ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

Written By:

ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಸುಜುಕಿಯು ತನ್ನ ಹೊಸ ಬೈಕ್ ಉತ್ಪನ್ನವಾದ ಇನ್‌ಟ್ರುಡರ್ 150 ಅನ್ನು ಇದೇ ತಿಂಗಳು ನವೆಂಬರ್ 7ಕ್ಕೆ ಭಾರತದಲ್ಲಿ ಪರಿಚಯಿಸುತ್ತಿದ್ದು, ಹೊಸ ಬೈಕಿನ ವಿಶೇಷ ವಿನ್ಯಾಸಗಳು ಸೂಪರ್ ಬೈಕ್ ಪ್ರಿಯರ ಆಕರ್ಷಣೆಗೂ ಕಾರಣವಾಗಿವೆ.

ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಭಾರತೀಯ ಮಾರುಕಟ್ಟೆಗಾಗಿ ಕಡಿಮೆ ಎಂಜಿನ್ ಸಾಮರ್ಥ್ಯದ ಕ್ರೂಸರ್ ಬೈಕ್ ಮಾದರಿಯನ್ನು ಪರಿಚಯಿಸುತ್ತಿರುವ ಸುಜುಕಿ ಸಂಸ್ಥೆಯು ತನ್ನದೇ ನಿರ್ಮಾಣದ ಎಂ1880 ಆರ್ ಸೂಪರ್ ಬೈಕ್ ಪ್ರೇರಣೆಯೊಂದಿಗೆ ಇನ್‌ಟ್ರುಡರ್ 150 ಅನ್ನು ಅಭಿವೃದ್ಧಿಗೊಳಿಸಿದೆ.

ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಅಮೆರಿಕ ಸೇರಿದಂತೆ ಯುರೋಪಿನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜಿಝಡ್150 ಆವೃತ್ತಿಯನ್ನು ಬಿಡುಗಡೆ ಮಾಡುವ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದ ಸುಜುಕಿಯು ಇದೀಗ ಇನ್‌ಟ್ರುಡರ್ 150 ಅನ್ನು ಪರಿಚಯಿಸುತ್ತಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಈ ಮೂಲಕ ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿರುವ ಇನ್‌ಟ್ರುಡರ್ 150 ಆವೃತ್ತಿಯು ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಟ್ವಿನ್ ಫೋರ್ಟ್ ಕ್ರೋಮ್ ಎಕ್ಸಾಸ್ಟ್, 17- ಇಂಚಿನ ಬ್ಲ್ಯಾಕ್ ಅಲ್ಹಾಯ್ ಚಕ್ರಗಳನ್ನು ಹೊಂದಿರುವುದು ಹೊಸ ಬೈಕ್ ಲುಕ್ ಮತ್ತಷ್ಟು ಹೆಚ್ಚಿಸಿದೆ.

Recommended Video - Watch Now!
[Kannada] MV Agusta Brutale Launched In India - DriveSpark
ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಜೊತೆಗೆ ಇನ್‌ಸ್ಟ್ರುಮೆಂಟಲ್ ಕ್ಲಸ್ಟರ್, ರಿರ್ ಪ್ಲೆಂಡರ್ ಮತ್ತು ಬಕೆಟ್ ಸ್ಟೈಲ್ ಸೀಟುಗಳು ಸೂಪರ್ ಬೈಕ್ ಲುಕ್ ನೀಡಿದ್ದು, ಜಿಕ್ಸರ್ ಎಸ್ಎಫ್ ಮಾದರಿಯಲ್ಲೇ ಸಿಂಗಲ್ ಚಾನೆಲ್ ಎಬಿಎಸ್ ಸೌಲಭ್ಯವನ್ನು ಪಡೆದುಕೊಂಡಿದೆ.

ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಎಂಜಿನ್ ಸಾಮರ್ಥ್ಯ

154.9 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಆವೃತ್ತಿಯು 14-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ತಪ್ಪದೇ ಓದಿ-ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?

ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಬೆಲೆ (ಅಂದಾಜು)

ಇನ್‌ಟ್ರುಡರ್ 150 ಬೆಲೆಯ ನಿಖರ ಮಾಹಿತಿ ಇಲ್ಲವಾದರೂ ಸುಧಾರಿತ ತಂತ್ರಜ್ಞಾನ ಅಳವಡಿಕೆ ಹಿನ್ನೆಲೆ ರೂ.95 ಸಾವಿರದಿಂದ ರೂ.1.10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಅವೆಂಜರ್ 150 ಹಿಂದಿಕ್ಕುತ್ತಾ ಸುಜುಕಿ ಹೊಸ ಬೈಕ್ ಇನ್‍ಟ್ರುಡರ್ 150?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸಂಸ್ಥೆಯು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿರುವ ಇನ್‌ಟ್ರುಡರ್ 150 ಬೈಕ್ ಈ ಹಿಂದಿನ ಎಂ1800 ಆರ್ ಪ್ರೇರಣೆ ಹೊಂದಿದ್ದು, ಬಜಾಜ್ ಉತ್ಪನ್ನಗಳಾದ ಅವೆಂಜರ್ 150 ಮತ್ತು ಅವೆಂಜರ್ 220 ಆವೃತ್ತಿಗೆ ಪ್ರತಿಸ್ಪರ್ಧಿಯಾಗುವ ತವಕದಲ್ಲಿದೆ.

Trending On DriveSpark Kannada:

100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯಸರ್ಕಾರ..!!

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

English summary
Read in Kannada: Suzuki Intruder 150 Bike Clear Images Reveals Design And Other Details.
Story first published: Saturday, November 4, 2017, 11:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark