ಸದ್ಯದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಆಪ್ ರೋಡಿಂಗ್ ಕಿಂಗ್ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್

Written By:

ಇಟಾಲಿಯನ್ ಮೂಲದ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್ ಸಂಸ್ಥೆಯು ತನ್ನ ವಿನೂತನ ಆವೃತ್ತಿಯ ಬೈಕ್ ಮಾದರಿಯನ್ನು ಬಿಡುಗಡೆಗೊಳಿಸುತ್ತಿದ್ದು, ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ.

ಎಸ್‌ಡಬ್ಲ್ಯುಎಂ ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಖ್ಯಾತಿ ಹೊಂದಿರುವ ಎಂವಿ ಅಗಸ್ಟಾ ಬೈಕ್ ಉತ್ಪಾದನಾ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್ ಸಂಸ್ಥೆಯು ತನ್ನ ಹೊಸ ಮಾದರಿಯ ಬೈಕ್‌ಗಳನ್ನು ಮಾರಾಟ ಮಾಡಲಿದೆ.

ಎಸ್‌ಡಬ್ಲ್ಯುಎಂ ಬೈಕ್

ಸುಧಾರಿತ ಇಟಾಲಿಯನ್ ತಂತ್ರಜ್ಞಾನ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಹೊಂದಿರುವ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್ 650ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಎಸ್‌ಡಬ್ಲ್ಯುಎಂ ಬೈಕ್

ಸೂಪರ್ ಡ್ಯುಯಲ್ ಟಿ ಮತ್ತು ಸೂಪರ್ ಡ್ಯುಯಲ್ ಎಕ್ಸ್ ಎಂಬ 2 ಪ್ರಮುಖ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವ ಎಸ್‌ಡಬ್ಲ್ಯುಎಂ ಮೋಟಾರ್ ಸೈಕಲ್ ಸಂಸ್ಧೆಯು, 4 ಸ್ಟ್ರೋಕ್ ಎಂಜಿನ್ ಪರಿಚಯ ಮಾಡುತ್ತಿದೆ.

ಎಸ್‌ಡಬ್ಲ್ಯುಎಂ ಬೈಕ್

ವಿಶೇಷವಾಗಿ ಆಪ್ ರೋಡಿಂಗ್ ಪ್ರಿಯರಿಗಾಗಿಯೇ ಈ ಬೈಕ್ ಮಾದರಿಗಳು ಸಿದ್ಧಗೊಂಡಿದ್ದು, ಬೆಲೆಗಳು ಕೂಡಾ ಸ್ವಲ್ಪ ಮಟ್ಟಿಗೆ ದುಬಾರಿ ಎನ್ನಿಸಲಿವೆ.

English summary
Read in Kannada about SWM Motorcycles India launch by December 2017.
Story first published: Saturday, May 27, 2017, 12:47 [IST]
Please Wait while comments are loading...

Latest Photos

X