ಕೆಟಿಎಂ ಆರ್‌ಸಿ 200 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಟಿವಿಎಸ್ ಅಪಾಚೆ ಆರ್‌ಆರ್ 310ಎಸ್

Written By:

ದ್ವಿಚಕ್ರ ವಾಹನ ತಯಾರಿಕಾ ಟಿವಿಎಸ್, ಭಾರತದಲ್ಲಿ ಕಡಿಮೆ ಬೆಲೆಯ ಬೈಕ್ ವಿಭಾಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಳ್ಳಲು ಯಶಸ್ವಿಯಾಗಿದೆ.ಈಗ ಸೂಪರ್ ಬೈಕ್ ವಾಹನಗಳ ಕಡೆ ಕಣ್ಣಿಟ್ಟಿರುವ ಟಿವಿಎಸ್ ಬಲಿಷ್ಠ ಬೈಕುಗಳ ನಿರ್ಮಾಣಕ್ಕೆ ಮುಂದಾಗಿದೆ.

ಕೆಟಿಎಂ ಆರ್‌ಸಿ 200 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಟಿವಿಎಸ್ ಅಪಾಚೆ ಆರ್‌ಆರ್ 310ಎಸ್

ಪೂರ್ಣ ಪ್ರಮಾಣದಲ್ಲಿ ಅಂದಗೊಳಿಸಲಾಗಿರುವ ಮತ್ತು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಅಕುಲಾ(ಅಪಾಚೆ 310) ದ್ವಿಚಕ್ರವನ್ನು ಟಿವಿಎಸ್ ಪ್ರಾರಂಭಿಸಲಿದೆ. ಇಲ್ಲಿಯವರೆಗು ಅನಾವರಣಗೊಳಿಸಿರುವ ಬೈಕುಗಳಲ್ಲಿ ಅತ್ಯಂತ ಶಕ್ತಿಶಾಲಿ ಮೋಟಾರ್ ಸೈಕಲ್ ಇದಾಗಲಿದೆ.

ಕೆಟಿಎಂ ಆರ್‌ಸಿ 200 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಟಿವಿಎಸ್ ಅಪಾಚೆ ಆರ್‌ಆರ್ 310ಎಸ್

ಟಿವಿಎಸ್ ಅಕುಲಾ 310(ಅಪಾಚೆ ಆರ್‌ಆರ್ 310 ಎಸ್ ಎಂದು ಬ್ರಾಂಡ್ ಮಾಡಬಹುದಾದ ಸಾಧ್ಯತೆ ಇದೆ)ಪರಿಕಲ್ಪನೆಯ ಉತ್ಪಾದನೆಯ ಆವೃತ್ತಿಯು, ಕೆಟಿಎಂ ಆರ್‌ಸಿ 200 ಬೈಕಿನೊಂದಿಗೆ ಸ್ಪರ್ಧೆ ನೆಡೆಸಲಿದೆ.(ಅಂದಾಜು ರೂ .1.7 ಲಕ್ಷ ಎಕ್ಸ್ ಶೋರೂಂ).

ಕೆಟಿಎಂ ಆರ್‌ಸಿ 200 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಟಿವಿಎಸ್ ಅಪಾಚೆ ಆರ್‌ಆರ್ 310ಎಸ್

ಟಿವಿಎಸ್ ಮತ್ತು ಬಿಎಂಡಬ್ಲ್ಯೂ ಕಂಪನಿಗಳು ಈ ವಿಚಾರವಾಗಿ ಒಪ್ಪಂದಕ್ಕೆ ಬಂದಿದ್ದವು. ಈ ಪ್ರಕಾರ ಮೋಟಾರ್ ಸೈಕಲ್ ಅಭಿವೃದ್ಧಿಯನ್ನು ಟಿವಿಎಸ್ ಮಾಡಲಿದ್ದು, ಅದರ ಎಂಜಿನ್‌ನನ್ನು ಬಿಎಂಡಬ್ಲ್ಯು ಮೊಟ್ರಾಡ್ ವಿನ್ಯಾಸಗೊಳಿಸಿಸುತ್ತದೆ.

