ಆರ್1 ಬೈಕ್ ಬೆಲೆಯಲ್ಲಿ ರೂ. 2.57 ಲಕ್ಷ ಕಡಿತ ಮಾಡಿದ ಯಮಹಾ..!!

Written By: Rahul TS

ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಯಮಹಾ ತನ್ನ ದುಬಾರಿ ಬೆಲೆಯ ಆರ್1 ಬೈಕ್ ಮೇಲೆ ರೂ 2.57 ಲಕ್ಷ ಬೆಲೆ ಕಡಿತ ಮಾಡಿದ್ದು, ಸದ್ಯದ ಬೆಲೆಯು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ 20.73 ಲಕ್ಷದಿಂದ ರೂ.18.76 ಲಕ್ಷಕ್ಕೆ ಇಳಿಕೆಯಾಗಿದೆ.

ಆರ್1 ಬೈಕ್ ಬೆಲೆಯಲ್ಲಿ ರೂ. 2.57 ಲಕ್ಷ ಕಡಿತ ಮಾಡಿದ ಯಮಹಾ..!!

ಯಮಹಾ ಆರ್1 ಬೈಕ್ ಟೆಕ್ ಬ್ಲಾಕ್ ಮತ್ತು ಯಮಹಾ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬೆಲೆ ಕಡಿತದ ನಂತರ ಹೊಸ ಗ್ರಾಹಕರನ್ನು ಸೆಳೆಯುವ ತವಕದಲ್ಲಿದ್ದು, ಆರ್1 ಬೈಕ್ ಬೆಲೆಯಲ್ಲಿ ರೂ 2.57 ಲಕ್ಷ ಕಡಿತಗೊಳಿಸಿದ ನಂತರವೂ ಬೈಕ್ ಬೆಲೆಯು ಇತರೆ ಬೈಕ್‌ಗಳಿಗೆ ಹೋಲಿಕೆ ಮಾಡಿದಲ್ಲಿ ಇದು ತುಸು ದುಬಾರಿಯೇ ಎನ್ನಬಹುದು.

ಆರ್1 ಬೈಕ್ ಬೆಲೆಯಲ್ಲಿ ರೂ. 2.57 ಲಕ್ಷ ಕಡಿತ ಮಾಡಿದ ಯಮಹಾ..!!

ಎಂಜಿನ್ ಸಾಮರ್ಥ್ಯ

ಯಮಹಾ ವೈಜೆಡ್ಎಫ್-ಆರ್1 ಬೈಕ್‌ಗಳು 998-ಸಿಸಿ ಕ್ರಾಸ್ ಪ್ಲೇನ್, 4 ಸಿಲಿಂಡರ್, 4 ವಾಲ್ವ್ ಎಂಜಿನ್ ಪಡೆದಿದ್ದು, 197-ಬಿಹೆಚ್‍ಪಿ ಮತ್ತು 112-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಈ ಎಂಜಿನ್ ಅನ್ನು 6 ಸ್ಪೀಡ್ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದ್ದು, ಬೈಕಿನ ಪರ್ಫಾರ್ಮೆನ್ಸ್ ಹೆಚ್ಚಿಸಲು ಎಂಜಿನ್ ಅನ್ನು ನವೀಕರಿಸಲಾಗಿದೆ.

ಆರ್1 ಬೈಕ್ ಬೆಲೆಯಲ್ಲಿ ರೂ. 2.57 ಲಕ್ಷ ಕಡಿತ ಮಾಡಿದ ಯಮಹಾ..!!

ಬೈಕ್ ವೈಶಿಷ್ಟ್ಯತೆಗಳು

ಆರ್1 ಬೈಕ್ ಕ್ವಿಕ್ ಶಿಫ್ಟ್ ಸಿಸ್ಟಂ, ಲಿಫ್ಟ್ ಕಂಟ್ರೋಲ್ ಸಿಸ್ಟಂ, ಕೇಂದ್ರೀಯವಾಗಿ ಎಲ್ಇಡಿ ಹೆಡ್‍ಲ್ಯಾಂಪ್‍ಗಳೊಂದಿಗೆ ಪೋರ್ಸ್ಡ್ ಏರ್ ಇಂಟೇಕ್‍, ಎರಡೂ ಕಡೆಗೆ ಡಿಆರ್‍ಎಲ್, ಪೂರ್ಣವಾಗಿ ನಿಯಂತ್ರಿಸಬಲ್ಲ ಸಸ್ಪೆಷನ್ ಸಿಸ್ಟಂ ಮತ್ತು ಎಬಿಎಸ್ ಅನ್ನು ಪಡೆದಿದೆ.

ಆರ್1 ಬೈಕ್ ಬೆಲೆಯಲ್ಲಿ ರೂ. 2.57 ಲಕ್ಷ ಕಡಿತ ಮಾಡಿದ ಯಮಹಾ..!!

ಇನ್ನು ಈ ಬೈಕ್ 1405ಎಂಎಂ ಸಣ್ಣದಾದ ವೀಲ್‍ಬೇಸ್, 130-ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 17 ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 320ಎಂಎಂ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಮುಂಭಾಗದ ಟೈರ್ 120/70/17 ಮತ್ತು ಹಿಂಭಾಗದ ಚಕ್ರ 190/55/17 ಆಕಾರವನ್ನು ಹೊಂದಿವೆ.

ಆರ್1 ಬೈಕ್ ಬೆಲೆಯಲ್ಲಿ ರೂ. 2.57 ಲಕ್ಷ ಕಡಿತ ಮಾಡಿದ ಯಮಹಾ..!!

ಆರ್1 ಬೈಕ್‍ನಲ್ಲಿ ತಂತ್ರಜ್ಞಾನ ಮತ್ತು ಏರೊಡೈನಾಮಿಕ್ ವಿನ್ಯಾಸವನ್ನು ವೈಜೆಡ್ಎಫ್-ಎಂ1 ಬೈಕ್‍ನಿಂದ ಎರವಲು ಪಡೆದುಕೊಂಡಿದ್ದು, ಹೈ ಸ್ಕ್ರೀನ್ ಮತ್ತು ಲೋ ಹೆಡ್‍ಲೈಟ್ ಅನ್ನು ಬಳಸಿರುವುದು ಬೈಕಿಗೆ ರೇಸಿಂಗ್ ಲುಕ್ ಅನ್ನು ನೀಡಿದೆ.

ಆರ್1 ಬೈಕ್ ಬೆಲೆಯಲ್ಲಿ ರೂ. 2.57 ಲಕ್ಷ ಕಡಿತ ಮಾಡಿದ ಯಮಹಾ..!!

ಬೆಲೆ ಕಡಿತದ ನಂತರ ಯಮಹಾ ಹೊಸ ಗ್ರಾಹಕರನ್ನು ಸೆಳೆಯುವಲ್ಲಿ ನಿರೀಕ್ಷೆಯಲ್ಲಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಸಿಬಿಆರ್ 1000ಆರ್‍ಆರ್, ಸುಜುಕಿ ಜಿಎಸ್ಎಕ್ಸ್ ಆರ್1000 ಮತ್ತು ಕವಾಸಕಿ ನಿಂಜಾ ಜೆಡ್ಎಕ್ಸ್ 10ಆರ್ ಬೈಕ್ ಗಳಿಗೆ ಪೈಪೋಟಿ ನೀಡಲಿದೆ.

Read more on yamaha r1
English summary
2018 Yamaha R1 Price Reduced By Rs 2.57 Lakh.
Story first published: Friday, March 23, 2018, 11:25 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark