ಮಾರುಕಟ್ಟೆಗೆ ಲಗ್ಗೆಯಿಟ್ಟ 2017ರ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್..!!

Written By:

ದ್ಪಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಟಿವಿಎಸ್, ತನ್ನ ಹೊಸ ಆವೃತ್ತಿ 2017ರ ಅಪಾಚಿ ಆರ್‌ಟಿಆರ್ 200 4ವಿ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಅಪಾಚಿ ಪ್ರಿಯರಿಗೆ ಸಂತಸದ ಸುದ್ಧಿ ನೀಡಿದೆ.

ಸ್ಟ್ಯಾಂಡರ್ಡ್ ಪಿರೆಲಿ ಟೈರ್‌ ವ್ಯವಸ್ಥೆಯೊಂದಿಗೆ ಸಿದ್ಧಗೊಂಡಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, ಹೊರ ವಿನ್ಯಾಸದಲ್ಲಿ ಸಖತ್ ಲುಕ್ ಪಡೆದುಕೊಂಡಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ವಿನೂತನ ಆವೃತ್ತಿಯ ಬೆಲೆ ಮುಂಬೈ ಎಕ್ಸ್‌ಶೋರಂ ಪ್ರಕಾರ ರೂ. 97,800ಕ್ಕೆ ಲಭ್ಯವಿದೆ.

ಭಾರತೀಯ ಮಾರುಕಟ್ಟೆಯಲ್ಲಿನ ಪ್ರಸ್ತುತ ತಂತ್ರಜ್ಞಾನಗಳನ್ನು ಹೊಂದಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, ಬಿಎಸ್ IV ಎಂಜಿನ್ ಹಾಗೂ AHO (ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಯನ್ನು ಕೂಡಾ ಹೊಂದಿದೆ.

ವಿನೂತನ ಮಾದರಿಯಲ್ಲಿ ಸಿದ್ಧಗೊಂಡಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, ಸ್ಟ್ಯಾಂಡರ್ಡ್ ಟಿವಿಎಸ್ ರೆಮೋರಾ ರಬ್ಬರ್ ಟೈರ್ ಹೊಂದಿದೆ. ಇದಲ್ಲದೆ ಟಾಪ್ ಸ್ಪೆಕ್ ವ್ಯವಸ್ಥೆ ಕೂಡಾ ಇದ್ದು, ಎಬಿಎಸ್ ಮತ್ತು ಅತ್ಯುತ್ತಮ ಇಂಧನ ಕಾರ್ಯಕ್ಷಮತೆಯ ಸಾಮರ್ಥ್ಯ ಹೊಂದಿದೆ.

198 ಸಿಸಿ ಆಯಿಲ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, 20 ಬಿಎಚ್‌ಪಿ ಮತ್ತು 18ಎಂಎನ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 5-ಸ್ಪೀಡ್ ಟ್ರಾನ್ಸ್‌ಮಿಷನ್ ವ್ಯವಸ್ಥೆ ಕೂಡಾ ಇದೆ.

ಹೊಚ್ಚ ಹೊಸ ಅಪಾಚಿ ಮಾದರಿಯಲ್ಲಿ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿರುವ ಎಹೆಚ್‌ಓ ಮತ್ತು ಬಿಎಸ್-IV ಎಂಜಿನ್ ವ್ಯವಸ್ಥೆಯಿದೆ. ಹೊರ ಭಾಗದ ವಿನ್ಯಾಸದಲ್ಲಿ ಸಖತ್ ಲುಕ್ ಹೊಂದಿದ್ದು, 2,050 ಎಂಎಂ ಉದ್ದವಾಗಿದೆ. ಇನ್ನು 790 ಎಂಎಂ ಅಗಲವಾಗಿದ್ದು, 1,105 ಎಂಎಂ ಎತ್ತರವಾಗಿದೆ.

ಹೊಸ ಭರವಸೆಗಳೊಂದಿಗೆ ಮಾರುಕಟ್ಟೆಗೆ ವಿನೂತನ ಮಾದರಿಯನ್ನು ಬಿಡುಗಡೆ ಮಾಡಿರುವ ಟಿವಿಎಸ್, ಅಪಾಚಿ ಆರ್‌ಟಿಆರ್ 200 4ವಿ ಆವೃತ್ತಿ ಅಲ್ಲದೇ ಅಕುಲಾ 310 ಮಾದರಿಯ ಬೈಕ್ ಅನ್ನು ಹೊರತರುವ ಯೋಜನೆ ಹೊಂದಿದೆ ಎನ್ನಲಾಗಿದೆ.

ಸದ್ಯ ಮಾರುಕಟ್ಟೆಗೆ ಪ್ರವೇಶ ಪಡೆದಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್, 200-250 ಸಿಸಿ ಸಾಮರ್ಥ್ಯದ ಬೈಕ್ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ. ಅಲ್ಲದೇ ಕಡಿಮೆ ಬಜೆಟ್‌ನಲ್ಲಿ ಗುಣಮಟ್ಟದ ಬೈಕ್ ಖರೀದಿಗೂ ಇದು ಉತ್ತಮ ಆಯ್ಕೆಯಾಗಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸುದ್ಧಿಗಳು ನಿಮಗಾಗಿ

2017ರ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿ ಕ್ಲಿಕ್ ಮಾಡಿ.

ಬಿಡಗಡೆಯಾಗಿರುವ ವಿನೂತನ ಟಾಟಾ ಟಿಗೋರ್ ಚಿತ್ರಗಳು

English summary
The new Apache RTR 200 4V is shod with Pirelli tyres instead of the standard TVS Remora rubber.
Please Wait while comments are loading...

Latest Photos