ಕೆಟಿಎಂ ಆರ್‌ಸಿ 200 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಟಿವಿಎಸ್ ಅಪಾಚೆ ಆರ್‌ಆರ್ 310ಎಸ್

ಟಿವಿಎಸ್ ಮತ್ತು ಬಿಎಂಡಬ್ಲ್ಯೂ ಕಂಪನಿಗಳ ನಡುವೆ ಇರುವಂತಹ 'ತಂತ್ರಜ್ಞಾನ ಸಹಕಾರ ಒಪ್ಪಂದ'ದ ಭಾಗವಾಗಿ ಈ ಬಲಿಷ್ಠ ಬೈಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ, ಜಿ 310ಆರ್ ಮತ್ತು ಅಪಾಚೆ ಆರ್‌ಟಿಆರ್ 300 ಬೈಕುಗಳು ಟಿವಿಎಸ್ ಕಂಪನಿಯ ಹೊಸೂರು ಸ್ಥಾವರದಲ್ಲಿ ನಿರ್ಮಾಣ ಮಾಡಲಾಗುತ್ತದೆ.

ಕೆಟಿಎಂ ಆರ್‌ಸಿ 200 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಟಿವಿಎಸ್ ಅಪಾಚೆ ಆರ್‌ಆರ್ 310ಎಸ್

ಬಿಎಂಡಬ್ಲ್ಯೂ ಜಿ 310ಆರ್ ಮತ್ತು ಟಿವಿಎಸ್ ಅಪಾಚೆ ಆರ್‌ಆರ್ 310 ಎಸ್ ವಾಹನಗಳ ಉತ್ಪಾದನೆಯು ಈಗಾಗಲೇ ಪ್ರಾರಂಭವಾಗಿದ್ದು, ಅಪಾಚೆ ಆರ್‌ಆರ್ 310 ಎಸ್ ಬೈಕಿನ ಉತ್ಪಾದನೆ ಸದ್ಯದರಲ್ಲಿಯೇ ಪ್ರಾರಂಭವಾಗಲಿದೆ.

ಕೆಟಿಎಂ ಆರ್‌ಸಿ 200 ಬೈಕಿಗೆ ಸ್ಪರ್ಧೆ ನೀಡಲು ಬರ್ತಿದೆ ಟಿವಿಎಸ್ ಅಪಾಚೆ ಆರ್‌ಆರ್ 310ಎಸ್

ಸದ್ಯ, ನಿರ್ಮಾಣವಾಗುತ್ತಿರುವ ಜಿ 310ಆರ್ ವಾಹನವನ್ನು ಭಾರತದಲ್ಲಿ ಮಾರಾಟ ಮಾಡುತ್ತಿಲ್ಲ ಮತ್ತು ಎಲ್ಲಾ ತಯಾರಿಸಿದ ಘಟಕಗಳನ್ನು ರಫ್ತು ಮಾಡಲಾಗುತ್ತಿದೆ. ಇನ್ನು, ಅಪಾಚೆ ಆರ್‌ಆರ್ 310 ಎಸ್ ವಾಹನದ ಬಿಡುಗಡೆಯು ಡಿಸೆಂಬರ್ 6 ರಂದು ನಡೆಯಲಿದೆ, ಸದ್ಯದರಲ್ಲಿಯೇ ಬುಕಿಂಗ್ ತೆರೆಯುವ ನಿರೀಕ್ಷೆಯಿದೆ.

Read more on tvs ಟಿವಿಎಸ್
English summary
Read in Kannada about TVS Akula (Apache 310) to rival KTM RC 200 on price front
Story first published: Thursday, November 30, 2017, 11:36 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark