ಆಟೋ ಎಕ್ಸ್ ಪೋ 2018: ಬಿಡುಗಡೆಗೊಂಡ ಎಪ್ರಿಲಿಯಾ ಎಸ್ಆರ್ 125 ಸಿಸಿ ಸ್ಕೂಟರ್

Posted By: Rahul

ಇಟಾಲಿಯನ್ ಮೂಲದ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆಯಾದ ಎಪ್ರಿಲಿಯಾ ತನ್ನ ಜನಪ್ರಿಯ ಎಸ್ಆರ್ 150 ಸ್ಕೂಟರ್ ಸರಣಿಯಲ್ಲಿ 125 ಸಿಸಿ ಸಾಮರ್ಥ್ಯದ ಮತ್ತೊಂದು ಮಾದರಿಯನ್ನು 2018ರ ಆಟೋ ಎಕ್ಸ್ ಪೋದಲ್ಲಿ ಭರ್ಜರಿಯಾಗಿ ಬಿಡುಗಡೆ ಮಾಡಿದೆ.

ಆಟೊ ಎಕ್ಸ್ ಪೊ 2018: ಬಿಡುಗಡೆಗೊಂಡ ಎಪ್ರಿಲಿಯಾ ಎಸ್ಆರ್ 125 ಸಿಸಿ ಸ್ಕೂಟರ್

ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಈ ಬಾರಿಯ 2018ರ ಆಟೋ ಎಕ್ಸ್ ಪೋ ದಲ್ಲಿ ವಿವಿಧ ಮಾದರಿಯ ಸ್ಕೂಟರ್‌ಗಳು ಬಿಡುಗಡೆ ಹೊಂದುತ್ತಿದ್ದು, ಎಪ್ರಿಲಿಯಾ ಬಿಡುಗಡೆ ಮಾಡಿರುವ 125 ಸ್ಕೂಟರ್ ಬೆಲೆಯು ಎಕ್ಸ್ ಶೋರೂಂಗಳ ಪ್ರಕಾರ ರೂ. 65,310ಕ್ಕೆ ಖರೀದಿಗೆ ಲಭ್ಯವಾಗಿದೆ.

ಆಟೊ ಎಕ್ಸ್ ಪೊ 2018: ಬಿಡುಗಡೆಗೊಂಡ ಎಪ್ರಿಲಿಯಾ ಎಸ್ಆರ್ 125 ಸಿಸಿ ಸ್ಕೂಟರ್

ಎಂಜಿನ್ ಸಾಮರ್ಥ್ಯ

ಎಸ್ಆರ್ 125 ಮಾದರಿಗಳು 124-ಸಿಸಿ 3-ವಾಲ್ವೆ, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 9.46-ಬಿಹೆಚ್‌ಪಿ ಮತ್ತು 8.2-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಎಂಜಿನ್ ಸಿವಿಟಿ ಗೇರ್-ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, 7 ಲೀಟರ್ ಫ್ಯುಲ್ ಟ್ಯಾಂಕ್ ಹೊಂದಿದೆ.

ಆಟೊ ಎಕ್ಸ್ ಪೊ 2018: ಬಿಡುಗಡೆಗೊಂಡ ಎಪ್ರಿಲಿಯಾ ಎಸ್ಆರ್ 125 ಸಿಸಿ ಸ್ಕೂಟರ್

ಸ್ಕೂಟರ್ ವಿನ್ಯಾಸಗಳು

ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳು ಟೆಲಿಸ್ಕೊಪಿಕ್ ಹೈಡ್ರಾಲಿಕ್ ಫೋರ್ಕ್ಸ್ ಮತ್ತು ಮೊನೊಶಾರ್ಕ್ ರಿರ್ ಅನ್ನು ಹೊಂದಿದ್ದು, 200-ಎಂಎಂ ಡಿಸ್ಕ್ ಬ್ರೇಕ್ ಮತ್ತು 140-ಎಂಎಂ ಡ್ರಮ್ ಬ್ರೇಕ್ ಪಡೆದಿದೆ. ಜೊತೆಗೆ 14 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.

ಆಟೊ ಎಕ್ಸ್ ಪೊ 2018: ಬಿಡುಗಡೆಗೊಂಡ ಎಪ್ರಿಲಿಯಾ ಎಸ್ಆರ್ 125 ಸಿಸಿ ಸ್ಕೂಟರ್

ಇದಲ್ಲದೇ ಹೊಸ ಎಪ್ರಿಲಿಯಾ ಎಸ್ಆರ್ 125 ಸ್ಕೂಟರ್‌ಗಳು ತನ್ನದೆಯಾದ ವಿಶಿಷ್ಟ ಗ್ರಾಫಿಕ್ಸ್ ಮತ್ತು ನೀಲಿ ಹಾಗು ಸಿಲ್ವರ್ ಎರಡು ಬಣ್ಣಗಳನ್ನು ಪದೆದುಕೊಂಡಿದ್ದು, ಮುಂಭಾಗದ ಟ್ವಿನ್ ಪೊಡ್, ಫ್ರಂಟ್ ಎಪ್ರಾನ್ ಇಂಡಿಕೇಟರ್‌ರ್ಸ್ ಹೊಸ ಲುಕ್ ನೀಡಿವೆ.

ಆಟೊ ಎಕ್ಸ್ ಪೊ 2018: ಬಿಡುಗಡೆಗೊಂಡ ಎಪ್ರಿಲಿಯಾ ಎಸ್ಆರ್ 125 ಸಿಸಿ ಸ್ಕೂಟರ್

ಜೊತೆಗೆ 14ಇಂಚಿನ ಅಲಾಯ್ ಚಕ್ರಗಳು ಅಳವಡಿಕೆ ಇದ್ದು, 2018 ಆಟೋ ಎಕ್ಸ್ ಪೋ ನಂತರ ಖರೀದಿ ಲಭ್ಯವಾಗಲಿವೆ. ಈ ಮೂಲಕ ಹೊಸದಾಗಿ ಬಿಡುಗಡೆಯಾದ ಟಿವಿಎಸ್ ಎನ್ ಟಾರ್ಕ್ 125 ಮತ್ತು ಬಿಡುಗಡೆಯಾಗಲಿರುವ ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್‌ಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿವೆ.

Trending On DriveSpark Kannada:

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಆಟೋ ಎಕ್ಸ್ ಪೋ 2018: ಸುಜುಕಿ ಬರ್ಗಮನ್ ಸ್ಟ್ರೀಟ್ ಸ್ಕೂಟರ್ ಬೆಲೆ, ಬಿಡುಗಡೆ ಮಾಹಿತಿ ಬಹಿರಂಗ

ಅಪಘಾತದ ನಂತರ ಶವವನ್ನು 70 ಕಿಮಿ ಎಳೆದುಕೊಂಡು ಹೊಯ್ತು ಕೆಎಸ್ಆರ್‌ಟಿಸಿ ಬಸ್

Read more on aprilia auto expo 2018
English summary
Aprilia SR 125 Launched At Rs 65,310 - Specifications, Features & Images.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark