ಡ್ಯುಯಲ್ ಟೋನ್ ಬಣ್ಣಗಳಲ್ಲಿ ಸುಜುಕಿ ಲೆಟ್ಸ್ ಸ್ಕೂಟರ್ ಬಿಡುಗಡೆ

Written By:

ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಹೊಸ ಡ್ಯುಯಲ್ ಟೋನ್ ಬಣ್ಣ ಯೋಜನೆಯೊಂದಿಗೆ ಲೆಟ್ಸ್(let's) ಸ್ಕೂಟರ್ ಬಿಡುಗಡೆಗೊಳಿಸಿದೆ.

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮತ್ತೆ ಬಿಡುಗಡೆಗೊಂಡ ಸುಜುಕಿ ಲೆಟ್ಸ್ ಸ್ಕೂಟರ್

ವಿಶ್ವದಾದ್ಯಂತ ತನ್ನ ಶ್ರೇಷ್ಠ ರೀತಿಯ ವಾಹನಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಸುಜುಕಿ ಕಂಪನಿಯು ಎರಡು ವಿಶೇಷ ಬಣ್ಣಗಳನ್ನು ಹೊಂದಿರುವ let's ಸ್ಕೂಟರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಹೆಚ್ಚಿನ ಮಾಹಿತಿ ಇಲ್ಲಿದೆ.

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮತ್ತೆ ಬಿಡುಗಡೆಗೊಂಡ ಸುಜುಕಿ ಲೆಟ್ಸ್ ಸ್ಕೂಟರ್

ಹೊಸದಾಗಿ ಬಿಡುಗಡೆ ಮಾಡಲಾದ ಡ್ಯುಯಲ್ ಟೋನ್ ವೆರಿಯಂಟ್ ಸ್ಕೂಟರ್ ರೂ. 48,193 ಎಕ್ಸ್ ಷೋ ರೂಂ(ದೆಹಲಿ) ದರದಲ್ಲಿ ಲಭ್ಯವಿದೆ.

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮತ್ತೆ ಬಿಡುಗಡೆಗೊಂಡ ಸುಜುಕಿ ಲೆಟ್ಸ್ ಸ್ಕೂಟರ್

ಸ್ಕೂಟರ್‌ನ ಒಟ್ಟಾರೆ ವಿನ್ಯಾಸವು ಯಾವುದೇ ರೀತಿಯ ಬದಲಾವಣೆ ಪಡೆಯುವುದಿಲ್ಲ ಎನ್ನಲಾಗಿದೆ. ಆದರೆ, ಹೊಸ let's ಸ್ಕೂಟರ್ ಹೊಸ ಗ್ರಾಫಿಕ್ಸ್ ಮತ್ತು ಕಪ್ಪು ಬಣ್ಣದ ಚಕ್ರಗಳನ್ನು ಒಳಗೊಂಡಿರಲಿದೆ.

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮತ್ತೆ ಬಿಡುಗಡೆಗೊಂಡ ಸುಜುಕಿ ಲೆಟ್ಸ್ ಸ್ಕೂಟರ್

ಈ ಹೊಸ ದ್ವಿಚಕ್ರ ವಾಹನವು ಹೊಸ ಯಾವುದೇ ಯಾಂತ್ರಿಕ ಬದಲಾವಣೆಗಳಿಲ್ಲದೆ ಬಿಡುಗಡೆಗೊಂಡಿದೆ. ಈ ಸ್ಕೂಟರ್ 112.8 ಸಿಸಿ ಬಿಎಸ್-4 ಕಂಪ್ಲೈಂಟ್ ಇಂಜಿನ್ ಹೊಂದಿದೆ ಮತ್ತು 8.8 ಎನ್ಎಂ ತಿರುಗುಬಲದಲ್ಲಿ 8.2 ಅಶ್ವಶಕ್ತಿ ಉತ್ಪಾದಿಸುತ್ತದೆ.

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮತ್ತೆ ಬಿಡುಗಡೆಗೊಂಡ ಸುಜುಕಿ ಲೆಟ್ಸ್ ಸ್ಕೂಟರ್

ಸ್ಕೂಟರಿನ ಇಂಜಿನ್‌ನಲ್ಲಿ ಸಿವಿಟಿ ಗೇರ್ ಬಾಕ್ಸ್ ಜೋಡಿಸಲಾಗಿದೆ ಮತ್ತು ಸುಧಾರಿತ ಮೈಲೇಜ್‌ಗಾಗಿ ಎಸ್ಇಪಿ ತಂತ್ರಜ್ಞಾನ ಅಳವಡಿಸಲಾಗಿದೆ.

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮತ್ತೆ ಬಿಡುಗಡೆಗೊಂಡ ಸುಜುಕಿ ಲೆಟ್ಸ್ ಸ್ಕೂಟರ್

ಸ್ಕೂಟರ್ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗು ಹಿಂಭಾಗದಲ್ಲಿ ಸ್ವಿನ್ ಗ್ರಾಂ ರೀತಿಯ ಕಾಯಿಲ್ ಸ್ಪ್ರಿಂಗ್‌ಗಳನ್ನು ಪಡೆಯಲಿದೆ. ಈ let's ಸ್ಕೂಟರಿನ ಇಂಧನ ಟ್ಯಾಂಕ್ ಸಾಮರ್ಥ್ಯವು 5.2 ಲೀಟರ್ಗಳಷ್ಟಿರುತ್ತದೆ.

ಡ್ಯುಯಲ್ ಟೋನ್ ಬಣ್ಣಗಳಲ್ಲಿ ಮತ್ತೆ ಬಿಡುಗಡೆಗೊಂಡ ಸುಜುಕಿ ಲೆಟ್ಸ್ ಸ್ಕೂಟರ್

ಭಾರತದಲ್ಲಿ ಲೆಟ್ಸ್ ಸ್ಕೂಟರ್ ಹೆಚ್ಚಿನ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂಬ ವಿಚಾರವನ್ನು ತಿಳಿದಿರುವ ಸುಜುಕಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಹೊಸ ಡ್ಯುಯಲ್ ಟೋನ್ ರೂಪಾಂತರವು ಸ್ಕೂಟರಿನ ಮಾರಾಟವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

Read more on ಸುಜುಕಿ suzuki
English summary
Read in kannada about Suzuki Motorcycle India has launched the Let's scooter with the new dual tone paint scheme.
Story first published: Thursday, July 6, 2017, 11:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark