್ ಟೈರ್‍‌ಗಳನ್ನು ಒದಗಿಸಲಾಗಿದೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

ಇನ್ನು ಗ್ರಾಹಕರ ಬೇಡಿಕೆ ಅನುಗುಣವಾಗಿ ಜಿಕ್ಸರ್ ಎಸ್ಎಫ್ ಆವೃತ್ತಿಗಳನ್ನು ಗ್ರಾಸ್ ಸ್ಪಾರಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಬ್ಲ್ಯಾಕ್ ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಹಲವು ಬೈಕ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

ಬಹುನೀರಿಕ್ಷಿತ ಸುಜುಕಿ ಜಿಕ್ಸರ್ ಎಸ್‌ಎಫ್ ಎಬಿಎಸ್ ಬೈಕ್ ಆವೃತ್ತಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

2018ರಿಂದ 125ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್ ಮಾದರಿಗಳಲ್ಲೂ ಎಬಿಎಸ್ ಕಡ್ಡಾಯವಾಗಲಿದ್ದು, ಈ ನಿಟ್ಟಿನಲ್ಲಿ ತನ್ನ ಎಲ್ಲ ಬೈಕ್‌ ಮಾದರಿಗಳನ್ನು ಸುಜುಕಿ ಸಂಸ್ಥೆಯು ಎಬಿಎಸ್ ಜೊತೆ ಬಿಡುಗಡೆ ಮಾಡಿರುವುದು ಗಮರ್ನಾಹ.

Read more on ಸುಜುಕಿ suzuki
English summary
Read in Kannada about Suzuki Gixxer SF ABS Launched In India.
Story first published: Thursday, August 10, 2017, 13:13 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark