ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

Posted By:

ಹೊಸ ಬೈಕ್ ಖರೀದಿಗಿಂತ ಅದರ ನಿರ್ವಹಣೆ ಇಂದಿನ ಮಟ್ಟಿಗೆ ಅಷ್ಟು ಸುಲಭವಲ್ಲ. ಯಾಕೆಂದ್ರೆ ಪೆಟ್ರೋಲ್ ಬೆಲೆ ಏರಿಕೆಯು ವಾಹನ ಸವಾರರನ್ನು ಕಂಗಾಲಾಗುವಂತೆ ಮಾಡಿರುವುದಲ್ಲದೇ ಬೈಕ್ ಸವಾರಿಯೇ ಬೇಡ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಿರುವ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಇತ್ತೊಂದು ಸಮಸ್ಯೆಗೆ ಮುಕ್ತಿ ಎಂದ್ರೆ ತಪ್ಪಾಗುವುದಿಲ್ಲ.

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

ಇದೇ ಉದ್ದೇಶದಿಂದ ಕೊಯಮತ್ತೂರು ಮೂಲದ ಆಂಪಿಯರ್ ಸಂಸ್ಥೆಯು ಅತಿ ಕಡಿಮೆಯಲ್ಲಿ ಎರಡು ವಿನೂತನ ಸ್ಕೂಟರ್ ಮಾದರಿಗಳನ್ನು ಪರಿಚಯಿಸಿದ್ದು, ಹೊಸ ಸ್ಕೂಟರ್‌ಗಳ ಬೆಲೆ ಮತ್ತು ವೈಶಿಷ್ಟ್ಯತೆಗಳನ್ನು ತಿಳಿದುಕೊಂಡಲ್ಲಿ ನೀವು ಕೂಡಾ ಈ ಹೊಸ ಸ್ಕೂಟರ್‌ ಅನ್ನು ಖರೀದಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

ಆಂಪಿಯರ್ ಸಂಸ್ಥೆಯು ಪರಿಚಯಿಸಿರುವ ವಿ48 ಮತ್ತು ರಿಯೋ ಲಿ-ಅಯಾನ್ ಎನ್ನುವ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಾಗಿದ್ದು, ಹೊಸ ಸ್ಕೂಟರ್‌ಗಳು ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಹೊಂದಿರುವುದು ಸ್ಕೂಟರ್‌ಗಳ ಗುಣಮಟ್ಟ ಸೂಚಿಸುತ್ತದೆ.

ಆಂಪಿಯರ್ ಹೊಸ ಸ್ಕೂಟರ್‌ಗಳ ಬೆಲೆಗಳು

ವಿ48 - ರೂ.38,000

ರಿಯೋ ಲಿ-ಅಯಾನ್ - ರೂ. 46,000

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

ಸ್ಕೂಟರ್ ವೈಶಿಷ್ಟ್ಯತೆ

250ಡಬ್ಲ್ಯು ಬ್ರೂಶ್‌ಲೆಸ್ ಡಿಸಿ ಮೋಟಾರ್ ಹೊಂದಿರುವ ವಿ48 ಮತ್ತು ರಿಯೋ ಲಿ-ಅಯಾನ್ ಸ್ಕೂಟರ್‌ಗಳು ಅತ್ಯುತ್ತಮ ಬ್ಯಾಟರಿ ಪ್ಯಾಕ್ ಹೊಂದಿದ್ದು, ವಿ48 ಸ್ಕೂಟರ್‌ಗಳಲ್ಲಿ 48ವಿ ಲೀಥಿಯಂ ಅಲಾಯ್ ಬ್ಯಾಟರಿ ಬಳಕೆಯೊಂದಿಗೆ ಉತ್ತಮ ಚಾರ್ಜ್ ಒದಗಿಸಬಲ್ಲದು.

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

ಹೀಗಾಗಿ ರಿಯೋ ಲಿ-ಅಯಾನ್ ಸ್ಕೂಟರ್‌ಗಳು 120 ಕೆಜಿ ತೂಕ ಪಡೆದುಕೊಂಡಿದಲ್ಲಿ ವಿ48 ಸ್ಕೂಟರ್‌ಗಳು 100 ಕೆಜಿ ಭಾರ ಹೊಂದಿದ್ದು, ಇದರ ಜೊತೆಗೆ ಹೊಸ ನಮೂನೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಾಣ ಮಾಡುವ ಆಂಪಿಯರ್ ಸಂಸ್ಥೆಯು ತನ್ನ ಸ್ಕೂಟರ್‌ ಮಾದರಿಗಳಲ್ಲಿ ವೇಗದ ಪ್ರಮಾಣವನ್ನು ಗರಿಷ್ಠವಾಗಿ ಪ್ರತಿ ಗಂಟೆಗೆ 60 ರಿಂದ 70 ಕಿ.ಮಿ ವೇಗದಲ್ಲಿ ಮಾತ್ರ ಒದಗಿಸುತ್ತಿದೆ.

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

ಇನ್ನು ಗೃಹಣಿಯರು ಮತ್ತು ಹಿರಿಯ ನಾಗರಿಕರು ಬಳಕೆಗೆ ಅನುಕೂಲಕರವಾಗುವಂತೆ ಅಭಿವೃದ್ಧಿ ಮಾಡಲಾಗಿರುವ ವಿ48 ಮತ್ತು ರಿಯೋ ಲಿ-ಅಯಾನ್ ಸ್ಕೂಟರ್‌ಗಳು ಪ್ರತಿ ಗಂಟೆಗೆ 25 ಕಿ.ಮೀ ವೇಗದಲ್ಲಿ ಮಾತ್ರ ಚಲಿಸಬಲ್ಲ ಸಾಮರ್ಥ್ಯ ಹೊಂದಿವೆ ಎಂದು ಆಂಪಿಯರ್ ಸಂಸ್ಥೆ ಹೇಳಿಕೊಂಡಿದೆ.

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

ಇದಲ್ಲದೇ ಈ ಸ್ಕೂಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ತೊಂದರೆಯನ್ನು ಹೊಗಲಾಡಿಸಲು ಹೊಸ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗಿದ್ದು, ಚಾರ್ಜಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಬ್ಯಾಟರಿ ಪ್ಯಾಕ್‌ಗಳನ್ನು ತೈವಾನ್ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಆಂಪಿಯರ್

ಈ ಸ್ಕೂಟರ್ ಚಾಲನೆಗೆ ಬೇಡ ಲೈಸೆನ್ಸ್...!!

ಹೌದು, ಆಂಪಿಯರ್ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಸ್ಕೂಟರ್ ಚಾಲನೆ ಮಾಡಲು ಬೈಕ್ ನೋಂದಣಿಯಾಗಲಿ, ಸ್ಕೂಟರ್ ಚಾಲನೆ ಮಾಡಲು ಡ್ರೈವಿಂಗ್ ಲೆಸೆನ್ಸ್ ಆಗಲಿ ಬೇಕಿಲ್ಲ. ಇದಕ್ಕೆ ಕಾರಣ, ಇವು ಸ್ಕೂಟರ್‌ಗಳಂತೆ ಇದ್ದರೂ ಆಂಪಿಯರ್ ಸಂಸ್ಥೆಯ ಪ್ರಕಾರ ಇವು ಎಲೆಕ್ಟ್ರಿಕ್ ಸೈಕಲ್ ಮಾದರಿಗಳೆಂದು ಪರಿಗಣಿಸಲಾಗುತ್ತಿದೆ.

English summary
Ampere V48 and Reo Li-Ion Electric Scooters Launched In India.
Story first published: Friday, May 18, 2018, 11:34 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark